Malpe: ಕೊಡವೂರು ಹಿರಣ್ಯಧಾಮ ಲೇಔಟ್; ಉರಿಯದ ದಾರಿದೀಪ, ತ್ಯಾಜ್ಯ ಸಮಸ್ಯೆ
Team Udayavani, Sep 18, 2024, 3:18 PM IST
ಮಲ್ಪೆ: ತೆಂಕನಿಡಿಯೂರು ಗ್ರಾ. ಪಂ. ವ್ಯಾಪ್ತಿಯ ಲಕ್ಷ್ಮೀನಗರ ರಸ್ತೆಗೆ ತಾಗಿಕೊಂಡಿರುವ ಹಿರಣ್ಯಧಾಮ ಲೇಔಟ್‌ನಲ್ಲಿ ಕಳೆದ ಒಂದು ವರ್ಷದಿಂದ ದಾರಿದೀಪ ಇಲ್ಲದೆ ಕತ್ತಲಲ್ಲಿ ಜನ ತೀರ ಸಂಕಷ್ಟಪಡುವಂತಾಗಿದೆ ಎಂದು
ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
ದಾರಿದೀಪ ಉರಿಯದ ಕಾರಣ ಈ ಜಾಗ ಅನೈತಿಕ ಚಟುವಟಿಕೆಗಳ ಆಶ್ರಯ ತಾಣವಾಗಿದೆ. ನಿತ್ಯ ಸರಿ ರಾತ್ರಿಯಲ್ಲಿ ಇಲ್ಲಿ ಇಂತಹ ಕೆಟ್ಟ ಚಟುವಟಿಕೆಗಳು ನಡೆಯುತ್ತದೆ ಎಂದು ಜನರು ಆರೋಪಿಸಿದ್ದಾರೆ.
ತ್ಯಾಜ್ಯದ ಕೊಂಪೆ:
ಮಾರ್ಗದ ಇಕ್ಕೆಲಗಳಲ್ಲಿ ಕಸದ್ದೇ ರಾಶಿ. ನಿರ್ಜನ ಪ್ರದೇಶದಲ್ಲಿರುವ ಈ ರಸ್ತೆಯ ಎರಡು ಕಡೆಗಳು ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆ. ಈ ರಸ್ತೆಯಲ್ಲಿ ಸಾಗುವಾಗ ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಸ್ಥಿತಿ ಕಳೆದ ಹಲವು ಸಮಯಗಳಿಂದ ಇದೆ. ರಸ್ತೆಯ ಇಕ್ಕೆಲಗಳಲ್ಲಿ ನಿರಂತರವಾಗಿ ಕಸ ಎಸೆಯಲಾಗುತ್ತಿದೆ. ಇಲ್ಲಿ ತ್ಯಾಜ್ಯ ಎಸೆಯುವ ಪರಿಪಾಠ ಇಂದು ನಿನ್ನೆಯದಲ್ಲ. ನಿರಂತವಾಗಿ ಇಲ್ಲಿ ಕಸವನ್ನು ತಂದು ಸುರಿಯಲಾಗುತ್ತಿದೆ. ಮನೆ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿ ತಂದು ಎಸೆಯಲಾಗುತ್ತಿದೆ. ಹಸಿ ಕಸ, ಮೀನು, ಮಾಂಸದ ಚೂರುಗಳು, ಕೊಳೆತ ಪದಾರ್ಥಗಳನ್ನು ಎಸೆಯುವುದರಿಂದ ಬೀದಿನಾಯಿಗಳ ದಂಡೇ ಇಲ್ಲಿ ಸೃಷ್ಟಿಯಾಗಿದೆ. ಮಾತ್ರವಲ್ಲದೆ ನಾಯಿ ಮರಿ,, ಬೆಕ್ಕಿನ ಮರಿಗಳನ್ನು ಇಲ್ಲಿಯೇ ತಂದು ಬಿಡಲಾಗುತ್ತದೆ. ಬಹುತೇಕ ದಾರಿಹೋಕರು ಈ ಗೇಟಿನ ಬಳಿಯೇ ತಮ್ಮ ಬಹಿರ್ದೆಸೆ ಪೂರೈಸುತ್ತಾರೆ. ಸಂಬಂಧಪಟ್ಟ ಆಡಳಿತ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಇಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ.
ಪರಿಹಾರ ಸಿಗುತ್ತಿಲ್ಲ
ಈ ಕುರಿತು ಸಂಬಂಧಿಸಿ ಜಾಗದ ವ್ಯಕ್ತಿಗೆ ದೂರು ನೀಡಿದರೆ ಪಂಚಾಯತ್‌ಗೆ ಹಸ್ತಾಂತರ ಮಾಡಿದ್ದೇವೆ ಎನ್ನುತ್ತಾರೆ. ತೆಂಕನಿಡಿಯೂರು ಗ್ರಾ. ಪಂ. ಈ ಬಗ್ಗೆ ಮನವಿ ಮಾಡಿದರೆ ನಮಗೆ ದಾರಿದೀಪ ರಸ್ತೆ ಇನ್ನೂ ಹಸ್ತಾಂತರವಾಗಿಲ್ಲ ಎಂಬ ಉತ್ತರ ಸಿಗುತ್ತದೆ. ಒಟ್ಟಿನಲ್ಲಿ ಪರಿಹಾರಕ್ಕೆ ಏನು ಮಾಡಬೇಕೆಂದು ತೋಚದಂತಾಗಿದೆ.
-ಹರೀಶ್, ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.