Malpe: ಆಗ ಕೆಸರು, ಈಗ ಧೂಳು!; ಅರ್ಧಕ್ಕೆ ನಿಂತ ಆದಿಉಡುಪಿ-ಮಲ್ಪೆ ರಸ್ತೆ ಕಾಮಗಾರಿಯ ಕಿರಿಕಿರಿ
ಮಳೆಗಾಲದ ಹೊಂಡ ಮುಚ್ಚಲು ಹಾಕಿದ ಜಲ್ಲಿ ಹುಡಿಯಿಂದ ಧೂಳು
Team Udayavani, Sep 24, 2024, 6:23 PM IST
ಮಲ್ಪೆ:ತೀವ್ರ ಮಳೆಯಿಂದ ಕೆಸರುಗದ್ದೆಯಾಗಿದ್ದ ಆದಿಉಡುಪಿ ರಸ್ತೆ ಇದೀಗ ಧೂಳುಮಯವಾಗಿ ಸಾರ್ವಜನಿಕರಿಗೆ ಓಡಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಎನಿಸಿದ ಆದಿಉಡುಪಿ -ಮಲ್ಪೆ ರಸ್ತೆಯ ವಿಸ್ತರಣೆ ಕಾಮಗಾರಿ ಎಂಟು ತಿಂಗಳ ಹಿಂದೆ ಆರಂಭವಾಗಿದೆ. ಆದಿಉಡುಪಿ ಭಾಗದಲ್ಲಿ ಅರ್ಧಂಬರ್ಧ ಕಾಮಗಾರಿ ನಡೆದು ಪ್ರಸ್ತುತ ಧೂಳುಮಯವಾಗಿದೆ.
ಮಳೆಯಲ್ಲಿ ನಿರ್ಮಾಣವಾದ ಹೊಂಡಗಳನ್ನು ಮುಚ್ಚಲು ಹೆದ್ದಾರಿ ಇಲಾಖೆ ಇಲ್ಲಿನ ರಸ್ತೆಗಳಿಗೆ ಸಿಮೆಂಟ್ ಮಿಶ್ರಿತ ಜಲ್ಲಿ ಪುಡಿಗಳನ್ನು ಬಳಸಿದ್ದರಿಂದ ಈಗ ಎಲ್ಲಾ ಕಡೆ ಧೂಳು ಆವರಿಸಿದೆ. ಧೂಳಿನಿಂದಾಗಿ ವಾಹನ ಸವಾರರಲ್ಲದೆ ರಸ್ತೆ ಬದಿಯ ಅಂಗಡಿ ಮುಂಗಟ್ಟು, ಸ್ಥಳೀಯರು ತತ್ತರಿಸಿ ಹೋಗಿದ್ದಾರೆ. ಮಳೆರಾಯ ಗುಂಡಿ ನಿರ್ಮಾಣ ಮಾಡಿದರೆ, ಸಂಬಂಧಪಟ್ಟ ಇಲಾಖೆ ಜನತೆಗೆ ಧೂಳು ನೀಡುತ್ತಿದೆ ಎಂದು ಶಾಪ ಹಾಕುವಂತಾಗಿದೆ. ಧೂಳು ಏಳದಂತೆ ನೀರು ಸಿಂಪಡಿಸಲಾಗುತ್ತಿದೆಯಾದರೂ ಅದು ಸಾಲದಾಗಿದೆ. ಶೀಘ್ರ ರಸ್ತೆ ನಿರ್ಮಿಸುವಂತೆ ನಾಗರಿಕರು ಸಂಬಂಧಪಟ್ಟ ಆಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ.
ಕೆಮ್ಮು, ಉಸಿರಾಟದ ಸಮಸ್ಯೆ
ಇಲ್ಲಿನ ರಸ್ತೆ ಬದಿಯ ಮನೆಯಲ್ಲಿ ವಾಸವಾಗಿ ರುವವರು ಧೂಳಿನಿಂದ ಬೇಸತ್ತು ದಿನವಿಡೀ ಮನೆಗಳ ಬಾಗಿಲು ಮುಚ್ಚಿಕೊಳ್ಳುವಂತಾಗಿದೆ. ಅಂಗಡಿ ಮುಂಗಟ್ಟು, ಹೊಟೇಲ್, ಬೇಕರಿಗಳ ಒಳಗೆ ಧೂಳು ಬರುವುದರಿಂದ ತಿಂಡಿ ತಿನಸುಗಳ ಮೇಲೂ ಪರಿಣಾಮ ಬೀರುತ್ತದೆ. ಆನೇಕರು ಧೂಳಿನಿಂದ ಕೆಮ್ಮು, ಉಸಿರಾಟದ ಸಮಸ್ಯೆಗೆ ಸಿಲುಕಿದ್ದಾರೆ.
ಜನರಿಗೆ ನಿತ್ಯ ಸಂಕಷ್ಟ
ಈ ಭಾಗದಲ್ಲಿ ಸಂಚರಿಸುವ ಜನರು ನಿತ್ಯ ಸಂಕಷ್ಟ ಪಡುವಂತಾಗಿದೆ. ಲಾರಿ ಬಸ್ ಹಿಂದೆ ಹೋದರೆ ಮುಖಕ್ಕೆ ಧೂಳು ರಾಚುವುದರಿಂದ ಆನಿವಾರ್ಯವಾಗಿ ಧೂಳು ಸೇವಿಸಿಕೊಂಡೆ ಓಡಾಡುವಂತಾಗಿದೆ.
– ಭುವನೇಂದ್ರ ಮೈಂದನ್, ಬಂಕೇರಕಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.