ಮಂಗಳೂರು ಐಟಿ ಕಚೇರಿಯ ವಿಭಾಗ ಎತ್ತಂಗಡಿ: ಕಳೆದುಕೊಂಡದ್ದರ ಸಾಲಿಗೆ ಇದೂ ಸೇರದಿರಲಿ
Team Udayavani, Sep 8, 2020, 6:25 AM IST
ಸಾಂದರ್ಭಿಕ ಚಿತ್ರ
ಉಡುಪಿ: ಕರಾವಳಿಗರ ಮೌನ ಮತ್ತು ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಈ ಹಿಂದೆ ಮಂಗಳೂರಿ ನಲ್ಲಿದ್ದ ಕೇಂದ್ರ ಅಬಕಾರಿ ಆಯುಕ್ತರ ಕಚೇರಿ (ಮೇಲ್ಮನವಿ)ಯನ್ನು ಕಳೆದುಕೊಳ್ಳ ಬೇಕಾಯಿತು. ಅದೇ ಸಾಲಿಗೆ ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ (ಪಿಸಿಐಟಿ)ರ ಕಚೇರಿ ಸೇರ್ಪಡೆ ಯಾಗದಿರಲಿ ಎಂಬುದು ಆಶಯ.
ವಿ. ಧನಂಜಯ ಕುಮಾರ್ ಅವರು 1999-2000ನೇ ಸಾಲಿನಲ್ಲಿ ಕೇಂದ್ರ ಸಚಿವರಾಗಿದ್ದಾಗ ಮಂಗಳೂರಿಗೆ ಕೇಂದ್ರ ಅಬಕಾರಿ ಆಯುಕ್ತರ ಕಚೇರಿ (ಮೇಲ್ಮನವಿ) ಮಂಜೂರು ಮಾಡಿದ್ದರು. ಆ ಕಚೇರಿಯು ಈಗಿನ ಆದಾಯ ತೆರಿಗೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು.
2013ರಲ್ಲಿ ಮೈಸೂರು ಚೇಂಬರ್ ಆಫ್ ಕಾಮರ್ಸ್ ಒತ್ತಾಯದ ಮೇರೆಗೆ ಅಬಕಾರಿ ಆಯುಕ್ತರ ಕಚೇರಿ (ಮೇಲ್ಮನವಿ)ಯನ್ನು ಮೈಸೂರಿಗೆ ವರ್ಗಾವಣೆ ಮಾಡಲಾಯಿತು. ಬಳಿಕ ಅದನ್ನು ಬೆಳಗಾವಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಚೇಂಬರ್ ಆಫ್ ಕಾಮರ್ಸ್ ಮತ್ತು ಲೆಕ್ಕ ಪರಿಶೋಧಕರು ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು.
ತೆರಿಗೆದಾರರಿಗೆ ಸಂಕಷ್ಟ
ಆ ಬಳಿಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 5 ಸಾವಿರಕ್ಕೂ ಅಧಿಕ ತೆರಿಗೆದಾರರು ಜಿಎಸ್‌ಟಿ ಸಂಬಂಧಿ ಮೇಲ್ಮನವಿಗಳಿಗೆ ಮೈಸೂರು ಮತ್ತು ಬೆಳಗಾವಿಯನ್ನು ಅವಲಂಬಿಸ ಬೇಕಾಯಿತು. ಈಗ ಪಿಸಿಐಟಿ ಕಚೇರಿಯು ಗೋವಾದೊಂದಿಗೆ ವಿಲೀನವಾದರೆ ಕರಾವಳಿಯ ತೆರಿಗೆ ದಾರರು ಪ್ರಮುಖ ತೆರಿಗೆ ಕೆಲಸಗಳಿಗೆ ಹೊರ ರಾಜ್ಯವನ್ನು ನೆಚ್ಚಿಕೊಳ್ಳಬೇಕಾಗುತ್ತದೆ.
ಹೋರಾಟವೇ ಅಂತಿಮ
ಮಂಗಳೂರು ಪಿಸಿಐಟಿ ಕಚೇರಿಯನ್ನು ಉಳಿಸಿ ಕೊಳ್ಳುವ ಜವಾಬ್ದಾರಿ ಕರಾವಳಿಯ ಸಂಸದರು, ಶಾಸಕರು, ಸಚಿವರ ಮೇಲಿದೆ. ನಿರ್ಲಕ್ಷ್ಯ ವಹಿಸಿದರೆ 4 ಲಕ್ಷ ತೆರಿಗೆದಾರರು ಭವಿಷ್ಯದಲ್ಲಿ ಆಕ್ಷೇಪಿತ ತೆರಿಗೆಗೆ ಸಂಬಂಧಿಸಿದ ವ್ಯಾಜ್ಯಗಳಿಗೆ ಗೋವಾದತ್ತ ಎಡತಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
ಕೇಂದ್ರ ಅಬಕಾರಿ ಆಯುಕ್ತರ ಕಚೇರಿ (ಮೇಲ್ಮನವಿ)ಯನ್ನು ವರ್ಗಾಯಿಸಿದ ಬಳಿಕ ತೆರಿಗೆದಾರರು ಅಲೆದಾಡುವಂತಾಯಿತು. ಈಗ ನೇರ ತೆರಿಗೆದಾರರು ಹೋರಾಟ ನಡೆಸದಿದ್ದರೆ ಮತ್ತೂಮ್ಮೆ ಅನ್ಯಾಯವಾಗುವುದು ಖಂಡಿತ.
-ಕೇಶವ ಎನ್, ಎಐಸಿಎಎ ಮಾಜಿ ಅಧ್ಯಕ್ಷ, ಮಂಗಳೂರು ಶಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.