Manipal: ಅಪಘಾತ ತಡೆಯಲು ಹೀಗೆ ಮಾಡಿ!

ಪರ್ಕಳ ತಿರುವಿನಲ್ಲಿ ಸ್ಪೀಡ್‌ ಬ್ರೇಕರ್‌, ಹಂಪ್ಸ್‌ ಹಾಕಿದರೆ ಅನುಕೂಲ: ಜನರ ಸಲಹೆ

Team Udayavani, Dec 26, 2024, 2:38 PM IST

7

ಮಣಿಪಾಲ: ರಾ.ಹೆ.169ಎ ಮಣಿಪಾಲದಿಂದ ಪರ್ಕಳಕ್ಕೆ ಹೋಗುವಾಗ ಸಿಗುವ ಈಶ್ವರ ನಗರದ ಪಂಪ್‌ ಹೌಸ್‌ ಎದುರು ಪದೇಪದೆ ಅಪಘಾತ ನಡೆಯುತ್ತಿದ್ದು, ಇದನ್ನು ತಡೆಯಲು ತುರ್ತಾಗಿ ಏನಾದರೂ ಕ್ರಮಗಳನ್ನು ಕೈಗೊಳ್ಳಲೇಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಭೂಸ್ವಾಧೀನ ಸಹಿತ ಕಾನೂನು ತೊಡಗಿನಿಂದಾಗಿ ಸದ್ಯಕ್ಕೆ ಈಶ್ವರ ನಗರದಿಂದ ಪರ್ಕಳವನ್ನು ಸಂಪರ್ಕಿಸುವ ಹೆದ್ದಾರಿ ಕಾಮಗಾರಿಗೆ ತಡೆಯಾಗಿದೆ. ಈಗ ಈಶ್ವರನಗರದವರೆಗೆ ನೇರವಾದ ಚತುಷ್ಪಥ ರಸ್ತೆ ಇದೆ. ಮುಂದಿನ ಹೊಸ ರಸ್ತೆ ಕಾಮಗಾರಿಯೂ ಇದೇ ನೇರದಲ್ಲಿ ನಡೆಯಬೇಕಾಗಿದೆ. ಆದರೆ, ಜಾಗ ಬಿಟ್ಟುಕೊಡದ ಕಾರಣ ಅಲ್ಲಿಂದ ಬಲಕ್ಕೆ ಡೈವರ್ಷನ್‌ ಪಡೆದು ಇಳಿಜಾರಿನಲ್ಲಿ ಇಳಿದು, ಮೇಲೆ ಹತ್ತಿ ಹೊಸ ಮಾರ್ಗವನ್ನು ಸಂಪರ್ಕಿಸಬೇಕು. ಮಣಿಪಾಲದಿಂದ ಈಶ್ವರನಗರ ಮೂಲಕ ಸಾಗುವ ರಸ್ತೆಯಲ್ಲಿ ವೇಗವಾಗಿ ಸಾಗುವ ವಾಹನಗಳಿಗೆ ಒಮ್ಮಿಂದೊಮ್ಮೆ ಡೈವರ್ಷನ್‌ ಇರುವುದು ಅರಿವಿಗೆ ಬಾರದೆ ನೇರವಾಗಿ ಸಾಗಿ ಅಲ್ಲಿರುವ ಪಂಪ್‌ ಹೌಸ್‌ಗೆ ಡಿಕ್ಕಿ ಹೊಡೆಯುವುದು, ಪಲ್ಟಿ ಹೊಡೆಯುವುದು ನಡೆಯುತ್ತಿದೆ. ಈ ವರ್ಷದಲ್ಲೇ 9 ಕಾರುಗಳು ಡಿಕ್ಕಿ ಹೊಡೆದು ಹಲವಾರು ಮಂದಿ ಗಾಯಗೊಂಡಿದ್ದಾರೆ.

ಪಂಪ್‌ಹೌಸ್‌ ಸಮೀಪಿಸುತ್ತಿದ್ದಂತೆ ಚತುಷ್ಪಥ ಕೊನೆಯಾಗಿ ಕೂಡಲೇ ರಸ್ತೆ ಸಣ್ಣದಾಗುತ್ತದೆ, ತಿರುವು ಸಿಗುತ್ತದೆ. ಹೊಸದಾಗಿ ಈ ರಸ್ತೆಯಲ್ಲಿ ಸಂಚಾರ ಮಾಡುವವರಿಗೆ ಅದರ ಅರಿವು ಇಲ್ಲದೇ ಇರುವುದರಿಂದ ನೇರವಾಗಿ ಪಂಪ್‌ಹೌಸ್‌ಗೆ ಹೋಗಿ ಡಿಕ್ಕಿ ಹೊಡೆಯುತ್ತಿದ್ದಾರೆ. ಈವರೆಗೆ ಅಪಘಾತ ಆಗಿರುವ ಎಲ್ಲ ವಾಹನಗಳು ಹೊರ ಜಿಲ್ಲೆಗಳದ್ದಾಗಿವೆ.

ಹೆದ್ದಾರಿ ಇಲಾಖೆಯವರು ಸರಿಯಾದ ಡೈವರ್ಷನ್‌ ಫ‌ಲಕ, ಹಂಪ್ಸ್‌ ಹಾಕುವ ಮೂಲಕ ಅಪಘಾತ ತಡೆಯಬಹುದು ಎನ್ನುವುದು ಸ್ಥಳೀಯರಾದ ಪರ್ಕಳದ ಎಚ್‌.ಎ.ಕೆ. ಪೈ ಅವರ ಸಲಹೆ.

ಏನೇನು ಮಾಡಬಹುದು?
1. ಮಣಿಪಾಲಕ್ಕಿಂತ ಸ್ವಲ್ಪ ಮುಂದೆ ಹೋಗುವಾಗಲೇ ಅಪಘಾತ ವಲಯ/ ನಿಧಾನವಾಗಿ ಚಲಿಸಿ/ಡೈವ ರ್ಷನ್‌ ಇದೆ ಎಂಬ ಎಚ್ಚರಿಕೆ ಫ‌ಲಕ ಹಾಕಬಹುದು.
2. ಅಪಘಾತ ನಡೆಯುವ ಜಾಗದಲ್ಲಿ ಎಚ್ಚರಿಕೆ ಫ‌ಲಕ ಇದ್ದರೂ ಅದಕ್ಕೇ ಢಿಕ್ಕಿ ಹೊಡೆದ ಪ್ರಸಂಗವೂ ನಡೆದಿದೆ. ಹೀಗಾಗಿ ಬೋರ್ಡ್‌ ದೊಡ್ಡದಾಗಿರಬೇಕು.
3. ಕಾಂಕ್ರಿಟ್‌ ರಸ್ತೆ ಮುಕ್ತಾಯವಾಗುವ ಮುನ್ನವೇ ಸ್ಪೀಡ್‌ ಬ್ರೇಕರ್‌ ಅಳವಡಿಸಿದರೆ ತಕ್ಕ ಮಟ್ಟಿಗೆ ವಾಹನ ಗಳು ಚಾಲಕರ ನಿಯಂತ್ರಣಕ್ಕೆ ಬರಲು ಸಾಧ್ಯವಿದೆ.

ಟಾಪ್ ನ್ಯೂಸ್

HD-Kumaraswamy

Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ

Sonia-Ghandi

Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Pushpa 2: 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Padubidri: ಕಾರು ಢಿಕ್ಕಿ; ಪಾದಚಾರಿ ಸಾವು

Padubidri: ಕಾರು ಢಿಕ್ಕಿ; ಪಾದಚಾರಿ ಸಾವು

accident

Shirva: ರಿಕ್ಷಾ ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

6

ಒಲವಿನ ಊಟಕ್ಕೆ ಅಕ್ಕಂದಿರು ಸಿದ್ಧ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

HD-Kumaraswamy

Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ

Sonia-Ghandi

Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.