Manipal: ಇಲ್ಲಿ ಅಕ್ಷರ ಪ್ರೀತಿ ಜತೆಗೆ ಬದುಕಿನ ಕಲಿಕೆಗೆ ಒತ್ತು
ಮಣಿಪಾಲದಲ್ಲೊಂದು ಮಕ್ಕಳಿಗೆಂದೇ ರೂಪಿಸಲ್ಪಟ್ಟ ವಿಶೇಷ ಮಾದರಿ ಗ್ರಂಥಾಲಯ
Team Udayavani, Dec 3, 2024, 5:07 PM IST
ಮಣಿಪಾಲ: ಅಕ್ಷರ ಪ್ರೀತಿಗೆ ನಿತ್ಯ ಸೇವೆ ಒದಗಿಸುವ ಗ್ರಂಥಾಲಯಗಳು ಜ್ಞಾನ ತೀರಿಸುವ ಶ್ರದ್ಧಾ ಕೇಂದ್ರವೂ ಆಗಿದೆ. ಬಹುತೇಕ ಗ್ರಂಥಾ ಲಯಗಳು ಓದುಗರ ಸೇವೆಗಷ್ಟೇ ಸೀಮಿತವಾಗಿದ್ದರೆ, ಮಣಿಪಾಲದ ಈ ಗ್ರಂಥಾಲಯವು ಮಕ್ಕಳಿಗೆ ಓದಿನ ಜತೆಗೆ ಜೀವನ ಪಾಠ ಕಲಿಸುತ್ತಿದೆ. ಮಕ್ಕಳಿಗೆ ಬಾಲ್ಯದಲ್ಲಿ ಏನು ಸಿಗಬೇಕು ಅದೆಲ್ಲವೂ ಮಕ್ಕಳ ಅಭಿರುಚಿಗೆ ತಕ್ಕಂತೆ ನೀಡುವುದು ಗ್ರಂಥಾಲಯದ ವಿಶೇಷತೆಯಾಗಿದೆ.
ಇಲ್ಲಿನ ಅನಂತನಗರದ ಪರ್ಪಲ್ ಸ್ಪೇಸ್ ಗ್ರಂಥಾಲಯ 2018ರಲ್ಲಿ ತೆರೆದುಕೊಂಡಿದೆ. ಇಲ್ಲಿ 7 ಸಾವಿರ ಪುಸ್ತಕ ಸಂಗ್ರಹವಿದೆ. ಕೇವಲ ಪುಸ್ತಕಗಳ ಓದುವಿಕೆಗಾಗಿ ಗ್ರಂಥಾಲಯದೆಡೆಗೆ ಮಕ್ಕಳು ಬರುವುದು ಇಂದಿನ ದಿನಗಳಲ್ಲಿ ಕಷ್ಟ ಎಂದರಿತು, ಪುಸ್ತಕ ಓದಿನ ಜತೆಗೆ ಜೀವನ ಪಾಠ ಕಲಿಸುವ ಇತರೆಲ್ಲ ಚಟುವಟಿಕೆಗಳನ್ನು ಒದಗಿಸುತ್ತಿರುವುದು ಇಲ್ಲಿನ ವಿಶೇಷ. ಮಕ್ಕಳ ಅಭಿರುಚಿಗೆ ತಕ್ಕಂತೆ ಓದಿಗೆ ಪೂರಕವಾಗಿ ಹಲವು ಚಟುವಟಿಕೆಗಳು ಇಲ್ಲಿವೆ. ಅಕ್ಷರ ಜ್ಞಾನದ ಜತೆಗೆ ಬದುಕುವ ಕಲೆ, ಉದ್ಯೋಗಕ್ಕೆ ಪೂರಕವಾದ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ.
ಗ್ರಂಥಾಲಯದಲ್ಲಿರುವ ಚಟುವಟಿಕೆಗಳು
ಗ್ರಂಥಾಲಯದಲ್ಲಿ ಫೋನಿಕ್ಸ್ ಬೋರ್ಡ್ ಆಟಗಳು, ಕಾಗುಣಿತ ಮತ್ತು ಓದುವಿಕೆ ಸಿದ್ಧತೆ, ಡೇ ಕೇರ್ ಬುಕ್ ಕ್ಲಬ್, ಲೆಗೋ ಪದಬಂಧ, ತಾರ್ಕಿಕ ಆಟಗಳು, ಏಕಾಗ್ರತೆ ಆಟಗಳು, ರಜಾ ಶಿಬಿರಗಳು ಕಲೆ ಮತ್ತು ಕರಕುಶಲ ವಸ್ತು ತಯಾರಿಕೆ, ಸಂಗೀತ, ನೃತ್ಯ ಹಾಗೂ ವಿವಿಧ ರೀತಿಯ ಚಟುವಟಿಕೆಗಳು ಇಲ್ಲಿವೆ. ಬುಕ್ ರೈಟಿಂಗ್, ಎಲೆಕ್ಟ್ರಾನಿಕ್ಸ್ ತರಗತಿ, ಚಿಟ್ಟೆ, ಪಕ್ಷಿ ಪ್ರಬೇಧ ಗುರುತಿಸುವಿಕೆ, ಪ್ರಾಣಿ, ಪ್ರಕೃತಿ ವೀಕ್ಷಣೆ ಜತೆಗೆ ಸ್ವತ್ಛತೆಯ ಪಾಠ ಸಹಿತ ನೈಸರ್ಗಿಕ, ಪರಿಸರ ಪೂರಕ ಕಲಿಕೆಯನ್ನು ಓದಿನ ಜತೆಗೆ ನೀಡಲಾಗುತ್ತದೆ.
ಮಕ್ಕಳ, ಪೋಷಕರ ಹುಟ್ಟು ಹಬ್ಬ ಆಚರಣೆ, ಹಿಂದಿ ದಿನಾಚರಣೆ ಹೀಗೆ ವಿವಿಧ ಚಟುವಟಿಕೆಗಳನ್ನು ಆಯಾ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಇಲ್ಲಿ ನಡೆಸಲಾಗುತ್ತದೆ. ಪುಸ್ತಕ ಓದುವುದರೊಂದಿಗೆ ಅವರಿಗಿಷ್ಟವಾದ ಅಭಿರುಚಿಯ ಜ್ಞಾನವೂ ಇಲ್ಲಿ ದೊರಕುತ್ತದೆ. ಪ್ರಸ್ತುತ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಿದ್ದು, ಊಟ-ತಿಂಡಿ ಎಲ್ಲವನ್ನು ಮರೆತು ಮೊಬೈಲ್, ಟಿವಿ ವೀಕ್ಷಣೆಯಲ್ಲಿ ತಲ್ಲೀನರಾಗಿರುತ್ತಾರೆ. ರೀಲ್ಸ್ ಮಾಡುವುದು, ನೋಡುವುದರಲ್ಲೇ ದಿನ ಕಳೆಯುತ್ತಿರುತ್ತಾರೆ. ಇವುಗಳಿಂದ ಮಕ್ಕಳನ್ನು ಹೊರತರುವುದೇ ಕಷ್ಟ ಎನ್ನುವ ಆತಂಕ ಪೋಷಕರನ್ನು ಕಾಡುತ್ತಿದೆ. ಅಲ್ಲದೆ ಇಂತಹ ಸ್ಥಿತಿ ಮಕ್ಕಳ ಮಾನಸಿಕತೆ ಮೇಲೆಯೂ ಪರಿಣಾಮ ಬೀರುತ್ತಿದೆ. ಇದೆಲ್ಲದರ ಪರಿಹಾರವಾಗಿ ಪ್ರಾಯೋಗಿಕ ಚಟುವಟಿಕೆ ಮೂಲಕ ಮಕ್ಕಳನ್ನು ಗ್ರಂಥಾಲಯದೆಡೆಗೆ ಆಕರ್ಷಿಸುವ ವಿನೂತನ ಪ್ರಯತ್ನ ಈ ಗ್ರಂಥಾಲಯದ್ದಾಗಿದೆ.
ಒಡಿಶಾದ ಮಹಿಳೆ
ಒಡಿಶಾ ಮೂಲದವರಾದ ಪಲ್ಲವಿ ಬೆಹರಾ ಅವರು ಈ ಗ್ರಂಥಾಲಯದ ಮುಖ್ಯಸ್ಥರು. ಇವರು ಗುರುಕುಲ ಮಾದರಿ ಶಿಕ್ಷಣದ ಬಗ್ಗೆ ಆಸಕ್ತಿ ಹೊಂದಿದ್ದು ತಮ್ಮ ಇಬ್ಬರು ಮಕ್ಕಳಿಗೂ ಇದೇ ಮಾದರಿಯಲ್ಲಿ ಜೀವನ ಪಾಠದ ಶಿಕ್ಷಣ ನೀಡಿದ್ದಾರೆ. ಇವರ ಪತಿ ಆ್ಯಂಟನಿ ಮಾಹೆ ವಿ.ವಿ.ಯಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪವಿತ್ರಾರವರು ಕನ್ನಡ ಭಾಷೆಯನ್ನು ಸುಲಲಿತವಾಗಿ ಕಲಿತುಕೊಂಡಿದ್ದಾರೆ. ಗ್ರಂಥಾಲಯದಲ್ಲಿ ವಿವಿಧ ಚಟುವಟಿಕೆ ನಡೆಸಲು 5 ಮಂದಿ ಸಿಬಂದಿಯನ್ನು ನೇಮಿಸಿಕೊಂಡಿದ್ದಾರೆ.
ಒತ್ತಡದಿಂದ ಹೊರತರಬೇಕು
ಪ್ರಸ್ತುತ ಓದುವ ಅಭಿರುಚಿಯೇ ಮಾಯವಾಗಿದೆ. ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಆತ್ಮಹತ್ಯೆಯಂತಹ ಅಲೋಚನೆಗಳಿಗೆ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಪೋಷಕರು ಬಾಲ್ಯದಿಂದಲೇ ಮಕ್ಕಳ ಅಭಿರುಚಿಯನ್ನು ಗುರುತಿಸಿ ಅದನ್ನು ಪೋಷಿಸಬೇಕು. ಓದಿನ ಜತೆಗೆ ಅವರ ಆಸಕ್ತಿಯನ್ನು ಬೆಂಬಲಿಸಿ, ಬೆಳೆಸಿದರೆ ಭವಿಷ್ಯ ಚೆನ್ನಾಗಿರಲಿದೆ. ಓದುತ್ತ ಕಲಿಯುವ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿ ಇಂದಿಗೆ ಅವಶ್ಯ.
-ಪಲ್ಲವಿ ಬೆಹರಾ, ಗ್ರಂಥಾಲಯ ಮುಖ್ಯಸ್ಥೆ
ಕಸದಿಂದ ರಸ ಪಾಠ
ಗ್ರಂಥಾಲಯದೊಳಗೆ ಪುಸ್ತಕ ಸಂಗ್ರಹಿಸಿಡಲು ಯಾವುದೇ ವಿಶೇಷ ಬುಕ್ ರ್ಯಾಕ್‌ಗಳಿಲ್ಲ. ಬಳಸಿ ಬಿಸಾಡಬಹುದಾದ ವಸ್ತುಗಳಾದ ತರಕಾರಿ ಇರಿಸುವ ಪೆಟ್ಟಿಗೆ, ಪೇಪರ್‌ನಿಂದ ರಚಿಸಲ್ಪಟ್ಟ ಪರಿಕರ, ಬುಟ್ಟಿ, ಬಿಸಾಕಿದ ಪೈಂಟ್‌ನ ಖಾಲಿ ಬಕೆಟ್‌ಗಳು ಇತ್ಯಾದಿಗಳನ್ನು ವಿನ್ಯಾಸಗೊಳಿಸಿ ಪುಸ್ತಕಗಳನ್ನು ಜೋಡಿಸಿಡಲಾಗಿದೆ. ಗ್ರಂಥಾಲಯದಲ್ಲಿ ಬಳಸಿದ ಪ್ರತಿಯೊಂದು ವಸ್ತುವು ತ್ಯಾಜ್ಯ, ಅನುಪಯುಕ್ತ ವಸ್ತುಗಳಿಂದ ತಯಾರಿಸಿದ್ದಾಗಿದೆ. ಪರಿಸರಸ್ನೇಹಿ ವಸ್ತುಗಳನ್ನು ಇಲ್ಲಿ ಪುಸ್ತಕ ಜೋಡಿಸಿಡಲು ಬಳಸಿರುವುದು ಇಲ್ಲಿನ ಇನ್ನೊಂದು ವಿಶೇಷವಾಗಿದೆ.
-ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.