ಮಣಿಪಾಲ; “ನಮ್ಮ ಸಂತೆ’ಗೆ ಉತ್ತಮ ಸ್ಪಂದನೆ
ಎರಡು ದಿನಗಳಲ್ಲಿ ಸಾವಿರಾರು ಮಂದಿ ಸಾರ್ವಜನಿಕರು ನಮ್ಮ ಸಂತೆಗೆ ಭೇಟಿ ನೀಡಿದ್ದು, ಲಕ್ಷಾಂತರ ರೂ. ವಹಿವಾಟು ನಡೆದಿದೆ.
Team Udayavani, Feb 13, 2023, 10:15 AM IST
ಮಣಿಪಾಲ: ಉದಯವಾಣಿ ಮತ್ತು ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್ (ಎಂಐಸಿ) ಸಹಯೋಗದಲ್ಲಿ ಎಂಐಸಿ ಕ್ಯಾಂಪಸ್‌ನಲ್ಲಿ
ಆಯೋಜಿಸಿದ್ದ “ನಮ್ಮ ಸಂತೆ’ಗೆ ಎರಡನೇ ದಿನ ರವಿವಾರವೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಸಾವಯವ ಉತ್ಪನ್ನಗಳು, ಖಾದಿ, ಜವಳಿ ದಿರಿಸು ಸಹಿತ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಅತ್ಯಂತ ವಿಶಿಷ್ಟವಾಗಿ ಗಮನ ಸೆಳೆದಿದ್ದು, ಉಡುಪಿ, ಮಣಿಪಾಲ, ಪರ್ಕಳ, ಮಲ್ಪೆ ಸಹಿತ ಆಸುಪಾಸಿನ ಜನರು ಭಾಗವಹಿಸಿ ಖರೀದಿ ಮಾಡಿದರು. 50 ಮಳಿಗೆಗಳ ಲ್ಲಿಯೂ ವ್ಯಾಪಾರ ಪ್ರಕ್ರಿಯೆ ಜೋರಾಗಿತ್ತು. ಬೆಂಗಳೂರು, ಚೆನ್ನಪಟ್ಟಣದಿಂದ ಆಗಮಿಸಿದ್ದ ವ್ಯಾಪಾರಿಗಳು ಅಲಂಕಾರಿಕ, ಗೃಹೋಪಯೋಗಿ, ಖಾದಿ, ಹ್ಯಾಂಡ್ ಮೇಡ್ ಆಭರಣಗಳ ಮಾರಾಟ ಉತ್ತಮ ವಾಗಿತ್ತು ಎಂದು ಅಭಿಪ್ರಾಯಪಟ್ಟರು.
ಪರಿಸರ ಸ್ನೇಹಿ ಉತ್ಪನ್ನಗಳಿಗೆ ಬೇಡಿಕೆ ಅಧಿಕವಾಗಿತ್ತು. ಚೆನ್ನಪಟ್ಟಣ ಗೊಂಬೆ, ಆಟಿಕೆ ಪರಿಕರಗಳನ್ನು ಆಸಕ್ತಿಯಿಂದ ಗ್ರಾಹಕರು ಖರೀದಿಸಿದರು. ನಮ್ಮ ಸಂತೆಯಲ್ಲಿ ಫುಡ್‌ಝೋನ್, ಪ್ಲೇಝೋನ್ ಜನರನ್ನು ವಿಶೇಷವಾಗಿ ಆಕರ್ಷಿಸಿತು. ಸ್ವ ಉದ್ಯೋಗ ಮಹಿಳೆಯರು ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ, ಸಂಡಿಗೆ, ಹಪ್ಪಳ, ವಿವಿಧ ಗಿಡಮೂಲಿಕೆ ಮತ್ತು ಹಣ್ಣಿನ ರಸಗಳ ಉತ್ಪನ್ನಗಳ ಮಾರಾಟ ಭರ್ಜರಿಯಾಗಿ ನಡೆದವು. ಚೇರ್ಕಾಡಿಯ ಗೀತಾ ಸಾಮಂತ್
ಅವರ ಸಾವಯವ ಕುಚ್ಚಲಕ್ಕಿ ವಿಶೇಷ ಉತ್ಪನ್ನವಾಗಿ ಗಮನ ಸೆಳೆದಿದ್ದು, ಬಹುತೇಕ ಮಂದಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಸಾವಯವ ಕೃಷಿಗೆ ಪ್ರೋತ್ಸಾಹ ನೀಡಿದರು.
ಉದಯವಾಣಿ, ಎಂಐಸಿ ಆಯೋಜಿಸಿದ ನಮ್ಮ ಸಂತೆ ಸ್ಥಳೀಯ ಆರ್ಥಿಕತೆ ಉತ್ತೇಜನ ನೀಡುವಂತ ಪರಿಕಲ್ಪನೆಯಾಗಿದೆ. ಕಳೆದ ಎರಡು ದಿನಗಳಲ್ಲಿ ಸಾವಿರಾರು ಮಂದಿ ಸಾರ್ವಜನಿಕರು ನಮ್ಮ ಸಂತೆಗೆ ಭೇಟಿ ನೀಡಿದ್ದು, ಲಕ್ಷಾಂತರ ರೂ. ವಹಿವಾಟು ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.