Manipal: ಹೊಟೇಲ್ ಮ್ಯಾನೇಜರ್‌ಗೆ ವಂಚಿಸಿದ ವೈಟರ್
Team Udayavani, Oct 4, 2024, 8:30 PM IST
ಮಣಿಪಾಲ: ಹೊಟೇಲ್ ಮ್ಯಾನೇಜರ್‌ಗೆ ವಂಚಿಸಿದ ವೈಟರ್ ಲಕ್ಷಾಂತರ ರೂ.ನಗದಿನೊಂದಿಗೆ ಪರಾರಿಯಾದ ಘಟನೆ ನಡೆದಿದೆ.
ಮಣಿಪಾಲದ ಈಶ್ವರನಗರದ ಹೊಟೇಲ್‌ವೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುವ ಗಿರೀಶ್ ವಂಚನೆಗೊಳಗಾದವರು.
ಅವರ ಹೊಟೇಲ್‌ನಲ್ಲಿ ವೈಟರ್ ಆಗಿ ಕೆಲಸ ಮಾಡಿಕೊಂಡಿದ್ದ ಜಯಮೋಹನ್ ಸೋಮೇಶ್ ಎಂಬಾತ ಗಿರೀಶ್ ಅವರೊಂದಿಗೆ ವಾಸವಾಗಿದ್ದನು. ಸೆ.29ರಂದು ಗಿರೀಶ್ ಅವರು ಕೆಲಸ ಮುಗಿಸಿ ರೂಮಿಗೆ ಬಂದು 26,650 ರೂ.ನಗದು ಹಾಗೂ 10,000 ರೂ.ಬೆಲೆಬಾಳುವ ವಿವೋ ವೈ 18 ಮಾದರಿಯ ಮೊಬೈಲ್ ಫೋನ್ ಅನ್ನು ತನ್ನ ರೂಮಿನ ಡ್ರಾವರ್‌ನಲ್ಲಿಟ್ಟು ಮಲಗಿದ್ದರು. ಮರುದಿನ ಬೆಳಗ್ಗೆ ನೋಡಿದಾಗ ಜಯಮೋಹನ್ ಸ್ಥಳದಲ್ಲಿರಲಿಲ್ಲ. ಡ್ರಾವರ್‌ನಲ್ಲಿಟ್ಟಿದ್ದ ನಗದು, ಮೊಬೈಲ್ ಹಾಗೂ ಕೆಲಸ ಮಾಡಿಕೊಂಡಿರುವ ಹೊಟೇಲ್ ಹೆಸರಿನಲ್ಲಿರುವ ಎಚ್‌ಡಿಎಫ್ಸಿ ಖಾತೆಯಿಂದ 81,000ರೂ.ಗಳನ್ನು ಗೂಗಲ್ ಪೇ ಮೂಲಕ ಆರೋಪಿ ತನ್ನ ಖಾತೆಗೆ ವರ್ಗಾಯಿಸಿಕೊಂಡು ಹೋಗಿದ್ದಾನೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.