ಮಥುರಾ ಮುಕ್ತಿ: ಪಲಿಮಾರು ಶ್ರೀ ಆಶಯ
Team Udayavani, Aug 22, 2019, 5:00 AM IST
ಉಡುಪಿ: ಸೆರೆಮನೆಯಲ್ಲಿ ಜನಿಸಿದ ಶ್ರೀಕೃಷ್ಣ ಅದರಿಂದ ಬಂಧಮುಕ್ತಗೊಂಡು ತಂದೆಯನ್ನೂ ಬಂಧಮುಕ್ತಗೊಳಿಸಿದ. ಇಂತಹ ಮಥುರಾ ಕ್ಷೇತ್ರ ಮತ್ತು ಕಾಶೀ ವಿಶ್ವನಾಥ ಕ್ಷೇತ್ರವೂ ಅಯೋಧ್ಯೆಯಂತೆ ಬಿಡುಗಡೆಗೊಳ್ಳಬೇಕು ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಆಶಿಸಿದರು.
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತದ ಮೂರನೇ ದಿನದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಶ್ರೀರಾಮ ಗುರು ವಿಶ್ವಾಮಿತ್ರರ ಹಿಂದೆ ಹೋಗಿ ಗುರುವಿನ ಹಿಂದೆ ಸಾಗಿದರೆ ಶ್ರೇಷ್ಠ ಎಂಬ ಸಂದೇಶ ನೀಡಿ ಶಿಕ್ಷಕರ ಘನತೆಯನ್ನು ಎತ್ತಿ ಹಿಡಿದ. ಬಂಧನದಲ್ಲಿದ್ದ ಕೃಷ್ಣ ತನ್ನ ಜತೆ ತಂದೆ ವಸುದೇವನನ್ನೂ ಕರೆದೊಯ್ದು ನಾನಾ ವಿಧದ ಬಂಧನದಲ್ಲಿರುವವರು ಸಾಗಬೇಕಾದ ದಾರಿಯನ್ನು ತೋರಿದ ಎಂದು ವಿಶ್ಲೇಷಿಸಿದರು.
ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶ್ರೀ ಪಲಿಮಾರು ಮಠದ ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ದೊಡ್ಡಣಗುಡ್ಡೆ ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಶುಭ ಕೋರಿದರು.
ಎಂಜಿನಿಯರ್ ಯು.ಕೆ. ರಾಘವೇಂದ್ರ ರಾವ್, ಯಕ್ಷಗಾನ ಪ್ರಸಂಗಕರ್ತೆ ಪ್ರೇಮಾ ಮಹೇಶ್, ಉದಯವಾಣಿ ಹಿರಿಯ ಛಾಯಾಚಿತ್ರಗ್ರಾಹಕ ಆಸ್ಟ್ರೋ ಮೋಹನ್, ಕರ್ನಾಟಕ ಸಂಗೀತಜ್ಞ ಚೆನ್ನೈಯ ಟಿ.ವಿ. ಶಂಕರನಾರಾಯಣ, ತಿರುಪತಿ ಕ್ಷೇತ್ರದ ಅರ್ಚಕ ರಾಮುಲು ಅವರನ್ನು ಸಮ್ಮಾನಿಸಲಾಯಿತು. ಡಾ| ವಿಜಯೇಂದ್ರ ವಸಂತ್ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.