ಜಿಲ್ಲೆಯಲ್ಲಿ ಗರಿಷ್ಠ ಮತದಾನ : ಮತದಾನಕ್ಕೆ ಸಾಮಾಜಿಕ ಜಾಲತಾಣ ಪ್ರೇರಣೆ
Team Udayavani, Apr 21, 2019, 6:30 AM IST
ಉಡುಪಿ: ಜಿಲ್ಲೆಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವಲ್ಲಿ ಸಾಮಾಜಿಕ ಜಾಲತಾಣಗಳು ಮುಖ್ಯ ಪಾತ್ರ ವಹಿಸಿದೆ. ವಾಟ್ಸ್ ಆ್ಯಪ್, ಫೇಸ್ ಬುಕ್, ಇನ್‌ಸ್ಟಾಗ್ರಾಂ, ಟ್ವೀಟರ್‌ನಲ್ಲಿ ಸಂಚಲನ ಮೂಡಿಸಿದ ಮತದಾನ ಸಂದೇಶವಿರುವ ವೀಡಿಯೋ ತುಣುಕು ಯುವ ಜನರಲ್ಲಿ ಮತದಾನದ ಭಾಗವಹಿಸುವಂತೆ ಪ್ರೇರಣೆ ನೀಡಿದೆ.
ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ಲೋಕಸಭಾ ಚುನಾವಣೆಗೆ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಯುವ ಜನರ ಗಮನ ಮತದಾನದತ್ತ ಕೇಂದ್ರೀಕರಿಸುವಲ್ಲಿ ಯಶಸ್ವಿಯಾಗಿದೆ. ಸರಕಾರಿ ಹಾಗೂ ಖಾಸಗಿ ಕಂಪೆನಿಗಳೆಲ್ಲ ರಜೆ ಘೋಷಿಸಿರುವುದರಿಂದ ಮತದಾರರು ಮತಗಟ್ಟೆಯತ್ತ ದೌಡಾಯಿಸಿದ್ದರು.
ಲೈವ್ ಅನುಭವ
ಯುವಜನತೆ ಮತ ಚಲಾಯಿಸಿದ ಸಂಭ್ರಮವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತಾನೊಬ್ಬ ಭಾರತೀಯ ಹೆಮ್ಮೆಯ ಪ್ರಜೆ, ನಾನು ನನ್ನ ಹಕ್ಕು, ಕರ್ತವ್ಯ ಎರಡನ್ನೂ ಪ್ರಾಮಾಣಿಕವಾಗಿ ಚಲಾಯಿಸಿದ್ದೇನೆ ಎಂದು ಫೇಸ್‌ಬುಕ್ ಇನ್‌ಸ್ಟಾ ಗ್ರಾಂ ಲೈವ್ ಮೂಲಕ ಅನುಭವ ಹಂಚಿಕೊಂಡಿದ್ದಾರೆ.
ಶೇ. 60ರಷ್ಟು ಮತದಾರರು ಬೆರಳಿಗೆ ಹಾಕಿದ ಶಾಯಿ ಗುರುತನ್ನು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡುವ ಮೂಲಕ ಇತರರನ್ನು ಮತದಾನ ಮಾಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಿತ್ತು.
ಅಭಿಯಾನ ಗಮನಾರ್ಹ
ಯುವ ಜನತೆ ಜಾಗೃತವಾಗಿದೆ. ಈ ಬಾರಿ ಮತದಾನ ಪ್ರಮಾಣ ಹೆಚ್ಚಳವಾಗಲು ಸಾಮಾಜಿಕ ಜಾಲತಾಣ ಕೂಡ ಒಂದು ಮುಖ್ಯ ಕಾರಣವಾಗಿದೆ. ಜತೆಗೆ ಚುನಾವಣಾ ಆಯೋಗ ಸಾಮಾಜಿಕ ಜಾಲತಾಣಗಳಲ್ಲಿ ಕೈಗೊಂಡ ಜಾಗೃತಿ ಅಭಿಯಾನದ ಪಾತ್ರವೂ ಸಹ ಗಮನಾರ್ಹವಾಗಿದೆ.
ಅರಿವು ಮೂಡಿಸಬಲ್ಲ ತಾಣ
ಸಾಮಾಜಿಕ ಜಾಲತಾಣಗಳು ಕೇವಲ ಮೋಜಿನ ತಾಣಗಳಾಗಿ ಉಳಿದಿಲ್ಲ, ಇದೀಗ ಸುಶಿಕ್ಷಿತರಲ್ಲಿ ಅರಿವು ಮೂಡಿಸಬಲ್ಲ ತಾಣವಾಗಿ ಪರಿವರ್ತನೆಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸೆಲ್ಫಿ ಸ್ಪರ್ಧೆ
ಕೊನೆ ಪಕ್ಷ ಮತದಾರರು ಬಹುಮಾನಕ್ಕಾಗಿ ಮತದಾನ ಮಾಡಲಿ ಎಂಬ ಆಶಯದಲ್ಲಿ ಕೆಲವೊಂದು ಫೇಸ್ ಬುಕ್ ಪೇಜ್‌ಗಳು ಸೆಲ್ಫಿ ವಿತ್ ವೋಟೆಡ್ ಫಿಂಗರ್ ಎಂಬ ಸ್ಪರ್ಧೆಯನ್ನು ಏರ್ಪಡಿಸಿವೆ.
ಕೆಲವು ಸಾಲುಗಳು
ನಾನು ಮತದಾನದ ಹಕ್ಕನ್ನು ಚಲಾಯಿಸಿದೆ. ನೀವು? ಪ್ರತಿಯೊಬ್ಬ ಮತದಾರ, ದೇಶದೊಳಗಿನ ಯೋಧನೇ, ದಯಮಾಡಿ ಪ್ರತಿಯೊಬ್ಬರೂ ಯೋಗ್ಯರಿಗೆ ಮತ ಹಾಕಿ. ನನ್ನ ಮತ ಅಭಿವೃದ್ಧಿ ಹರಿಕಾರನಿಗೆ, ಕುಂಟು ನೆಪ ಬೇಡ ಬಂದು ಮತ ಹಾಕಿ, ಮತದಾನ ನನ್ನ ಹಕ್ಕು, ಮತದಾನ ಮಾಡವರಿಗೆ ದೇಶದ ಬಗ್ಗೆ ಮಾತನಾಡುವ ಹಕ್ಕು ಇಲ್ಲ… ಹೀಗೆ ನೂರಾರು ಸಂದೇಶಗಳು ವಾಟ್ಸ್ ಆಪ್ ಹಾಗೂ ಫೇಸ್ ಬುಕ್ ವಾಲ್‌ನಲ್ಲಿ ಇತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್.. ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.