ಬಸ್ ಮಾಲಕರು, ಏಜೆಂಟರ ಸಭೆ; ಸಂಚಾರ ನಿಯಮ ಪಾಲನೆಗೆ ಪೊಲೀಸ್ ಇಲಾಖೆ ಸೂಚನೆ
Team Udayavani, Sep 22, 2022, 3:43 PM IST
ಉಡುಪಿ: ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ನಗರ ಠಾಣೆಯ ಪೊಲೀಸ್ ನಿರೀಕ್ಷಕರು, ನಗರ ಸಂಚಾರ ಠಾಣೆಯ ಪಿಎಸ್‌ಐ ಅವರು ಉಡುಪಿ ನಗರದಲ್ಲಿ ಸಂಚರಿಸುವ ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು, ಸಾರ್ವಜನಿಕರು ಹಾಗೂ ವಾಹನಗಳ ಸುಗಮ ಸಂಚಾರದ ಹಿತ ದೃಷ್ಟಿಯಿಂದ ರಸ್ತೆ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ. ಬಡಗುಬೆಟ್ಟು ಕೋ-ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಮಂಗಳವಾರ ನಡೆದ ಬಸ್ ಮಾಲಕರ ಹಾಗೂ ಏಜೆಂಟರ ಸಭೆಯಲ್ಲಿ ಈ ನಿರ್ದೇಶನ ನೀಡಲಾಗಿದೆ.
ಬಸ್ ನಿಲುಗಡೆಗೊಳಿಸಿ ಮುಂದುವರಿಯುವ ಸ್ಥಳ
1. ಕುಂದಾಪುರದಿಂದ ಉಡುಪಿ ಕಡೆಗೆ ಬರುವ ಬಸ್‌ಗಳು ಸಂತೆಕಟ್ಟೆ ಜಂಕ್ಷನ್ ಬಳಿ ಸರ್ವಿಸ್ ರಸ್ತೆಯಲ್ಲಿ ಬಂದು ನಿಗದಿತ ಬಸ್ ನಿಲ್ದಾಣದ ಬಳಿ.
2. ಸಂತೆಕಟ್ಟೆಯಿಂದ ಉಡುಪಿ ಕಡೆಯ ಸಿಟಿ ಬಸ್, ಲೋಕಲ್ ಬಸ್‌ಗಳು ಅಂಬಾಗಿಲು ಜಂಕ್ಷನ್ ಬಸ್ ನಿಲ್ದಾಣದ ಬಳಿ.
3. ಸಂತೆಕಟ್ಟೆಯಿಂದ ಉಡುಪಿ ಕಡೆಯ ಸಿಟಿ ಬಸ್, ಲೋಕಲ್ ಬಸ್‌ಗಳು ನಿಟ್ಟೂರು ಜಂಕ್ಷನ್ ಬಸ್ ನಿಲ್ದಾಣದ ಬಳಿ.
4. ಕುಂದಾಪುರ ಹಾಗೂ ಹೂಡೆ, ನೇಜಾರು ಕಡೆಗಳಿಂದ ಬರುವ ಬಸ್‌ಗಳು ಬನ್ನಂಜೆ ಮುಖಾಂತರ ಸಿಟಿ ಬಸ್ ನಿಲ್ದಾಣಕ್ಕೆ ಬರುವಾಗ ಶಾರದಾ ಇಂಟರ್ ನ್ಯಾಶನಲ್ ನಿಂದ ಮುಂದೆ ಸರ್ವಿಸ್ ರಸ್ತೆಯಲ್ಲಿ ಅಥವಾ ಬನ್ನಂಜೆ ಬಸ್ ನಿಲ್ದಾಣದ ಬಳಿ.
5. ಸರ್ವಿಸ್ ಬಸ್ ನಿಲ್ದಾಣದಿಂದ ಕುಂದಾಪುರ ಹಾಗೂ ನೇಜಾರು ಹೂಡೆ ಕಡೆ ಹೋಗುವ ಬಸ್‌ಗಳು ಸರ್ವಿಸ್ ಬಸ್/ ಸಿಟಿ ಬಸ್ ನಿಲ್ದಾಣ ಬಿಟ್ಟರೆ ಬನ್ನಂಜೆ ಬಸ್ ನಿಲುಗಡೆ ಅನಂತರ ಕರಾವಳಿ ನಿಗದಿತ ಬಸ್ ನಿಲ್ದಾಣದಿಂದ ಮುಂದೆ.
6. ನಿಟ್ಟೂರು ಜಂಕ್ಷನ್ ಬಳಿ ಎಡಭಾಗದಲ್ಲಿ ಖಾಲಿ ಇರುವ ಜಾಗದಲ್ಲಿ ಮಾತ್ರ.
7. ಅಂಬಾಗಿಲು ಜಂಕ್ಷನ್ ಕಳೆದ ಅನಂತರದ ಖಾಲಿ ಜಾಗದಲ್ಲಿ ಮಾತ್ರ.
8. ಸಂತೆಕಟ್ಟೆ ಜಂಕ್ಷನ್‌ಗೆ ಎಕ್ಸ್‌ಪ್ರೆಸ್ ಬಸ್ ಗಳು ಹೈವೇ ಮೇಲೆ ಬಂದು ಸಂತೆಕಟ್ಟೆ ಜಂಕ್ಷನ್‌ನಿಂದ ಸ್ವಲ್ಪ ಮುಂದೆ ಶೌಚಾಲಯದ ಎದುರು.
9. ಹೂಡೆ-ನೇಜಾರು-ಮಲ್ಪೆ ಕಡೆ ಹೋಗುವ ಬಸ್‌ಗಳು ಸಂತೆಕಟ್ಟೆ ಸರ್ವಿಸ್ ರಸ್ತೆಯಲ್ಲಿ ಬಂದು ಮೀನು ಮಾರ್ಕೆಟ್ ಬಳಿ.
10. ಮಲ್ಪೆ ಕಡೆಯ ಬಸ್‌ಗಳು ಸಿಟಿ ಬಸ್ ನಿಲ್ದಾಣದಿಂದ ಬನ್ನಂಜೆಯಲ್ಲಿ ನಿಲುಗಡೆ ಅನಂತರ ಕರಾವಳಿ ಜಂಕ್ಷನ್ ನಿಂದ ಸ್ವಲ್ಪ ಮುಂದೆ.
11. ಮಲ್ಪೆ ಕಡೆಯಿಂದ ಬರುವಂತಹ ಬಸ್‌ಗಳು ಆದಿ ಉಡುಪಿ ಬಳಿ ಬಸ್ ನಿಲುಗಡೆ – ಅನಂತರ ಬನ್ನಂಜೆ ಬಳಿ – ಅನಂತರ ಸಿಟಿ ಬಸ್ ನಿಲ್ದಾಣ.
12. ಸಿಟಿ ಬಸ್ ನಿಲ್ದಾಣದಿಂದ ಮಣಿಪಾಲ ಕಡೆಗೆ ಹೋಗುವಂತಹ ಬಸ್ ಗಳು ಸಿಟಿ ಬಸ್ ನಿಲ್ದಾಣ ಬಿಟ್ಟರೆ ಕಲ್ಸಂಕದ ನಿಲ್ದಾಣ, ಕಡಿಯಾಳಿ ಪೆಟ್ರೋಲ್ ಬಂಕ್ ಬಳಿ, ಎಂಜಿಎಂ ಬಸ್ ನಿಲ್ದಾಣ.
13. ಮಣಿಪಾಲದಿಂದ ಉಡುಪಿ ಕಡೆಗೆ ಬರುವ ಬಸ್‌ಗಳು ಎಂಜಿಎಂ, ಎಸ್. ಕೆ.ಎಂ.ಯು. ಟರ್ನ್ ನ ಹಿಂದೆ ಅಥವಾ ಯು ಟರ್ನ್ನಿಂದ ಮುಂದೆ, ಕಡಿಯಾಳಿ ಮಾಂಡವಿ ಎದುರು, ಕಲ್ಸಂಕ ಜಂಕ್ಷನ್ ನಿಂದ ಸ್ವಲ್ಪ ಹಿಂದೆ.
14. ಕಲ್ಸಂಕದಿಂದ ಸಿಟಿ ಅಥವಾ ಸರ್ವಿಸ್ ನಿಲ್ದಾಣದ ಕಡೆಗೆ ಹೋಗುವ ಬಸ್ ಗಳು ಕಲ್ಸಂಕದಿಂದ ನಾಗಬನ- ಕಾಫಿಯಾ ಹೊಟೇಲ್- ಸಿಟಿ ನಿಲ್ದಾಣ ನಿಲುಗಡೆ. ಸರ್ವಿಸ್ ನಿಲ್ದಾಣಕ್ಕೆ ಹೋಗುವಂತಹ ಬಸ್‌ಗಳು ಐರೋಡಿಕಾರ್ ಜಂಕ್ಷನ್ ಆಗಿ ಹೋಗತಕ್ಕದ್ದು.
15. ಸರ್ವಿಸ್ ನಿಲ್ದಾಣದಿಂದ ಮಂಗಳೂರು ಕಡೆಗೆ ಹೋಗುವ ಬಸ್ ಗಳು ಸಿಟಿ ಸೆಂಟರ್- ಸಂಸ್ಕೃತ ಕಾಲೇಜು ಜಂಕ್ಷನ್ – ತ್ರಿವೇಣಿ ಜಂಕ್ಷನ್ ಮೂಲಕ ಮಂಗಳೂರು ಹೋಗತಕ್ಕದ್ದು. ಬಸ್‌ಗಳನ್ನು ಸರ್ವಿಸ್ ನಿಲ್ದಾಣ ಬಿಟ್ಟರೆ ಮುಂದಕ್ಕೆ ನಗರಸಭೆ ಎದುರು ಇರುವ ನಿಗದಿತ ಬಸ್ ನಿಲ್ದಾಣ- ಫಿಶ್ ಮಾರ್ಕೆಟ್ ಬಳಿ -ಹಳೆ ತಾಲೂಕು ಕಚೇರಿ ಬಳಿ ಇರುವ ನಿಗದಿತ ಬಸ್ ನಿಲ್ದಾಣದಲ್ಲಿ ಮಾತ್ರ.
16. ಅಲೆವೂರು ಕೊರಂಗ್ರಪಾಡಿ, ಕಟಪಾಡಿ, ಅಂಬಲಪಾಡಿಗಳ ಕಡೆ ಹೋಗುವ ಬಸ್‌ಗಳು ಸಿಟಿ ಬಸ್ ನಿಲ್ದಾಣದಿಂದ ಐರೋಡಿಕಾರ್ ಜಂಕ್ಷನ್- ಹೂವಿನ ಮಾರ್ಕೆಟ್ – ಸಿಟಿ ಸೆಂಟರ್- ಸಂಸ್ಕೃತ ಕಾಲೇಜು ಜಂಕ್ಷನ್ – ತ್ರಿವೇಣಿ ಜಂಕ್ಷನ್ ಮೂಲಕ ಬಸ್‌ಗಳನ್ನು ನಗರಸಭೆ ಎದುರು ಇರುವ ನಿಗದಿತ ಬಸ್ ನಿಲ್ದಾಣ-ಫಿಶ್ ಮಾರ್ಕೆಟ್ ಬಳಿ – ಮಿಷನ್ ಆಸ್ಪತ್ರೆ ಬಳಿ ನಿಗದಿತ ನಿಲ್ದಾಣದಲ್ಲಿ ಮಾತ್ರ.
17. ಮಂಗಳೂರು ಕಡೆಯಿಂದ ಬರುವ ಬಸ್‌ಗಳು ಟಿಎಂಎ ಪೈ ಆಸ್ಪತ್ರೆ ಬಳಿ, ಫಿಶ್ ಮಾರ್ಕೆಟ್ ಎದುರು ನಿಲ್ದಾಣ – ನಗರ ಸಭೆ ಎದುರು – ಸರ್ವಿಸ್ ಬಸ್ ನಿಲ್ದಾಣದ ಬಳಿ ನಿಲ್ಲಿಸಿ, ಕಿದಿಯೂರು ಮುಖಾಂತರ ಸರ್ವಿಸ್ ನಿಲ್ದಾಣಕ್ಕೆ ಬಸ್‌ಗಳು ಬರಬೇಕು.
ಸಾಮಾನ್ಯ ಸೂಚನೆಗಳು
ಬಸ್‌ಗಳಲ್ಲಿ ವ್ಯಾಕ್ಯೂಮ್ ಹಾರ್ನ್‌ಗಳಿದ್ದರೆ ಕೂಡಲೇ ತೆರವುಗೊಳಿಸಬೇಕು.
ಚಾಲಕರು ಮೊಬೈಲ್ ಬಳಕೆ ಮಾಡದಿರುವ ಬಗ್ಗೆ ಹಾಗೂ ಮದ್ಯಪಾನ ಮಾಡಿ ಚಾಲನೆ ಮಾಡದಿರುವ ಬಗ್ಗೆ ಬಸ್ ಮಾಲಕರು ಸೂಕ್ತ ತಿಳಿವಳಿಕೆ ನೀಡಬೇಕು.
ಚಾಲಕರು, ನಿರ್ವಾಹಕರು ಲೈಸೆನ್ಸ್ ಜತೆ ಸಮವಸ್ತ್ರ ಕಡ್ಡಾಯವಾಗಿ ಧರಿಸಬೇಕು.
ಫುಟ್‌ಬೋರ್ಡ್ ಮೇಲೆ ಪ್ರಯಾಣಿಕರನ್ನು ನಿಲ್ಲಿಸಬಾರದು.
ಸರ್ವಿಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳ ಒಳಗೆ ಅನಾವಶ್ಯಕವಾಗಿ ಹೆಚ್ಚು ಸಮಯ ನಿಲ್ಲಿಸಬಾರದು.
ಟಿಂಟ್ ಗ್ಲಾಸ್‌ಗಳಿದ್ದರೆ ಕೂಡಲೇ ತೆರವುಗೊಳಿಸಬೇಕು.
ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಮೀಸಲಿರುವ ಸೀಟುಗಳಲ್ಲಿ ಕಡ್ಡಾಯವಾಗಿ ಮಹಿಳೆಯರು ಮತ್ತು ಹಿರಿಯ ನಾಗರಿಕರು ಕುಳಿತುಕೊಳ್ಳುವಂತೆ ನೋಡಿಕೊಳ್ಳಬೇಕು.
ಪರಿಶೀಲನೆ: ನಗರದಲ್ಲಿ ಟ್ರಾಫಿಕ್ ದಟ್ಟಣೆಯಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಎಂಜಿನಿಯರ್‌ಗಳೊಂದಿಗೆ ಜಂಕ್ಷನ್‌ಗಳ ಪರಿಶೀಲನೆ ನಡೆಸಿದ್ದೇವೆ. ತಾತ್ಕಾಲಿಕವಾಗಿ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. –ಕೂರ್ಮಾರಾವ್ ಎಂ. ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.