ಕಡೆಕಾರು ಗ್ರಾಮದ ತೋಡಿನಲ್ಲಿ ಉಡುಪಿ ನಗರದ ಕೊಳಚೆ ನೀರು
ಬಾವಿ ನೀರು ಹಾಳು, ರೋಗದ ಭೀತಿಯಲ್ಲಿ ತೀರ ವಾಸಿಗಳು
Team Udayavani, May 31, 2022, 1:18 PM IST
ಮಲ್ಪೆ: ನಗರದ ಡ್ರೈನೇಜಿನ ನೀರು ಕಡೆಕಾರು ಗ್ರಾ.ಪಂ. ವ್ಯಾಪ್ತಿಯ ತೋಡಿನಲ್ಲಿ ಹರಿದು ಪರಿಸರದ ಈ ಪ್ರದೇಶಗಳು ಸಾಂಕ್ರಾಮಿಕ ರೋಗಗಳ ಮೂಲವಾಗಿ ಪರಿವರ್ತನೆಯಾಗಿದೆ. ಇದರಿಂದಾಗಿ ತೋಡಿನ ಪರಿಸರದ ಜನರು ದಿನದ 24 ಗಂಟೆ ಮೂಗು ಬಾಯಿ ಮುಚ್ಚಿಕೊಂಡೇ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ.
ರಾಷ್ಟ್ರೀಯ ಹೆದ್ದಾರಿ ಬಲಾಯಿಪಾದೆಯಲ್ಲಿರುವ ನಗರಸಭೆಯ ವೆಟ್‌ವೆಲ್ -1 ಮತ್ತು 2ರ ಸಮಸ್ಯೆ. ಕಳೆದ ಮೂರು ದಿನಗಳಿಂದ ನಗರದ ಡ್ರೈನೇಜ್ ನೀರನ್ನು ನೇರವಾಗಿ ಈ ವೆಟ್‌ವೆಲ್ ಮೂಲಕ ಕಡೆಕಾರು ಗ್ರಾಮದ ತೋಡಿಗೆ ಬಿಡಲಾಗುತ್ತಿದೆ. ಕಡೆಕಾರು ಗ್ರಾಮದ ತೋಡು ಪರಿಸರದ 300ಕ್ಕೂ ಅಧಿಕ ಮನೆಗಳ ಬಾವಿ ನೀರು ಹಾಳಾಗಿದೆ. ದಿನದಿಂದ ದಿನಕ್ಕೆ ಸಮಸ್ಯೆ ಉಲ್ಬಣಿಸುತ್ತಾ ಹೋದರೂ ಯಾವುದೇ ಪರಿಹಾರ ದೊರೆಯಲಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.
ನಗರದ ಕೊಳಚೆ ನೀರು ಕಿನ್ನಿಮೂಲ್ಕಿ ಬಲಾಯಿಪಾದೆ, ಕಡೆಕಾರ್, ಕಪ್ಪೆಟ್ಟುಬೈಲು, ಕಿದಿಯೂರುಬೈಲು, ಅಂಬಲಪಾಡಿ, ಮಜ್ಜಿಗೆ ಪಾದೆ, ಬಂಕೇರುಕಟ್ಟದ ಹರಿದು ಬಂದು ಕಲ್ಮಾಡಿ ಹೊಳೆಯನ್ನು ಸೇರುತ್ತದೆ. ತೋಡಿನ ನೀರು ಅಸಹ್ಯ ದುರ್ವಾಸನೆ ಬೀರುತ್ತಿದೆ. ಪರಿಸರದ ಸಾವಿರಾರು ಮನೆಗಳಿಗೆ ಕೊಳಚೆ ನೀರಿನಿಂದಾಗಿ ಅವರ ಬದುಕು ನರಕ ಸದೃಶ್ಯವಾಗಿದೆ.
ಕಳೆದ ಹಲವು ಸಮಯಗಳಿಂದ ಇಲ್ಲಿನ ಗ್ರಾಮಸ್ಥರು ಸಮಸ್ಯೆಯನ್ನು ಅನುಭವಿಸಿಕೊಂಡು ಬರುತ್ತಿರುವುದು ಸಾಮಾನ್ಯ. ಈ ಹಿಂದೆಯೂ ಕೂಡ ಇದೇ ಸಮಸ್ಯೆ ತಲೆದೋರಿತ್ತು. ಆ ಬಳಿಕ ಕೆಲವು ಕಾಲ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಲ್ಪಿಸಲಾಗಿತ್ತು. ಇದೀಗ ಕೆಲವು ಸಮಯದಿಂದ ಮತ್ತೆ ಸಮಸ್ಯೆ ಉದ್ಭವಿಸಿದೆ. ಆದರೆ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ ಎನ್ನುತ್ತಾರೆ ಕಡೆಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ ಅವರು.
ನಮ್ಮನ್ನು ಬದುಕಲು ಬಿಡಿ
ಮೊದಲೇ ಕುಡಿಯುವ ನೀರಿನ ಸಮಸ್ಯೆ ಇರುವ ಈ ಭಾಗದಲ್ಲಿ ಇದ್ದ ಕೆಲವೊಂದು ಶುದ್ಧ ನೀರಿನ ಬಾವಿಗಳಿಗೆ ಡ್ರೈನೇಜ್‌ನ ಕೊಳಚೆ ನೀರು ಸೇರಿ ಇದ್ದ ಬಾವಿ ನೀರನ್ನು ಉಪಯೋಗಿಸದಂತೆ ಮಾಡಿದೆ. ದುರ್ವಾಸನೆಯಿಂದಾಗಿ ನಾವು ಸರಿಯಾಗಿ ಉಸಿರಾಡುವಂತಿಲ್ಲ, ಊಟ ಮಾಡುವಂತಿಲ್ಲ. ಸೊಳ್ಳೆ ಕಾಟ ತಡೆಯೋಕಾಗಲ್ಲ. ನಮ್ಮನ್ನು ಬದುಕಲು ಬಿಡಿ, ಇಲ್ಲವೆ ಈ ತೋಡಿಗೆ ವಿಷ ಹಾಕಿ. -ಶಾರದಾ ಅಡಪ, ಸ್ಥಳೀಯರು
ಉಗ್ರ ಪ್ರತಿಭಟನೆ
ಇದೀಗ ತೋಡಿನಲ್ಲಿ ಕೊಳಚೆ ನೀರು ಹರಿಯುತ್ತಿದ್ದು ಕೆಟ್ಟ ವಾಸನೆಯಿಂದ ಮನೆ ಹೊರಗೆ ಬರುವ ಹಾಗಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ನಾಗರಿಕರು ತೊಂದರೆಯನ್ನು ಅನುಭವಿಸುವಂತಾಗಿದೆ. ಸ್ನಾನ ಮಾಡುವಂತಿಲ್ಲ, ಬಟ್ಟೆ ಒಗೆಯುವಂತಿಲ್ಲ, ಸಾರ್ವಜನಿಕ ವಾತಾವರಣವನ್ನು ಕೆಡಿಸುತ್ತಿರುವ ಈ ಸಮಸ್ಯೆಗೆ ಅತೀ ಶೀಘ್ರವಾಗಿ ನಗರಸಭೆ ಶಾಶ್ವತ ಪರಿಹಾರ ಕೈಗೊಳ್ಳುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು, ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸುವುದೆಂದು ನಿರ್ಧರಿಸಿದ್ದೇವೆ. – ನವೀನ್ ಶೆಟ್ಟಿ, ಉಪಾಧ್ಯಕ್ಷರು, ಕಡೆಕಾರು ಗ್ರಾ.ಪಂ.
ದುರಸ್ತಿ ಕಾರ್ಯ
ರಾಷ್ಟ್ರೀಯ ಹೆದ್ದಾರಿ ವೆಟ್‌ವೆಲ್‌ನ ಭಾಗದಲ್ಲಿ ಸಮಸ್ಯೆ ಉಂಟಾಗಿರುವ ಬಗ್ಗೆ ಈಗಾಗಲೇ ನನ್ನ ಗಮನಕ್ಕೆ ಬಂದಿದೆ. ಇಲ್ಲಿನ ಪಂಪ್ ಹಾಳಾಗಿದ್ದು, ತತ್ ಕ್ಷಣ ದುರಸ್ತಿಗೊಳಿಸುವ ಕಾರ್ಯ ನಡೆಸಲಾಗುವುದು. -ಉದಯ ಶೆಟ್ಟಿ, ಪೌರಾಯುಕ್ತರು, ಉಡುಪಿ ನಗರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.