ಮಳೆಗಾಲ: ವಾಹನ ಸವಾರರಿಗೆ ಮುನ್ನೆಚ್ಚರಿಕೆ
Team Udayavani, May 31, 2023, 4:11 PM IST
ಉಡುಪಿ: ಮಳೆಗಾಲ ಆರಂಭಗೊಂಡಿರುವ ನಡುವೆಯೇ ರಸ್ತೆ ಅಪಘಾತಗಳಂತಹ ಪ್ರಕರಣಗಳೂ ದಿನನಿತ್ಯ ಘಟಿಸುತ್ತಿವೆ. ಈ ಬಗ್ಗೆ ವಾಹನಸವಾರರು ಜಾಗರೂಕರಾಗಿರುವುದು ಅತೀ ಅಗತ್ಯವಾಗಿದೆ. ಮೊದಲ ಮಳೆ ಸುರಿದಾಗ ಹಾಗೂ ಅದರ ಬಳಿಕ ಎಚ್ಚರವಹಿಸುವುದು ಅತೀ ಅಗತ್ಯವಾಗಿರುತ್ತದೆ.
ದ್ವಿಚಕ್ರ ವಾಹನ ಸವಾರರಿಗೂ ಇತರ ಸಂದರ್ಭಗಳಲ್ಲಿ ನಿಯಂತ್ರಣದಲ್ಲಿರುವಷ್ಟು ಮಳೆ ಬಿದ್ದಾಗ ಇರುವುದಿಲ್ಲ. ಇದೇ ಕಾರಣಕ್ಕೆ ನಿಯಂತ್ರಣ ಕಳೆದುಕೊಂಡು ವಾಹನಗಳು ಸ್ಕಿಡ್ ಆಗುವುದು ಅಥವಾ ಬ್ರೇಕ್ ಸರಿಯಾಗಿ ಕಾರ್ಯನಿರ್ವಹಿಸದೆ ಅಪಘಾತಗಳು ಉಂಟಾಗುತ್ತವೆ.
ಉಡುಪಿಯಲ್ಲಿ ಮಂಗಳವಾರ ಸುರಿದ ಮಳೆಗೆ ಬಲೈಪಾದೆ ಬಳಿ ಗೇರುಬೀಜ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದೆ. ಮಳೆಗೆ ಬ್ರೇಕ್ ಸರಿಯಾಗಿ ಕಾರ್ಯನಿರ್ವಹಿಸದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆಸಂಭವಿಸಿದೆ. ಇದಕ್ಕೂ ಮುನ್ನ ಕಾಪು ಭಾಗದಲ್ಲಿ ಸುರಿದ ಭಾರೀ ಮಳೆಗೆ ಸಂಚರಿಸುತ್ತಿದ್ದ ಆಟೋರಿಕ್ಷಾದ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಸವಾರರಿಬ್ಬರು ಸಾವನ್ನಪ್ಪಿದ ಘಟನೆಯೂ ನಡೆದಿತ್ತು.
ಎಚ್ಚರಿಕೆ ಅಗತ್ಯ
ವಾಹನಗಳಿಂದ ಸುರಿದ ದ್ರವವಸ್ತುಗಳು ಬಿಸಿಲಿಗೆ ರಸ್ತೆಯಲ್ಲಿ ಗಟ್ಟಿಯಾಗಿದ್ದರೂ ಮಳೆಬಂದಾಗ ಎಣ್ಣೆಯ ಅಂಶಗಳು ಚದುರಲ್ಪಡುತ್ತವೆ. ಈ ವೇಳೆ ವಾಹನಸವಾರರು ತುಸು ಬ್ರೇಕ್ ಹಾಕಿದರೂ ಸ್ಕಿಡ್ ಆಗಿ ಬೀಳುವ ಸಂಭವವೇ ಅಧಿಕವಾಗಿರುತ್ತದೆ. ಇದು ದ್ವಿಚಕ್ರ ವಾಹನ ಮಾತ್ರವಲ್ಲದೆ ಘನ ವಾಹನಗಳ ಮೇಲೂ ಪರಿಣಾಮ ಬೀರುತ್ತದೆ. ಈ ಕಾರಣಕ್ಕೆ ನಿಧಾನಗತಿಯಲ್ಲಿ ಚಲಿಸುವುದೇ ಉತ್ತಮ.
ಗುಂಡಿಗಳ ಬಗ್ಗೆ ಎಚ್ಚರವಿರಲಿ
ರಸ್ತೆ ಗುಂಡಿಗಳಲ್ಲಿ ನೀರು ನಿಂತು ಸವಾರರಿಗೆ ಕಾಣದಂತಿರುತ್ತದೆ. ಇದು ಬೃಹತ್ ಗಾತ್ರದ ಹೊಂಡವೂ ಆಗಿರಬಹುದು. ದಿನನಿತ್ಯ ಅದೇ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇದರ ಅರಿವಿದ್ದರೂ ಬೇರೆ ರಸ್ತೆಗಳಲ್ಲಿ ಸಂಚರಿಸಿದಾಗ ನೀರು ತುಂಬಿರುವೆಡೆ ಸಂಚಾರ ಮಾಡುವಾಗ ಬಹಳಷ್ಟು ಜಾಗರೂಕರಾಗಿರಬೇಕು.
ಮರದಡಿ ವಾಹನ ನಿಲುಗಡೆ ಬೇಡ
ಬೇಸಗೆ ಕಾಲದಲ್ಲಿ ನೆರಳಿನ ಆಶ್ರಯಕ್ಕಾಗಿ ಮರದಿಡಿ ವಾಹನ ನಿಲುಗಡೆ ಮಾಡುಲು ಅಭ್ಯಾಸವನ್ನು ಹಲವಾರು ಮಂದಿ ಹೊಂದಿದ್ದರು. ಆದರೆ ಮಳೆಗಾಲಕ್ಕೂ ಇದನ್ನೇ ಮುಂದುವರಿಸಿದರೆ ಅಪಾಯ ಖಚಿತ. ಮರದ ಗೆಲ್ಲುಗಳು ಬಿದ್ದು ವಾಹನಕ್ಕೆ ಹಾನಿಯಾಗುವ ಸಂಭವವೇ ಅಧಿಕವಾಗಿರುತ್ತವೆ.
ಶಿಥಿಲಾವಸ್ಥೆಯಲ್ಲಿರುವ ಮರಗಳು ಬುಡ ಸಹಿತ ಬೀಳುವ ಘಟನೆಗಳೂ ನಡೆದಿವೆ. ಈ ಕಾರಣಕ್ಕೆ ಮರದ ಕೆಳಭಾಗ ಹಾಗೂ ವಿದ್ಯುತ್ ತಂತಿಗಳು, ಕಂಬಗಳು ಇರುವಲ್ಲಿ ವಾಹನ ನಿಲ್ಲಿಸದಿರುವುದೇ ಒಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ
Udupi: ಸಂಘದ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಗರಿ
Udupi: ಎರಡೇ ದಿನದಲ್ಲಿ ಬರಲಿದೆ, ವಾರಾಹಿ ನೀರು!
Udupi: ಫೆ.7ರಿಂದ 9ರವರೆಗೆ ಮಹಿಳಾ ಉದ್ಯಮಿಗಳ ಆರ್ಥಿಕ ಬಲವರ್ಧನೆಗಾಗಿ “ಪವರ್ ಪರ್ಬ 25′
Swadesh Darshan scheme: ಕೇಂದ್ರದ ಸ್ವದೇಶ್ ದರ್ಶನ್ ಯೋಜನೆಗೆ ಬೀದರ್, ಉಡುಪಿ ಆಯ್ಕೆ
MUST WATCH
ಹೊಸ ಸೇರ್ಪಡೆ
Uppinangady: ಗಾಂಜಾ ಸಹಿತ ಓರ್ವನ ಬಂಧನ
Kasaragod ಭಾಗದ ಅಪರಾಧ ಸುದ್ದಿಗಳು: ಗಾಂಜಾ ಸಾಗಾಟ: 2 ವರ್ಷ ಸಜೆ, ದಂಡ
ಸ್ಕೂಟಿಯಲ್ಲಿಟ್ಟಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ವ್ಯಕ್ತಿ ಮೃತ್ಯು!
Saif; ಸೈಫ್ ಅಲಿ ಖಾನ್ ಮೇಲೆ ದಾಳಿಗೂ ಮೊದಲು 1 ಕೋಟಿ ರೂ.ಗೆ ಬೇಡಿಕೆ
Nanjanagudu: ನಂಜುಂಡೇಶ್ವರನಿಗೆ ಹರಕೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.