ಬಹುತೇಕ ಹೊಟೇಲ್ ಇಂದಿನಿಂದ ಪುನರಾರಂಭ
ಹೊಟೇಲ್ ಆರಂಭಕ್ಕೆ ಭರದ ಸಿದ್ಧತೆ
Team Udayavani, Jun 8, 2020, 5:45 AM IST
ಉಡುಪಿ: ಕೋವಿಡ್-19 ಭೀತಿಯ ಮುಂಜಾಗ್ರತ ಕ್ರಮ ಅನುಸರಿಸಿಕೊಂಡು ಜೂ. 8ರಿಂದ ಜಿಲ್ಲೆಯಲ್ಲಿ ಹೊಟೇಲ್‌ಗಳು ಬಾಗಿಲು ತೆರೆದುಕೊಳ್ಳಲಿದ್ದು, ಗ್ರಾಹಕರಿಗೆ ಸವಿರುಚಿಯಾದ ತಿನಿಸುಗಳನ್ನು ಉಣಬಡಿಸಲಿವೆ.
ನಗರದೊಳಗಿನ ಬಹುತೇಕ ಹೊಟೇಲ್‌ಗಳು ಸೋಮವಾರ ಪ್ರಾರಂಭವಾಗುವ ಸಾಧ್ಯತೆಗಳಿದ್ದು, ಕೆಲವೊಂದು ಹೊಟೇಲ್‌ಗಳು ಮಾತ್ರ ಸ್ವಲ್ಪ ವಿಳಂಬವಾಗಿ ಬಾಗಿಲು ತೆರೆದುಕೊಳ್ಳಲಿವೆ. ಇದಕ್ಕಾಗಿ ಅಂತಿಮ ಹಂತದ ಭರದ ಸಿದ್ಧತೆ ಹೊಟೇಲ್‌ಗಳಲ್ಲಿ ರವಿವಾರ ನಡೆಯಿತು.
ರಾಜ್ಯ ಸರಕಾರ ಜೂ.8ರಿಂದ ರಾಜ್ಯಾದ್ಯಂತ ಹೊಟೇಲ್‌ಗಳನ್ನು ತೆರೆಯಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲೂ ಹೊಟೇಲ್‌ಗಳು ಬಾಗಿಲು ತೆರೆಯಲು ಹೊಟೇಲ್‌ಗಳನ್ನು ಸ್ವತ್ಛಗೊಳಿಸಿ ಸಿದ್ಧಪಡಿಸುವ ಪೂರ್ವ ತಯಾರಿಗಳು ನಡೆದವು.
ಸುದೀರ್ಘ ಸಮಯದ ಬಳಿಕ ಆರಂಭ
ಕೋವಿಡ್-19 ವೈರಸ್ ಸೋಂಕಿನಿಂದ ಕಳೆದ ಸುದೀರ್ಘ ಅವಧಿಯಿಂದ ಹೊಟೇಲ್‌ಗಳು ಬಂದ್ ಆಗಿದ್ದವು. ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಲಾಕ್‌ಡೌನ್ ಸಡಿಲಿಕೆ ಹಲವು ಹಂತಗಳಲ್ಲಿ ಆಗಿದ್ದರೂ ಹೊಟೇಲ್‌ಗಳ ತೆರವಿಗೆ ಅವಕಾಶಸಿಕ್ಕಿರಲಿಲ್ಲ. ವೈರಸ್ ಹರಡುವ ಮುಂಜಾಗೃತ ಕ್ರಮವಾಗಿ ಹೊಟೇಲ್‌ಗಳನ್ನು ಪ್ರಾರಂಭ ಮಾಡುವುದಕ್ಕೆ ಅನುಮತಿ ನೀಡಿರಲಿಲ್ಲ. ಸುದೀರ್ಘ ಅವಧಿ ಬಂದ್ ಆಗಿದ್ದರಿಂದ ಉದ್ಯಮಿಗಳು, ಸಣ್ಣ ಪುಟ್ಟ ಹೊಟೇಲ್ ವ್ಯಾಪಾರಸ್ಥರು ಅಪಾರ ನಷ್ಟಕ್ಕೆ ಒಳಗಾಗಿ ದ್ದರು. ಕೆಲವೊಂದು ಹೊಟೇಲ್‌ಗಳಲ್ಲಿ ಮಾತ್ರ ಪಾರ್ಸೆಲ್ ಆಹಾರ ನೀಡಲಾಗುತ್ತಿತ್ತು.
ಕೆಲಸಕ್ಕೆ ಕಾರ್ಮಿಕರು ದೊರೆತರೂ ಹೊಟೇಲ್‌ಗಳಿಗೆ ಗ್ರಾಹಕರು ಬಾರದೆ ಇದ್ದಲ್ಲಿ, ಅವರಿಗೆ ಸಂಬಳ ಕೊಡುವು
ದಕ್ಕೆ ಕಷ್ಟವಾದೀತು. ಹೀಗಾಗಿ ಮುಂದಿನ ದಿನಗಳಲ್ಲಿ ವ್ಯಾಪಾರ ಹೇಗಿದೆ ಎಂಬು ದನ್ನು ನೋಡಿಕೊಂಡು ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದು. ಸದ್ಯದ ಸ್ಥಿತಿಯಲ್ಲಿ ನಾವೇ ನಿಭಾಯಿಸು ತ್ತೇವೆ ಎಂದು ನಗರದ ಸಣ್ಣ ಹೊಟೇಲ್‌ನ ಮಾಲಕ ಆನಂದ ಅವರು ಹೇಳಿದರು.
ಕಾರ್ಮಿಕರ, ಅಡುಗೆಯವರ ಕೊರತೆ ಸಾಧ್ಯತೆ
ಅನುಮತಿ ಸಿಕ್ಕಿದರೂ ಹೊಟೇಲ್ ಆರಂಭಕ್ಕೆ ಕಾರ್ಮಿಕರ ಕೊರತೆ ಕೂಡ ಎದುರಾಗಿದೆ. ನಗರದ ವಿವಿಧ ಹೊಟೇಲ್‌ಗಳಲ್ಲಿ ಅನ್ಯ ರಾಜ್ಯ ಹಾಗೂ ಜಿಲ್ಲೆಗಳ ಕಾರ್ಮಿಕರು ಕೆಲಸಕ್ಕಿದ್ದರು. ಅವರೆಲ್ಲರೂ ತಮ್ಮ ಊರುಗಳಿಗೆ ತೆರಳಿದ್ದು. ಈಗ ಹೊಟೇಲ್ ಆರಂಭಿಸುವುದಕ್ಕೆ ಕಾರ್ಮಿಕರ, ಅಡುಗೆಯವರ ಸಮಸ್ಯೆ ಉಂಟಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.