![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Oct 22, 2022, 9:37 AM IST
ಶಿರ್ವ: ಮುಂಬೈನ ಉದ್ಯಮಿ, ಬಾಂದ್ರಾದ ಹೊಟೇಲ್ ಸಾಯಿಪ್ರಸಾದ್‌ನ ಮಾಲಕ ಕಲೀನಾ ಸಾಂತಾಕ್ರೂಜ್ ನಿವಾಸಿ ಸದಾನಂದ ಸಫಳಿಗ ಶಿರ್ವ (62) ಅವರು ಅ. 22 ರಂದು ಮುಂಜಾನೆ ಹೃದಯಾಘಾತದಿಂದ ಮುಂಬೈನ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಮುಂಬೈ ಸಾಂತಾಕ್ರೂಜ್‌ನ ಕನ್ನಡ ಸಂಘದ ಉಪಾಧ್ಯಕ್ಷರಾಗಿದ್ದ ಅವರು ಮುಂಬೈ ಸಫಲ್ಯ ಸೇವಾ ಸಂಘದ ಸಕ್ರೀಯ ಸದಸ್ಯರಾಗಿದ್ದು, ಮುಂಬೈ ಪತ್ರಕರ್ತರ ಸಂಘದ ಗೌರವ ಸಲಹೆಗಾರರಾಗಿದ್ದರು. ಕೊಡುಗೈ ದಾನಿಯಾಗಿದ್ದ ಅವರು ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ನ್ಯಾರ್ಮ ಶ್ರೀ ಧರ್ಮ ಜಾರಂದಾಯ ದೈವಸ್ಥಾನ,ನಡಿಬೆಟ್ಟು ಶ್ರೀಬಬ್ಬುಸ್ವಾಮಿ ದೈವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ಶ್ರಮಿಸಿದ್ದರು. ಶಿಕ್ಷಣ ಪ್ರೇಮಿಯಾಗಿದ್ದ ಅವರು ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದರು.
You seem to have an Ad Blocker on.
To continue reading, please turn it off or whitelist Udayavani.