ಬ್ಲ್ಯಾಕ್‌ಸ್ಪಾಟ್‌ಗೆ ಮುಕ್ತಿ ನೀಡಲು ಮುಂದಾದ ನಗರಸಭೆ
ನಗರದ ಹಲವೆಡೆ ಮಿನಿಗಾರ್ಡನ್, ನೆಟ್ ಅಳವಡಿಕೆ
Team Udayavani, Feb 10, 2022, 5:32 PM IST
ಉಡುಪಿ: ಸ್ವಚ್ಛತೆಗೆ ಗರಿಷ್ಠ ಆದ್ಯತೆ ನೀಡುವ ನಿಟ್ಟಿನಲ್ಲಿ ಉಡುಪಿ ನಗರಸಭೆ ನಗರದಲ್ಲಿರುವ ಬ್ಲ್ಯಾಕ್‌ಸ್ಪಾಟ್‌ಗಳಿಗೆ ಮುಕ್ತಿ ನೀಡಲು ಮುಂದಾಗಿದೆ.
ಈಗಾಗಲೇ ಮಲ್ಪೆ ಬೀಚ್, ಮಲ್ಪೆ ಪೊಲೀಸ್ ಠಾಣೆ ಬಳಿ, ಅಂಬಲಪಾಡಿ ಸಂದೀಪ್ ನಗರದ ಬಳಿ, ಕುಕ್ಕಿಕಟ್ಟೆ ಬಳಿ, ಪಣಿಯಾಡಿ ಜಂಕ್ಷನ್, ಮಣಿಪಾಲ ಅನಂತನಗರಗಳಲ್ಲಿ ಮಿನಿ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಮಲ್ಪೆ ನೆರ್ಗಿ ಬಳಿ, ಕೊಳ ರಸ್ತೆ, ಮೂಡುಬೆಟ್ಟು ಭಾಗಗಳಲ್ಲಿ ನೆಟ್ ಅಳವಡಿಕೆ ಮಾಡಲಾಗಿದೆ.
ಸ್ಥಳೀಯರ ಸಹಕಾರ
ನಗರಸಭೆ, ಬೀಚ್ ಅಭಿವೃದ್ಧಿ ಸಮಿತಿ, ಸಾಹಸ್ ಸಂಸ್ಥೆ ಮತ್ತು ಸ್ಥಳೀಯ ಸದಸ್ಯರ ಸಹಕಾರದಿಂದ ಸುಂದರಗೊಳಿಸಿ ಬ್ಲ್ಯಾಕ್ ಸ್ಪಾಟ್‌ಗಳನ್ನು ಮಿನಿ ಪಾರ್ಕ್‌ಗಳನ್ನಾಗಿ ಬದಲಾವಣೆ ಮಾಡಲಾಗುತ್ತಿದೆ. “ಕಸದಿಂದ ರಸ’ ಎಂಬ ಪರಿಕಲ್ಪನೆಯಂತೆ ಮರುಬಳಕೆ ವಸ್ತುಗಳು, ಹಳೆಯ ವಸ್ತುಗಳನ್ನು ಬಳಸಿ ಮತ್ತಷ್ಟು ಸುಂದರ ಮಾಡಲಾಗುತ್ತದೆ. ಇದರಿಂದಾಗಿ ಪ್ರಕೃತಿಯ ಅಂದವೂ ಹೆಚ್ಚಳವಾಗಲು ಸಾಧ್ಯವಿದೆ.
ಬ್ಲ್ಯಾಕ್ ಸ್ಪಾಟ್‌ಗಳ ಸಂಖ್ಯೆ ಇಳಿಕೆ
ನಗರದ 35 ವಾರ್ಡ್‌ಗಳಲ್ಲಿ 500ಕ್ಕೂ ಅಧಿಕವಿದ್ದ ಬ್ಲ್ಯಾಕ್ ಸ್ಪಾಟ್‌ಗಳ ಸಂಖ್ಯೆ ಈಗ ಇಳಿಕೆ ಕಂಡು 150ಕ್ಕೆ ಬಂದಿದೆ. ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸುವ ಉದ್ದೇಶದಿಂದ ಬ್ಲ್ಯಾಕ್‌ಸ್ಪಾಟ್‌ಗಳನ್ನು ತೆರವು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬ್ಲ್ಯಾಕ್‌ಸ್ಪಾಟ್ ಮುಕ್ತಿ ಮಾಡಿ ನಗರವನ್ನು ಸ್ವತ್ಛವಾಗಿಸುವ ಉದ್ದೇಶ ನಗರಸಭೆಯದ್ದು.
25 ಸಾವಿರ ರೂ.ವರೆಗೆ ದಂಡ!
ರಾತ್ರಿ ಹಾಗೂ ಹಗಲು ವೇಳೆ ಹೆದ್ದಾರಿ ಬದಿ ಸಹಿತ ನಗರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ಹಾಕುವ ಘಟನೆಗಳು ಮುಂದುವರಿಯುತ್ತಿವೆ. ಅವರಿಗೆ 5ರಿಂದ 25 ಸಾವಿರ ರೂ.ಗಳವರೆಗೆ ದಂಡ ವಿಧಿಸುವ ಹಕ್ಕು ನಗರಸಭೆಗಿದೆ. ಇದುವರೆಗೆ ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯುವವರಿಂದ ಸಂಗ್ರಹಿಸಿದ ದಂಡದ ಮೊತ್ತವೇ 4 ಲ.ರೂ.ಆಗಿದೆ.
ಹೇಗಿದೆ ಮಿನಿ ಪಾರ್ಕ್?
ತ್ಯಾಜ್ಯ ಹಾಕುತ್ತಿದ್ದ ಸ್ಥಳವನ್ನು ಗುರುತಿಸಿ ಅಲ್ಲಿದ್ದ ತ್ಯಾಜ್ಯಗಳನ್ನು ತೆಗೆದು ಜಾಗವನ್ನು ಸಮತಟ್ಟು ಗೊಳಿಸಲಾಗುತ್ತದೆ. ಅನಂತರ ಆ ಜಾಗದ ಸುತ್ತ ಬಿದಿರು ಹಾಗೂ ಮರದ ಕೋಲು ಬಳಸಿ ಕಾಂಪೌಂಡ್ ರೀತಿ ಮಾಡಲಾಗುತ್ತದೆ. ಬಳಿಕ ವಿವಿಧ ಬಗೆಯ ಗಿಡಗಳು, ಹಳೆಯ ಟಯರ್‌ಗಳಿಗೆ ಬಣ್ಣ ಬಳಿದು ಅಲಂಕಾರ, ಸ್ವಚ್ಛತೆ ಮಾಡುತ್ತಿರುವ ಸಿಬಂದಿಯ ಪ್ರತಿಕೃತಿಗಳನ್ನು ಮಿನಿ ಗಾರ್ಡನ್‌ನೊಳಗೆ ಪ್ರತಿಷ್ಠಾಪಿಸಲಾಗುತ್ತದೆ.
ಸ್ವಯಂ ಪರಿವರ್ತನೆ ಅಗತ್ಯ
ನಗರಸಭೆ ವತಿಯಿಂದ ಮನೆಮನೆಗೆ ಮನೆಮನೆಗೆ ತೆರಳಿ ಕಸ ಸಂಗ್ರಹ ನಡೆಯುತ್ತಿದ್ದರೂ ವಿನಾಕಾರಣ ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದು ನಗರಾದ್ಯಂತ ಕಂಡುಬರುತ್ತಿದೆ. ಈ ಬಗ್ಗೆ ನಾಗರಿಕರಲ್ಲಿ ಸ್ವಯಂ ಜಾಗೃತಿಯ ಆವಶ್ಯಕತೆಯಿದೆ.
ಸ್ವಚ್ಛತೆಗೆ ಆದ್ಯತೆ
ಈಗಾಗಲೇ ನಗರದ ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಿ ಮಿನಿ ಪಾರ್ಕ್‌ಮಾಡಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ತ್ಯಾಜ್ಯ ಸಂಗ್ರಾಹಕರಿಗೆ ನೀಡಿ ನಗರದ ಸ್ವಚ್ಛತೆ ಕಾಪಾಡಲು ಪ್ರತಿಯೊಬ್ಬರೂ ಆದ್ಯತೆ ನೀಡಬೇಕು.
-ಸುಮಿತ್ರಾ ನಾಯಕ್,
ಅಧ್ಯಕ್ಷೆ, ಉಡುಪಿ ನಗರಸಭೆ
– ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.