Udupi: ನಾಗರ ಪಂಚಮಿ ಸ್ವತ್ಛ ಪಂಚಮಿ

ಹಸಿ ತ್ಯಾಜ್ಯ ಸಂಗ್ರಹಿಸಲು ನಾಗಬನಗಳಿಗೆ ಚೀಲ, ಡ್ರಮ್‌ ಪೂರೈಕೆ

Team Udayavani, Aug 6, 2024, 5:49 PM IST

Screenshot (119)

ಉಡುಪಿ: ದೇವರು ಮತ್ತು ಸ್ವತ್ಛತೆ ಒಂದೇ ಕಲ್ಪನೆ. ಸ್ವತ್ಛತೆ ಇಲ್ಲದೇ ದೇವರಿಲ್ಲ. ಹಾಗೆಯೇ ಪ್ರಾಚೀನ ಸಂಪ್ರದಾಯದ ಷೋಡಶೋಪಚಾರ ಪೂಜೆಗಳಲ್ಲಿಯೂ ನೈರ್ಮಲ್ಯ ವಿಸರ್ಜನೆ ಪೂಜೆಯೂ ಒಂದು. ಪ್ರಸ್ತುತ ಉಡುಪಿ ನಗರದಲ್ಲಿ ಸ್ವತ್ಛ ನಾಗರ ಪಂಚಮಿ ಆಚರಣೆ ಎಲ್ಲರೂ ಸಂಕಲ್ಪ ಮಾಡಬೇಕಿದೆ. ಇತ್ತೀಚೆಗೆ ನಾಗರ ಪಂಚಮಿಗಳಲ್ಲಿ ಬತ್ತಿ, ಎಣ್ಣೆ, ಅಕ್ಕಿ, ಎಳನೀರು, ಊದು ಬತ್ತಿಗಳ ಪ್ಲಾಸ್ಟಿಕ್‌ ಪೊಟ್ಟಣಗಳು ಒಂದೆಡೆ ಬಿದ್ದಿದ್ದರೆ, ಮತ್ತೂಂದೆಡೆ ಎಳನೀರು ಸಹಿತ ಸೊಳ್ಳೆ ಉತ್ಪಾದನೆಗೆ ಏನು ಬೇಕೋ ಅವೆಲ್ಲವೂ ಕಣ್ಣಿಗೆ ಕುಕ್ಕುವಂತೆ ರಾರಾಜಿಸುತ್ತಿರುತ್ತವೆ. ಸಾಧ್ಯವಾದಷ್ಟು ಇದರ ನಿಯಂತ್ರಣ ಜತೆಗೆ ಶೀಘ್ರ ತ್ಯಾಜ್ಯ ತೆರವು ಮಾಡುವ ವ್ಯವಸ್ಥೆ ಇಂದಿನ ತುರ್ತು ಅಗತ್ಯವಾಗಿದೆ.

ಡೆಂಗ್ಯೂ, ಮಲೇರಿಯಾ, ಇನ್ನಿತರ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸರದಲ್ಲಿ ಸ್ವತ್ಛತೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ. ಈ ನಿಟ್ಟಿನಲ್ಲಿ ನಾಗಬನಗಳಲ್ಲಿ ಎಳನೀರು ಸಹಿತ ಇನ್ನಿತರ ತ್ಯಾಜ್ಯ ಸಂಗ್ರಹಕ್ಕೆ ನಗರಸಭೆ ವತಿಯಿಂದಲೇ ಸೂಕ್ತ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಭಕ್ತರು ಪೂಜೆ ಸಲ್ಲಿಸಲು ಬರುವಾಗ ಸಾಧ್ಯವಾದಷ್ಟು ಪ್ಲಾಸ್ಟಿಕ್‌ ತೊಟ್ಟೆಗಳನ್ನು ತರದೇ, ಹಳೆ ಬಾಟಲಿಗಳು, ಚೀಲ, ಪೇಪರುಗಳಲ್ಲಿ ಅಗತ್ಯ ವಸ್ತುಗಳನ್ನು ಕೊಂಡೊಯ್ಯಬಹುದು. ಉದಾಹರಣೆಗೆ ಎಣ್ಣೆ, ಬತ್ತಿ, ಅರಶಿನದ ಹುಡಿ, ಎಳನೀರನ್ನು ಈ ಮಾದರಿಯಲ್ಲಿ ನಿರ್ವಹಿಸ ಬಹುದು. ಅದಾದ ಮೇಲೂ ಪೂಜೆ ಮುಗಿದ ಮೇಲೆ ಅವುಗಳನ್ನೆಲ್ಲ ಅಲ್ಲೇ ಎಸೆಯದೇ ವಾಪಸು ಕೊಂಡೊಯ್ಯಬೇಕು. ಎಳನೀರಿನ ಚಿಪ್ಪನ್ನು ಹೋಳು ಮಾಡಿ ಉರುವಲಿಗೆ ಬಳಸಬಹುದು ಅಥವಾ ತೆಂಗಿನ ಕಟ್ಟೆಯಲ್ಲಿ ಹೂತು ಗೊಬ್ಬರವಾಗಿ ಬಳಸಬಹುದು.

200 ಡಸ್ಟ್‌ ಬಿನ್‌ ಸಿದ್ಧ

ನಗರಸಭೆ ನಗರದ 35 ವಾರ್ಡ್‌ಗಳಲ್ಲಿ ಸಾರ್ವಜನಿಕ ನಾಗಬನಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಿಗೆ ನಗರಸಭೆಯ ಡಸ್ಟ್ ಬಿನ್‌ ಮತ್ತು ಚೀಲದ ವ್ಯವಸ್ಥೆ ಕೊಡಲಾಗುತ್ತದೆ. ಸದ್ಯಕ್ಕೆ 200 ಡಸ್ಟ್‌ಬಿನ್‌ಗಳು ನಗರಸಭೆಯಲ್ಲಿದೆ. ಇದನ್ನು ನಗರಸಭೆ ವತಿಯಿಂದ ನಾಗಬನಗಳಿಗೆ ಪೂರೈಸುವ ಕೆಲಸ ನಡೆಯುತ್ತದೆ. 35 ವಾರ್ಡ್‌ಗಳಲ್ಲಿ ತ್ಯಾಜ್ಯ ಸಂಗ್ರಹ ವಾಹನವುನಾಗರಪಂಚಮಿಯಂದು (ಆ. 9) ಸಂಜೆ ಮತ್ತು ಮರುದಿನ ಬೆಳಗ್ಗೆ ನಾಗನ ಕಟ್ಟೆಗಳಿಂದ ತ್ಯಾಜ್ಯವನ್ನು ಸಂಗ್ರಹಿಸಲಿದೆ. ಡಸ್ಟ್‌ಬಿನ್‌ ಪೂರೈಕೆ ಮತ್ತು ತ್ಯಾಜ್ಯ ಸಂಗ್ರಹದ ಮಾಹಿತಿಗಾಗಿ ಆರೋಗ್ಯ ನಿರೀಕ್ಷಕರನ್ನು ಆಯಾ ವಾರ್ಡ್‌ನ ನಾಗಬನ ಪ್ರಮುಖರು ಸಂಪರ್ಕಿಸ ಬಹುದು ಎಂದು ಪರಿಸರ ಎಂಜಿನಿಯರ್‌ ಸ್ನೇಹಾ ಅವರು ತಿಳಿಸಿದ್ದಾರೆ.

ನಾಗ ಬನ ಸ್ವತ್ಛವಾಗಿರಲಿ

ಉದಯವಾಣಿ-ಉಡುಪಿ ನಗರಸಭೆ ಸಹಭಾಗಿತ್ವದಲ್ಲಿ ನಾಗ ಬನಗಳಲ್ಲಿ ಸ್ವತ್ಛತೆ ಕಾಪಾಡುವ ಉದ್ದೇಶ, ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ “ನಾಗರ ಪಂಚಮಿ ಸ್ವತ್ಛ ಪಂಚಮಿ’ ಅಭಿಯಾನ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಎಲ್ಲ ನಾಗಬನಗಳಿಗೆ ಡಸ್ಟ್‌ ಬಿನ್‌, ಚೀಲಗಳನ್ನು ನಗರಸಭೆಯೇ ಪೂರೈಕೆ ಮಾಡಲಿದೆ. ಎಲ್ಲರೂ ಡಸ್ಟ್‌ ಬಿನ್‌ಗಳಿಗೆ ತ್ಯಾಜ್ಯವನ್ನು ಹಾಕಬೇಕು. ಎಲ್ಲ ತ್ಯಾಜ್ಯವನ್ನು ಉಡುಪಿ ನಗರಸಭೆ ವ್ಯವಸ್ಥಿತವಾಗಿ ತೆರವುಗೊಳಿಸಲಿದೆ. ಪರಿಸರ ಅಧಿಕಾರಿಗಳಿಗೆ, ಆರೋಗ್ಯ ನಿರೀಕ್ಷಕರಿಗೆ
ಈ ಬಗ್ಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಡೆಂಗ್ಯೂ, ಮಲೇರಿಯಾ ಹೆಚ್ಚುತ್ತಿರುವುದರಿಂದ ಯಾರು ಸಹ ಎಳನೀರು ಸಹಿತ ಮೊದಲಾದ ತ್ಯಾಜ್ಯವನ್ನು ಸಾರ್ವಜನಿಕವಾಗಿ ಎಸೆಯಬೇಡಿ. ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ನಮ್ಮ ಪರಿಸರವನ್ನು ಸೊಳ್ಳೆ ಉತ್ಪಾದನ ತಾಣವಾಗದಂತೆ ನೋಡಿಕೊಳ್ಳೋಣ.
-ರಾಯಪ್ಪ, ಪೌರಾಯುಕ್ತರು, ಉಡುಪಿ

ಭಕ್ತರು ಏನು ಮಾಡಬಹುದು ?

ಪೂಜೆಗೆ ತೆರಳುವಾಗ ಪ್ಲಾಸ್ಟಿಕ್‌ ತೊಟ್ಟೆಗಳನ್ನು ಕೊಂಡೊಯ್ಯಬೇಡಿ.
ತ್ಯಾಜ್ಯ ಇದ್ದರೆ ತೊಟ್ಟಿಯಲ್ಲಿ ಮಾತ್ರ ಹಾಕಿ
ಕಸಗಳನ್ನು ಎಲ್ಲೆಂದರಲ್ಲಿ ಎಸೆಯಬೇಡಿ
ಭಕ್ತಿಯೊಂದಿಗೆ ಸ್ವತ್ಛತೆಗೂ ಆದ್ಯತೆ ನೀಡಿ

ಟಾಪ್ ನ್ಯೂಸ್

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Brahmavar

Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

4

Udupi: ಕೊಳಚೆಯಿಂದ ಕಂಗಾಲಾದ ನಿಟ್ಟೂರು, ಕಲ್ಮಾಡಿ

Malpe: ಕೋಳಿ ಅಂಕಕ್ಕೆ ದಾಳಿ, ಮೂವರು ವಶಕ್ಕೆ

Malpe: ಕೋಳಿ ಅಂಕಕ್ಕೆ ದಾಳಿ, ಮೂವರು ವಶಕ್ಕೆ

Kaup: ಮರಳು ಅಕ್ರಮ ಸಾಗಾಟ: ಟಿಪ್ಪರ್‌ ಪೊಲೀಸರ ವಶಕ್ಕೆ

Kaup: ಮರಳು ಅಕ್ರಮ ಸಾಗಾಟ: ಟಿಪ್ಪರ್‌ ಪೊಲೀಸರ ವಶಕ್ಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು

Brahmavar

Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.