ಕೋವಿಡ್ ಸಂಕಷ್ಟ ಸಮಯದಲ್ಲೂ ನರೇಗಾ ಉದ್ಯೋಗ
ಮುಂಗಾರು ಪೂರ್ವದ 29 ದಿನಗಳಲ್ಲಿ 35,040 ಮಾನವ ದಿನದ ಗುರಿ ಸಾಧನೆ
Team Udayavani, May 28, 2020, 6:13 AM IST
ಸಾಂದರ್ಭಿಕ ಚಿತ್ರ
ಉಡುಪಿ: ಲಾಕ್‌ಡೌನ್ ಕಟ್ಟುನಿಟ್ಟಿನ ಪಾಲನೆ ನಡುವೆ ಜಿಲ್ಲೆಯಲ್ಲಿ ನರೇಗಾ ಕಾಮಗಾರಿ ನಡೆಯುತ್ತಿದೆ. ಹಸುರು ವಲಯ ಆಗಿ ಪರಿವರ್ತನೆ ಆಗುತ್ತಲೇ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಕೆಲಸ ಕಾರ್ಯ ಚುರುಕು ಪಡೆದುಕೊಂಡಿದೆ. ಲಾಕ್‌ಡೌನ್ ನಡುವೆ ಜಿಲ್ಲೆಯಲ್ಲಿ ಎ.1ರಿಂದ ಯೋಜನೆಯಡಿ 158 ಗ್ರಾಮ ಪಂಚಾಯತ್‌ಗಳಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ವಾರ್ಷಿಕ ಗುರಿ 5,12,000 ಮಾನವ ದಿನಗಳ (ಭತ್ತೆ) ಗುರಿ ಹೊಂದಿದ್ದು ಈಗಾಗಲೇ ಅಂದಾಜು 29 ದಿನಗಳಲ್ಲಿ 35,040 ಮಾನವ ದಿನಗಳ ಗುರಿ ಸಾಧಿಸಲಾಗಿದೆ.
ಮಳೆಗಾಲ ಸಿದ್ಧತೆಗಾಗಿ ನಡೆಯುವ ಕೆಲಸಗಳು
ಮಳೆ ನೀರು ಇಂಗುಗುಂಡಿ ಹಾಗೂ ಸರಕಾರಿ ಕಚೇರಿ, ಶಾಲೆ, ಅಂಗನವಾಡಿಗಳಲ್ಲಿ ಮಳೆನೀರು ಕೊಯ್ಲು, ಗಿಡ ನೆಡುವ ಕಾರ್ಯಕ್ರಮ, ಕಿಂಡಿ ಅಣೆಕಟ್ಟು ಹಾಗೂ ಕೆರೆ ಹೂಳೆತ್ತುವುದು, ಬೋರ್‌ವೆಲ್ ರೀಚಾರ್ಜ್‌ಪಿಟ್, ನೀರಾವರಿ ಬಾವಿ, ಕೃಷಿ ಹೊಂಡ, ತೋಟಗಾರಿಕಾ ಪ್ರದೇಶ ವಿಸ್ತರಣೆ, ದನದ ಕೊಟ್ಟಿಗೆ, ಕೋಳಿಗೂಡು, ಮೀನು ಒಣಗಿಸುವ ಕಣ ಇವುಗಳಿಗೆ ಯೋಜನೆಗಳನ್ನು ಬಳಸಿಕೊಳ್ಳಲು ಅವಕಾಶವಿದೆ.
ಯಾವುದಕ್ಕೆಲ್ಲ ಒತ್ತು ನೀಡಲಾಗಿದೆ
ಜಲಸಂರಕ್ಷಣೆ, ತೆರೆದ ಬಾವಿ, ಈ ಸಾಲಿನಿಂದ ಮಲ್ಲಿಗೆ ಕೃಷಿ ಮತ್ತು ರೇಷ್ಮೆ ಕೃಷಿ, ಅಲ್ಪ ಆಳದ ಬಾವಿ, ವರ್ಮಿ ಕಾಂಪೋಸ್ಟ್ ಪಿಟ್, ಅಡಿಕೆ, ತೆಂಗು, ಗೇರು ವಿಸ್ತರಣೆ, ಗಿಡ ನೆಡುವುದು (ಸಾಮಾಜಿಕ ಅರಣ್ಯ), ಮಣ್ಣು ಮತ್ತು ನೀರು ಸಂರಕ್ಷಣ ಕಾಮಗಾರಿಗೆ ಒತ್ತು ನೀಡಲಾಗಿದೆ.
ವೈಯಕ್ತಿಕ ಕಾಮಗಾರಿಗೆ ಹೆಚ್ಚಿನ ಗಮನ
ಬೇರೆ ಜಿಲ್ಲೆಯಂತೆ ಉಡುಪಿ ಜಿಲ್ಲೆಯಲ್ಲಿ ಉದ್ಯೋಗ ಚೀಟಿ ಹೊಂದಿದವರು ಸಾಮೂಹಿಕ ಕೂಲಿ ಕೆಲಸ ಮಾಡಲು ಬೇಡಿಕೆ ಬರುತ್ತಿಲ್ಲ. ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ.
-ಕಿರಣ್ ಪಡ್ನ್ಕರ್, ಉಪ ಕಾರ್ಯದರ್ಶಿ, ಜಿ.ಪಂ. ಉಡುಪಿ
ಲಾಕ್‌ಡೌನ್ ವೇಳೆ ಅನುಸರಿಸ ಬೇಕಾದ ನಿಯಮ
– ಕನಿಷ್ಠ 5 ಮಂದಿ ಕೂಲಿ ಕಾರ್ಮಿಕರು ಇರಬೇಕು.
– ಕೆಲಸ ಮಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
– ಮಾಸ್ಕ್ ಧರಿಸುವುದು.
– ಕೈತೊಳೆಯುತ್ತಾ ಇರಬೇಕು.
– ಕಾಮಗಾರಿ ಪ್ರಾರಂಭ ಮುಂಚಿತ ಕರೊನಾ ವಿರುದ್ಧ ಹೋರಾಡಲು ಪ್ರತಿಜ್ಞಾ ವಿಧಿ ಬೋಧಿಸಬೇಕು.
– ಸಾಮಾಜಿಕ ಅಥವಾ ವೈಯಕ್ತಿಕ ಕೆಲಸ ಮಾಡುವುದು.
ನರೇಗಾ ಮಾಹಿತಿ ಪಡೆಯಲು ತಾಲೂಕುವಾರು ಮಾಹಿತಿ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ : 9480878000
ಉಪ ಕಾರ್ಯದರ್ಶಿ: 9480878001
ಯೋಜನಾ ನಿರ್ದೇಶಕರು : 9480878002
ಮುಖ್ಯ ಲೆಕ್ಕಾಧಿಕಾರಿ : 9480878003
ಮುಖ್ಯ ಯೋಜನಾಧಿಕಾರಿ : 9480878004
ಸಹಾಯಕ ಕಾರ್ಯದರ್ಶಿ: 9480878005
ಉಡುಪಿ ತಾ|: 9480878110 / 0820 2520447
ಕಾರ್ಕಳತಾ|:9480878100/ 08258-230203
ಕುಂದಾಪುರ ತಾ|:9480878105/ 8254-230360
ಸಹಾಯಕ ನಿರ್ದೇಶಕರು, ಉಡುಪಿ
(ಎಂಜಿಎನ್‌ಆರ್‌ಇಜಿಎ): 9480878112
ಸಹಾಯಕ ನಿರ್ದೇಶಕರು, ಕಾರ್ಕಳ :
(ಎಂಜಿಎನ್‌ಆರ್‌ಇಜಿಎ) 9480154543
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.