ನವರಾತ್ರಿ: ಉದಯವಾಣಿ ನವರೂಪ- ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ
ಡಾ.ಸಂಧ್ಯಾ ಎಸ್ .ಪೈಯವರು ಮೊದಲ ದಿನದ ಬಿಳಿ ಬಣ್ಣದ ರಂಗು ತುಂಬುವ ಅತಿಥಿಯಾಗಿದ್ದಾರೆ.
Team Udayavani, Sep 26, 2022, 4:10 PM IST
ಉಡುಪಿ: ನಾರಿ ಶಕ್ತಿಯನ್ನು ಆರಾಧಿಸುವ, ಗೌರವಿಸುವ ಸಂಭ್ರಮಿಸುವ ನವರಾತ್ರಿ ಹಬ್ಬ ಇಂದಿನಿಂದ (ಸೆ.26) ಆರಂಭಗೊಂಡಿದೆ. ಈ ಮಹಾಪರ್ವದ ಸಡಗರವನ್ನು ಹೆಚ್ಚಿಸುವುದಕ್ಕಾಗಿ ಜನಮನದ ಜೀವನಾಡಿ ಉದಯವಾಣಿ ಆಯೋಜಿಸಿರುವ ನವರಾತ್ರಿ ನವರೂಪದ ಪ್ರಥಮ ದಿನದಂದು (ಬಿಳಿ ಬಣ್ಣ) ಮಧ್ಯಾಹ್ನವೇ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾವಿರಾರು ಫೋಟೊಗಳು ವಾಟ್ಸಪ್ ನಲ್ಲಿ ಹರಿದು ಬಂದಿದೆ.
ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಸಂಧ್ಯಾ ಎಸ್ .ಪೈಯವರು ಮೊದಲ ದಿನದ ಬಿಳಿ ಬಣ್ಣದ ರಂಗು ತುಂಬುವ ಅತಿಥಿಯಾಗಿದ್ದಾರೆ. ನವರಾತ್ರಿ ಇಂದಿನಿಂದ ಆರಂಭ. ಉದಯವಾಣಿಯ ನವರೂಪ ಉತ್ಸವವೂ ಸಹ, ನವಶಕ್ತಿಗಳನ್ನು ಆರಾಧಿಸಿ ನಮ್ಮೊಳಗಿನ ಧೀಶಕ್ತಿಯನ್ನು ಜಾಗೃತಗೊಳಿಸಿಕೊಳ್ಳೋಣ. ನಾಣು ನನ್ನ ಸಹೋದ್ಯೋಗಿಗಳೊಂದಿಗೆ ಬಿಳಿ ದಿರಿಸು ಉಟ್ಟು ನವರೂಪ ಉತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದೇವೆ. ಬನ್ನಿ ನೀವೂ ನಮ್ಮೊಂದಿಗೆ ಸೇರಿಕೊಳ್ಳಿ ಸಂಭ್ರಮಿಸಿ, ಫೋಟೋ ಕಳುಹಿಸಿ…ಇದು ಇಂದಿನ ಅತಿಥಿ ಡಾ.ಸಂಧ್ಯಾ ಎಸ್.ಪೈ ಅವರು ನೀಡಿರುವ ಆಹ್ವಾನವಾಗಿದೆ.
ನವರಾತ್ರಿ ಸಂಭ್ರಮವನ್ನು ಇಮ್ಮಡಿ, ಮುಮ್ಮಡಿಗೊಳಿಸಿಕೊಳ್ಳಲು ಉದಯವಾಣಿಯ ನವರೂಪ ಒಂದು ಉತ್ತಮ ಅವಕಾಶ. ವರ್ಷಕ್ಕೊಮ್ಮೆ ಕದತಟ್ಟುವ ಈ ಅಪೂರ್ವ ಕಾರ್ಯಕ್ರಮ ನಿಮ್ಮ ಹಬ್ಬದ ಆಚರಣೆಗೆ ಒಂದು ವಿಶಿಷ್ಟ ಆಯಾಮ ನೀಡಲಿದೆ. ಬನ್ನಿ…ಇಂದಿನಿಂದ ಆರಂಭಗೊಂಡ ಉದಯವಾಣಿ ನವರೂಪದಲ್ಲಿ ನಿಮ್ಮ ಗೆಳತಿಯರು, ಕುಟುಂಬ ಸದಸ್ಯೆಯರ ಜತೆ ಪಾಲ್ಗೊಳ್ಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
Pro Kabaddi League: ಯುಪಿ ಯೋಧಾಸ್,ಪಾಟ್ನಾ ಪೈರೇಟ್ಸ್ ಸೆಮಿಫೈನಲಿಗೆ
IND Vs AUS ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯ ರನ್ ಓಟಕ್ಕೆ ಬುಮ್ರಾ ಬ್ರೇಕ್
Padubidri: ಕಾರು ಢಿಕ್ಕಿ; ಪಾದಚಾರಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.