ಕುಂಜಾರುಗಿರಿ: ಹೊಸ ಪಂಪು ಅಳವಡಿಕೆ – ಬಳಕೆಗೆ ಸಿದ್ಧ
Team Udayavani, Apr 28, 2019, 6:20 AM IST
ಕಟಪಾಡಿ: ಕುರ್ಕಾಲು ಗ್ರಾ. ಪಂ. ವ್ಯಾಪ್ತಿಯ ಕುಂಜಾರುಗಿರಿ ಎಂಬಲ್ಲಿ ಹೊಸದಾಗಿ ತೆರೆದ ಶುದ್ಧ ಕುಡಿಯುವ ನೀರಿನ ಘಟಕವು ಕೈ ಕೊಟ್ಟು ಒಂದೂವರೆ ತಿಂಗಳು ಕಳೆದ ಬಳಿಕ ಇದೀಗ ರಿಪೇರಿ ನಡೆಸಲಾಗಿದ್ದು ಶುದ್ಧ ಕುಡಿಯುವ ನೀರು ಉಪಯೋಗಕ್ಕೆ ಲಭ್ಯವಿದೆ.
ಕೆಟ್ಟು ತಿಂಗಳು ಕಳೆದರೂ ರಿಪೇರಿ- ನಿರ್ವಹಣೆ ಕಾಣದ ಈ ಘಟಕದ ಬಗ್ಗೆ ಈ ಭಾಗದ ಬಳಕೆದಾರರು ಕಳಪೆ ಮಟ್ಟದ ಯಂತ್ರ, ಕಳಪೆ ಕಾಮಗಾರಿಯ ಶಂಕೆ ವ್ಯಕ್ತಪಡಿಸಿದ್ದರು. ಆದರೆ ಇದೀಗ ಶನಿವಾರ ತಂತ್ರಜ್ಞರು ಆಗಮಿಸಿ ಹೊಸತಾದ ಮೋಟಾರನ್ನು ಅಳವಡಿಸಿದ್ದಾರೆ. ಸ್ಟೀಲ್ ಡ್ರಮ್ ಹೊಂದಿದ್ದ ಅತಿ ಸಣ್ಣ ರಂಧ್ರವನ್ನು ಪ್ಯಾಚ್ ಮೂಲಕ ಸರಿಪಡಿಸಲಾಗಿದೆ. ಇದೀಗ ಎರಡು ರೂ. ನಾಣ್ಯವನ್ನು ಬಳಸಿ 10 ಲೀಟರ್ ಶುದ್ಧ ಕುಡಿಯುವ ನೀರನ್ನು ಪಡೆಯುವ ಈ ಯೋಜನೆಯನ್ನು ಜನರ ಬಳಕೆಗೆ ಸಿದ್ಧಪಡಿಸಲಾಗಿದೆ.
ಈ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿತ್ತು.
5 ಲಕ್ಷ ರೂ. ವೆಚ್ಚದ ಪ್ರಾಜೆಕ್ಟ್
ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಜಿ. ಪಂ. ಉಡುಪಿ, ತಾ.ಪಂ. ಉಡುಪಿ, ಗ್ರಾ. ಪಂ. ಕುರ್ಕಾಲು 2016-17ನೇ ಸಾಲಿನ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿಯಲ್ಲಿ ಕುಂಜಾರುಗಿರಿಯಲ್ಲಿ ಉಡುಪಿಯ ಕೆ. ಆರ್. ಐ. ಡಿ. ಎಲ್. ಇಲಾಖೆಯು 5 ಲಕ್ಷ ರೂ. ವೆಚ್ಚದ ಈ ಘಟಕವನ್ನು ಅನುಷ್ಠಾನಗೊಳಿಸುವ ಮೂಲಕ ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿತ್ತು.
ಘಟಕ ನಿರ್ವಹಣೆ ಮಾಡಲಾಗಿದೆ
ಘಟಕದಲ್ಲಿ ವೋಲ್ಟೆàಜ್ ಸಮಸ್ಯೆಯಿಂದಾಗಿ ಕೆಟ್ಟು ಹೋಗಿದ್ದ ಮೋಟಾರನ್ನು ಬದಲಾಯಿಸಿ ಹೊಸತಾದ ಮೋಟಾರನ್ನು ಅಳವಡಿಸಲಾಗಿದೆ. ಸ್ಟೀಲ್ ಡ್ರಮ್ಮು ದುರಸ್ತಿ ಮಾಡಿದ್ದು, ಘಟಕವನ್ನು ನಿರ್ವಹಣೆ ಮಾಡಲಾಗಿದೆ .
-ಧೀರಜ್, ಏರಿಯಾ ಎಂಜಿನಿಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.