![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 23, 2020, 4:35 AM IST
ಆರೋಗ್ಯ ಇಲಾಖೆ ಸಿಬಂದಿ ರೋಗ ತಡೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪರಿಶೀಲಿಸಿದರು.
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಸೂಚನೆ ಮುಕ್ತಾಯಗೊಂಡಿದ್ದು, ನೆರೆಹಾನಿ ಪ್ರದೇಶಗಳು ಸಹಜ ಸ್ಥಿತಿಗೆ ಬರುತ್ತಿವೆ. ನಷ್ಟದ ವಿವರಗಳನ್ನು ಕಲೆಹಾಕುವ ನಿಟ್ಟಿನಲ್ಲಿ ಕಂದಾಯ, ಕೃಷಿ ಮತ್ತು ತೋಟಗಾರಿಕೆ, ಪಿಡಬ್ಲ್ಯುಡಿ, ಮೆಸ್ಕಾಂ ಸಹಿತ ಹಲವು ಇಲಾಖೆಗಳು ನಿರತವಾಗಿವೆ.
ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆಯ ಸಿಬಂದಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಾಂಕ್ರಾಮಿಕ ರೋಗ ತಡೆ ಉಂಟಾಗದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಜಿಲ್ಲಾ, ಸಮುದಾಯ, ಪ್ರಾ. ಆರೋಗ್ಯ ಕೇಂದ್ರಗಳ ಸಿಬಂದಿ ಸೋಮವಾರದಿಂದಲೇ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಅತಿವೃಷ್ಟಿ ಹಾನಿ ವಿವರ ಉಡುಪಿ ಜಿಲ್ಲೆಯಲ್ಲಿ ಅತಿವೃಷ್ಟಿ ಹಾನಿಗಳ ಬಗ್ಗೆ ಸಮೀಕ್ಷೆ ನಡೆಯುತ್ತಿದೆ. ಸೆ.22ರ ಮಾಹಿತಿಯ ಪ್ರಕಾರ ತೋಟಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ 34.66 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದ್ದು, 39.32 ಲ.ರೂ.ನಷ್ಟ ಸಂಭವಿಸಿದೆ.
ಕಾಪು ತಾಲೂಕಿನಲ್ಲಿ 34.93 ಲ.ರೂ., ಬ್ರಹ್ಮಾವರ 18.10 ಲ.ರೂ., ಕಾರ್ಕಳ 1.80 ಲ.ರೂ., ಬೈಂದೂರಿನಲ್ಲಿ 3 ಲ.ರೂ., ಉಡುಪಿಯಲ್ಲಿ 31.74 ಲ.ರೂ. ನಷ್ಟ ಅಂದಾಜಿಸಲಾಗಿದೆ. ಮೆಸ್ಕಾಂ ಉಡುಪಿ, ಕುಂದಾಪುರ ವಿಭಾಗ ವ್ಯಾಪ್ತಿಯಲ್ಲಿ 2 ದಿನಗಳಲ್ಲಿ 106 ಕಂಬಗಳು
ಧರೆಗುರುಳಿದ್ದು, 10 ವಿದ್ಯುತ್ ಪ್ರವಾಹಕ ಮತ್ತು 3 ಕಿ.ಮೀ. ಉದ್ದದ ತಂತಿಗಳಿಗೆ ಹಾನಿಯಾಗಿ ಸುಮಾರು 25 ಲ.ರೂ. ನಷ್ಟವಾಗಿದೆ ಸುಮಾರು
460 ಹೆ. ಭತ್ತದ ಗದ್ದೆಗಳು ನೆರೆ ಪೀಡಿತವಾಗಿವೆ. ನೆರೆ ಇಳಿದ ಅನಂತರ ನಷ್ಟ ಅಂದಾಜು ಮಾಡಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪರಿಹಾರ ಪಡೆಯಲು ಏನೇನು ದಾಖಲೆ ಬೇಕು
ಎಲ್ಲ ಸಂತ್ರಸ್ತರನ್ನು ಅಧಿಕಾರಿಗಳು ಭೇಟಿ ಮಾಡಿ ಮಾಹಿತಿ ಸಂಗ್ರಹಿಸುತ್ತಾರೆ. ಒಂದು ವೇಳೆ ತಪ್ಪಿ ಹೋದಲ್ಲಿ ಸಂತ್ರಸ್ತರು ಸ್ಥಳೀಯ ಗ್ರಾಮಕರಣಿಕರಿಗೆ ಹಾನಿಯ ಬಗ್ಗೆ 1 ಫೋಟೋ ಹಾಗೂ ಹಾನಿಯ ವರದಿ ಅಂದಾಜು ಮೊತ್ತ ಸೇರಿಸಿ ಪಡಿತರ ಚೀಟಿ, ಆಧಾರ್, ಬ್ಯಾಂಕ್ ಪಾಸ್ ಪುಸ್ತಕ, ಮನೆ ತೆರಿಗೆ ರಶೀದಿ, ಸಾಧ್ಯ ವಾದರೆ ಆರ್‌ಟಿಸಿ ಇತ್ಯಾದಿ ದಾಖಲೆಗಳನ್ನು ಸಲ್ಲಿಸಬೇಕು. ಅನಂತರ ಗ್ರಾಮಕರಣಿಕರು ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಬಗ್ಗೆ ಮಾಹಿತಿ ಲೆಕ್ಕಾಚಾರ ಪಡೆದುಕೊಳ್ಳಲಿದ್ದಾರೆ.
ನಷ್ಟದ ಮೊತ್ತ ಲೆಕ್ಕಾಚಾರ
ಜಿಲ್ಲೆಯಲ್ಲಿ ಮಳೆ ಹಾಗೂ ನೆರೆ ನಿಂತುಹೋದ ಮೇಲೆ ನಷ್ಟದ ಬಗ್ಗೆ ಮಾಹಿತಿ ಕಲೆಹಾಕುವಲ್ಲಿ ವಿವಿಧ ಇಲಾಖೆಗಳು ಮುಂದಾಗಿವೆ. ಮನೆ ಕಳೆದುಕೊಂಡವರು, ಬೆಳೆಹಾನಿ, ಜಾನುವಾರು ಕಳೆದುಕೊಂಡವರು ಸಹಿತ ಹಲವು ಮಂದಿ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ಜಿಲ್ಲೆಯ ಎಲ್ಲ ತಾಲೂಕುಗಳಿಗೆ ತಹಶೀಲ್ದಾರ್‌ಗಳು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನಷ್ಟದ ಮೊತ್ತದ ಲೆಕ್ಕಾಚಾರದಲ್ಲಿ ತೊಡಗಿಸಿ ಕೊಂಡಿದ್ದಾರೆ. ಬಟ್ಟೆಬರೆ, ಗೃಹೋಪಯೋಗಿ ಸಾಮಗ್ರಿ, ಮನೆ ಕಳೆದುಕೊಂಡವರು, ಹೊಸ ಮನೆ ನಿರ್ಮಿಸುವವರಿಗೆ, 15ರಿಂದ 25 ಶೇ. ಹಾನಿಗೊಳಗಾದ ಮನೆಗಳು, 25ರಿಂದ 75ಶೇ. ಹಾನಿಗೊಳಗಾದ ಮನೆಗಳು ಸಹಿತ ನಷ್ಟದ ಲೆಕ್ಕಾಚಾರಗಳನ್ನು ವಿಂಗಡಿಸಲಾಗುತ್ತದೆ. ಇಂತಹವರಿಗೆ ಕೇಂದ್ರ ಸರಕಾರದ ಪ್ರಾಕೃತಿಕ ವಿಕೋಪ ನಿಧಿಯಡಿ ಪರಿಹಾರ ಕಾರ್ಯ ಮಂಜೂರು ಮಾಡಲಾಗುತ್ತದೆ.
2000 ರೂ. ನಗರಸಭಾ ವ್ಯಾಪ್ತಿ ಯಲ್ಲಿ ಹೆಚ್ಚುವರಿ ಪರಿಹಾರ
05 ಲ.ರೂ. ಕೆಡವಿ ಹೊಸ ಮನೆ ಕಟ್ಟಲು ಪರಿಹಾರ
You seem to have an Ad Blocker on.
To continue reading, please turn it off or whitelist Udayavani.