ಕತ್ತಲೆಯಲ್ಲಿರುವ ಸ್ಥಳಗಳಿಗೆ ಬೆಳಕು ತೋರುವಿರಾ?
ಉರಿಯದ ಬೀದಿದೀಪ; ಸವಾರರಿಗೆ, ಪಾದಚಾರಿಗಳಿಗೆ ಸಂಕಷ್ಟ
Team Udayavani, May 20, 2020, 1:48 PM IST
ಸಾಂದರ್ಭಿಕ ಚಿತ್ರ
ಉಡುಪಿ: ದಿನನಿತ್ಯ ಸಹಸ್ರಾರು ಮಂದಿ ಓಡಾಡುವ ಕಡಿಯಾಳಿಯಿಂದ ಮಣಿಪಾಲದ ಎಂಐಟಿ ವರೆಗಿನ ಬೀದಿದೀಪಗಳು ಉರಿಯುತ್ತಿಲ್ಲ. ದೀಪಗಳು ಉರಿಯದೆ ವರ್ಷಗಳೇ ಕಳೆದಿವೆ. ನಿತ್ಯ ಚಟುವಟಿಕೆಯಿಂದ ಕೂಡಿರುವ ನಗರ ಈಗ ಕತ್ತಲೆಯಲ್ಲಿದೆ ಹಾಗೂ ಉಡುಪಿ ನಗರದ ಬಹುತೇಕ ಕಡೆ ಬೀದಿದೀಪಗಳೇ ಇಲ್ಲ ಇರುವ ದೀಪಗಳು ಉರಿಯುತ್ತಿಲ್ಲ.
ಬೀದಿದೀಪಗಳು ಉರಿಯದೆ ಇರುವುದರಿಂದ ಪರಿಸರದವರಿಗೆ, ಸಾರ್ವ ಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಪರಿಸರದ ನಾಗರಿಕರು ದೂರುತ್ತಿದ್ದಾರೆ. ವರ್ಷದ ಹಿಂದೆ ರಾ. ಹೆದ್ದಾರಿಯಲ್ಲಿ ರಸ್ತೆ ವಿಸ್ತರಣೆಯ ವೇಳೆ ಅಭಿವೃದ್ಧಿ ಕಾಮಗಾರಿಗೆಂದು ರಸ್ತೆಯನ್ನು ಅಗೆಯಲಾಗಿತ್ತು. ಆಗ ಬೀದಿದೀಪಗಳಿಗೆ ಹಾನಿಯುಂಟಾಗಿತ್ತು. ಕಾಮಗಾರಿ ಮುಗಿದ ಅನಂತರ ಅದನ್ನು ಮರು ಜೋಡಿಸಿಲ್ಲ.
ಮಣಿಪಾಲದಿಂದ ಅಲೆವೂರು ಮೂಲಕ ಹಾದುಹೋಗುವ ವೇಣುಗೋಪಾಲ ದೇವಸ್ಥಾನ, ದಶರಥ ನಗರ, ಕೈಗಾರಿಕಾ ಪ್ರದೇಶ ಮುಂತಾದ ಕಡೆಗಳಿಗೆ ಕತ್ತಲೆಯಲ್ಲೆ ಸಾಗಬೇಕು. ಆ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಪಾದಚಾರಿಗಳು, ವಾಹನ ಸವಾರರು ಇದ್ದು, ಅವರೆಲ್ಲ ಬೀದಿ ದೀಪ ಇಲ್ಲದೆ ಹಲವು ವಿಧದ ತೊಂದರೆ ಅನುಭವಿಸುತ್ತಿದ್ದಾರೆ. ಕತ್ತಲೆಯಲ್ಲೆ ಪಾದಚಾರಿಗಳು ನಡೆದು ಹೋಗುತ್ತಿರುತ್ತಾರೆ. ರಾತ್ರಿ ವೇಳೆ ವಾಹನಗಳಲ್ಲಿ ತೆರಳುವವರು ಕೂಡ ತೊಂದರೆ ಅನುಭವಿಸುತ್ತಾರೆ. ಇನ್ನೇನು ಮಳೆಗಾಲ ಆರಂಭವಾಗಲಿದೆ. ಅವಾಗ ತೊಂದರೆ ಮತ್ತಷ್ಟು ಹೆಚ್ಚುವ ಭೀತಿ ಇದೆ.
ಚತುಷ್ಪಥ ರಸ್ತೆ ಕಾಮಗಾರಿಯಿಂದ ಸಮಸ್ಯೆಯಾಗಿತ್ತು. ಕಾಮಗಾರಿ ಪೂರ್ಣಗೊಂಡರೂ ತಾಂತ್ರಿಕ ಕಾರಣಗಳಿಂದ ಬೀದಿ ದೀಪ ಅಳವಡಿಕೆ ಪೆಂಡಿಂಗ್‌ನಲ್ಲಿದೆ. ಈ ಬಗ್ಗೆ ಗಮನ ಹರಿಸುತ್ತೇವೆ.
-ಆನಂದ್ ಕಲ್ಲೋಳಿಕರ್, ಪೌರಾಯುಕ್ತ, ನಗರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.