ಹಳೇ ಕಾಲದ ಶಿಲಾಶಾಸನ ಪತ್ತೆ
Team Udayavani, May 22, 2020, 5:33 AM IST
ಉಡುಪಿ: ಆತ್ರಾಡಿ ಮೂಲಕ ಮೂಡುಬೆಳ್ಳೆಗೆ ವಾಹನದಲ್ಲಿ ಸಂಚರಿಸುವಾಗ ರಸ್ತೆ ಪಕ್ಕದ ಮೈಲುಗಲ್ಲಿನಲ್ಲಿ ಕಿ.ಮೀ. ಪರಿಶೀಲಿಸುವ ಸಾರ್ವಜನಿಕರಿಗೆ ಗುಂಡುಪಾದೆಯ ಬಸ್ ನಿಲ್ದಾಣದ ಬಳಿ ಶಿಲಾಶಾಸನಕ್ಕೆ ಬಿಳಿ ಬಣ್ಣ ಹಚ್ಚಿರುವುದು ಕಂಡುಬಂದಿದೆ.
ಈ ಶಾಸನದ ಮೇಲ್ಭಾಗದಲ್ಲಿ ಸೂರ್ಯ ಚಂದ್ರ, ಮಧ್ಯದಲ್ಲಿ ದೊಡ್ಡದಾದ ಶಿವಲಿಂಗ ಕಂಡುಬಂದಿದ್ದರೂ ಶಾಸನದಲ್ಲಿ ಬರೆಯುವ ಭಾಗದಲ್ಲಿ ಸಿಮೆಂಟ್ ಹಚ್ಚಿದಂತೆ ಕಾಣಿಸುವುದರಿಂದ ಸರಿಯಾದ ಚಿತ್ರಣ ಕಾಣದಂತಾಗಿದೆ. ಈ ಶಿಲಾಶಾಸನವು ಸುಮಾರು ಎರಡೂವರೆ ಅಡಿ ಉದ್ದ, ಒಂದೂವರೆ ಅಡಿ ಅಗಲ ಹೊಂದಿದೆ.
ಈ ಶಾಸನವು ಮುಂದಿನ ದಿನಗಳಲ್ಲಿ ಮೈಲುಗಲ್ಲಾಗಿ ಪರಿವರ್ತನೆಯಾಗುವ ಸಾಧ್ಯತೆ ಇದ್ದು, ಗತಕಾಲದ ಶಿಲಾಶಾಸನವೊಂದು ರಸ್ತೆಬದಿಯಲ್ಲಿ ಮೈಲುಗಲ್ಲಾಗಿ ಪರಿವರ್ತನೆಯಾಗದೇ ಮುಂದಿನ ಪೀಳಿಗೆಗೆ ಇದರ ಮಾಹಿತಿ ತಿಳಿಯುವಂತಾಗಬೇಕು ಹಾಗೂ ಶಾಸನದ ರಕ್ಷಣೆಯಾಗಬೇಕು ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಗಮನಹರಿಸಬೇಕು ಎನ್ನುವುದು ಹಲವರ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
ನ.8 ರಂದು ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಮಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.