ಪಡುಬಿದ್ರಿ: ಬೈಕ್ – ಟೆಂಪೋ ನಡುವೆ ಡಿಕ್ಕಿ: ಬೈಕ್ ಸವಾರ ಸಾವು
Team Udayavani, Apr 10, 2021, 11:36 AM IST
![padubidri](https://www.udayavani.com/wp-content/uploads/2021/04/padubidri-620x372.jpg)
![padubidri](https://www.udayavani.com/wp-content/uploads/2021/04/padubidri-620x372.jpg)
ಪಡುಬಿದ್ರಿ: ಬೈಕ್ ಮತ್ತು ಟೆಂಪೋ ವಾಹನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಪೇಟೆಯಲ್ಲಿ ಶನಿವಾರ ಬೆಳಗ್ಗೆ (10-4-2021) ನಡೆದಿದೆ.
ಹೆಜಮಾಡಿಯ ಎನ್.ಎಸ್ ರೋಡ್ ನ ನಿವಾಸಿ ಶಿಯಾಲಿ ಹಾಜಿ ಕನ್ನಂಗಾರ್ ಇವರ ಮಗ ಮುಹಮ್ಮದ್ ಅಲಿ ಮೃತಪಟ್ಟವರು.
ಶನಿವಾರ ಬೆಳಗ್ಗೆ ಬೈಕ್ ನಲ್ಲಿ ಸಂಚರಿಸುತಿದ್ದಾಗ ಟೆಂಪೋ ವಾಹನ ಡಿಕ್ಕಿ ಹೊಡೆದಿತ್ತು. ಕೂಡಲೇ ಮುಹಮ್ಮದ್ ಅಲಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಗಂಭೀರ ಗಾಯಗೊಂಡಿದ್ದರಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಆರ್ ಎಸ್ ಎಸ್ ವರಿಷ್ಠ ಮೋಹನ್ ಭಾಗವತ್ ಗೆ ಕೋವಿಡ್ ದೃಢ, ಆಸ್ಪತ್ರೆಗೆ ದಾಖಲು
ಮುಹಮ್ಮದ್ ಅಲಿ PWD ಕಾಂಟ್ರ್ಯಾಕ್ಟರ್ ಆಗಿದ್ದರು. ಇವರು ಪತ್ನಿ ಮತ್ತು ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪ್ರತ್ಯೇಕ ಎನ್ ಕೌಂಟರ್: ಏಳು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ