ಪಡುಬಿದ್ರಿ: ಅಪಾಯಕಾರಿ ಒಳಚರಂಡಿ
Team Udayavani, May 15, 2020, 5:28 AM IST
ಪಡುಬಿದ್ರಿ: ಮಾರುಕಟ್ಟೆ ಪ್ರವೇಶಿಸುವ ಜನನಿಬಿಡ ರಸ್ತೆ ಬಳಿಯೇ ಹೆದ್ದಾರಿ ಚತುಷ್ಪಥದೆಡೆಯ ಸರ್ವಿಸ್ ರಸ್ತೆಗೆ ತಾಗಿರುವ ಒಳಚರಂಡಿ ಸದ್ಯ ಅಪಾಯಕಾರಿ ಸ್ಥಿತಿಯಲ್ಲೇ ಮುಂದುವರಿದಿದೆ. ರಿಕ್ಷಾಸಹಿತ ಅತ್ತಿತ್ತ ನಡೆದಾಡುವ ಹಲವಾರು ಮಂದಿ ಈ ಗುಂಡಿಯೊಳಗೆ ಬಿದ್ದು ಗಾಯಗೊಂಡು ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿಯೂ ಚಿಕಿತ್ಸೆ ಪಡೆದಿದ್ದಾರೆ.
ಆರೇಳು ತಿಂಗಳಿಂದ ಬಾಯ್ದೆರೆದಿರುವ ಈ ಒಳ ಚರಂಡಿಯು ಇನ್ನೂ ನಿರ್ಮಾಣ ಹಂತದಲ್ಲೇ ಇದೆ. ಕಬ್ಬಿಣದ ರಾಡ್‌ಗಳನ್ನು ಕಟ್ಟಿಡಲಾಗಿದೆ. ಇದನ್ನು ಅಪರ ಜಿಲ್ಲಾಧಿಕಾರಿಗಳ ಗಮನಕ್ಕೂ ಈ ಹಿಂದೆಯೇ ತರಲಾಗಿದೆ. ಆದರೂ ಹೆದ್ದಾರಿ ಗುತ್ತಿಗೆಯನ್ನು ಹೊಂದಿರುವ ನವಯುಗ ನಿರ್ಮಾಣ ಕಂಪೆನಿಗೆ ಇನ್ನೂ ಇದರ ಅಪಾಯದ ಅರಿವಾದಂತಿಲ್ಲ.
ಬರುತ್ತಿರುವ ಮಳೆಗಾಲಕ್ಕೆ ಮೊದಲೇ ಈ ಚರಂಡಿಯ ಕಾಮಗಾರಿ ಮುಕ್ತಾಯವಾಗಬೇಕು. ತಾನೂ ಗಮನಿಸಿದ್ದೇನೆ. ಅಪರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮಗದೊಮ್ಮೆ ಒತ್ತಡವನ್ನು ಹೇರುವುದಾಗಿ ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಹೇಳಿದ್ದಾರೆ.
ಈ ಕುರಿತಾಗಿ ಸೈಟ್ ಎಂಜಿನಿಯರ್ ಕಿರಣ್‌ಅವರನ್ನು ಮಾತನಾಡಿದಾಗ ಕಾಂಕ್ರೀಟ್ ಕಾಮಗಾರಿ ನಿರ್ವಹಿಸುವ ನವಯುಗ ತಂಡದ ಕಾರ್ಮಿಕರು ಉತ್ತರ ಪ್ರದೇಶ ಮುಂತಾದೆಡೆಗಳಿಗೆ ಕೊರೊನಾ ಮಹಾಮಾರಿಯಿಂದಾಗಿ ತೆರಳುವಂತಾಗಿದೆ. ತಮಗೀಗ ಈ ಕಾರ್ಯ ಪೂರ್ಣಗೊಳಿಸಲು ಕಾರ್ಮಿಕರ ಕೊರತೆಯಿದೆ.
ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ ಇಲ್ಲವಾದಲ್ಲಿ ಮಳೆಗಾಲಕ್ಕೆ ಮೊದಲು ಕಾಂಕ್ರೀಟ್ ಸ್ಲ್ಯಾಬ್‌ಗಳನ್ನಿರಿಸಿ ತಾತ್ಕಾಲಿಕವಾಗಿ ಮುಚ್ಚಿಬಿಡುತ್ತೇವೆ ಎಂದಿದ್ದಾರೆ.
ಅಂತೂ ಇಂತೂ ಮಳೆಗಾಲದೊಳಗೆ ಈ ಗುಂಡಿ ಯನ್ನು ಮುಚ್ಚದಿದ್ದರೆ ಇದೇ ಮರಣಗುಂಡಿಯೂ ಆಗಬಹುದೆಂದು ಸಾರ್ವಜನಿಕರು ಹೇಳತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.