Padubidri: ವಾಹನ ಅಪಘಾತಕ್ಕೆ ಕಾರಣವಾಗುತ್ತಿರುವ ಫ್ಲೆಕ್ಸ್‌ಗಳು

ಫುಟ್‌ಪಾತ್‌ ಆಕ್ರಮಿಸಿಕೊಂಡ ಫ‌ಲಕಗಳಿಂದ ರಸ್ತೆಗಿಳಿಯುವ ಜನರು | ವಾಹನಗಳ ಢಿಕ್ಕಿ

Team Udayavani, Jan 2, 2025, 3:34 PM IST

10

ಪಡುಬಿದ್ರಿ: ಅಗಲ ಕಿರಿದಾದ ಪಡುಬಿದ್ರಿಯ ರಾ. ಹೆದ್ದಾರಿಯಲ್ಲಿ ಕಳೆದ ಒಂದು ತಿಂಗಳಲ್ಲಿ ಆರು ಹೆದ್ದಾರಿ ವಾಹನ ಅಪಘಾತಗಳು ಸಂಭವಿಸಿದ್ದು, ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿನ ಅಪಘಾತಗಳಿಗೆ ಫ್ಲೆಕ್ಸ್‌ಗಳು ಕೂಡಾ ಕಾರಣವಾಗುತ್ತಿರುವುದು ಆತಂಕ ಮೂಡಿಸಿದೆ.

ಪಡುಬಿದ್ರಿ ಜಂಕ್ಷನ್‌ನಲ್ಲಿ ಮೂರು ಕಡೆಗಳಿಂದ ವಾಹನಗಳು ನುಗ್ಗಿ ಬರುತ್ತವೆ. ಈ ಸಂದರ್ಭದಲ್ಲಿ ರಸ್ತೆ ದಾಟುವುದು ಕೂಡಾ ದುಸ್ತರವಾಗುತ್ತಿದೆ. ವಾಹನಗಳನ್ನು ಎಲ್ಲಿ ಚಲಾಯಿಸಬೇಕು ಎನ್ನುವ ಅಯೋಮಯ ಸ್ಥಿತಿ ನಿರ್ಮಾಣವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿ ಯಾವುದೇ ರೀತಿಯ ಮಾರ್ಗಸೂಚಿಗಳು, ಚಿಹ್ನೆಗಳು ಇಲ್ಲದಿರುವುದು.

ರಾಷ್ಟ್ರೀಯ ಹೆದ್ದಾರಿ ಇಲಾಖೆ ಇಲ್ಲಿ ಯಾವುದೇ ಝೀಬ್ರಾ ಕ್ರಾಸಿಂಗ್‌ ಹಾಕಿಲ್ಲ. ವಾಹನಗಳ ವೇಗ ನಿಯಂತ್ರಣಕ್ಕೆ ಹೆದ್ದಾರಿಯಲ್ಲಿ ಫ‌ಲಕಗಳನ್ನು ಅಳವಡಿಸಿಲ್ಲ. ಕ್ರಾಸಿಂಗ್‌ಗಳಲ್ಲಿ ಬ್ಲಿಂಕರ್‌ ಹಾಕಿಲ್ಲ. ಹೆದ್ದಾರಿ ಬದಿಗಳಲ್ಲಿ ಕ್ಯಾಟ್‌ ಐ ಅಳವಡಿಕೆಯಾಗಿಲ್ಲ. ಹೀಗಾಗಿ ವಾಹನಗಳು ವೇಗ ಕಡಿಮೆ ಮಾಡುತ್ತಿಲ್ಲ, ಜನರಿಗೆ ಎಲ್ಲಿ ದಾಟಬೇಕು ಎಂದು ತೋಚುತ್ತಿಲ್ಲ. ಇದರಿಂದಾಗಿ ಅಪಘಾತಗಳು ಹೆಚ್ಚಾಗುತ್ತಿವೆ.

ಹೆದ್ದಾರಿ ಬದಿ ತುಂಬ ಫ್ಲೆಕ್ಸ್‌ಗಳು
45 ಮೀಟರ್‌ಗಳ ಹೆದ್ದಾರಿ ವ್ಯಾಪ್ತಿಯನ್ನಷ್ಟೇ ಬಳಸಿಕೊಂಡು ನಿರ್ಮಾಣವಾಗಿರುವ ಹೆದ್ದಾರಿಯಲ್ಲೂ ಪಾದಚಾರಿಗಳಿಗೆ ನಡೆದಾಡಲು ಸರಿಯಾದ ಫ‌ುಟ್‌ ಪಾತ್‌ ಕೂಡ ಇಲ್ಲ. ಇರುವ ಫುಟ್‌ಪಾತ್‌ ಮೇಲೆ ಅಗಾಧ ಪ್ರಮಾಣದಲ್ಲಿ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಇದರಿಂದಾಗಿ ಪಾದಚಾರಿಗಳು ರಸ್ತೆಯ ಮೇಲೆಯೇ ನಡೆದುಕೊಂಡು ಹೋಗಬೇಕಾಗಿದೆ. ಇದರಿಂದಾಗಿ ಹಿಂದೆ ಮುಂದಿನಿಂದ ಬರುವ ವಾಹನಗಳು ಡಿಕ್ಕಿ ಹೊಡೆಯುತ್ತವೆ. ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡವರು ಮತ್ತು ಮೃತಪಟ್ಟವರು ಎಲ್ಲರೂ ಪಾದಚಾರಿಗಳೇ ಆಗಿದ್ದಾರೆ.

ಅನುಮತಿ ಇಲ್ಲದ ಫ್ಲೆಕ್ಸ್‌ಗಳು
ಪಡುಬಿದ್ರಿಯಲ್ಲಿ ನಾನಾ ಕಾರ್ಯಕ್ರಮಗಳ, ಜಾತ್ರೆಯ ಫ್ಲೆಕ್ಸ್‌ಗಳನ್ನು ಹೆದ್ದಾರಿಯ ಉದ್ದಕ್ಕೂ ಹಾಕಲಾಗುತ್ತದೆ. ಅನೇಕ ಸಂಘ ಸಂಸ್ಥೆಗಳು, ವಾಣಿಜ್ಯ ಮಳಿಗೆಗಳ ಫ್ಲೆಕ್ಸ್‌ ಗಳೂ ಇವೆ. ಈ ರೀತಿ ಫ್ಲೆಕ್ಸ್‌ ಹಾಕುವವರಲ್ಲಿ ಕೆಲವರಷ್ಟೇ ಪಂಚಾಯತ್‌ನಿಂದ ಅನುಮತಿ ಪಡೆಯುತ್ತಾರೆ ಮತ್ತು ನಿಗದಿತ ಅವಧಿಯೊಳಗೆ ಅವುಗಳನ್ನು ತೆರವುಗೊಳಿಸುತ್ತಾರೆ. ಫ್ಲೆಕ್ಸ್‌ ಹಾಕುವ ಮೊದಲು ನಿಗದಿತ ಮೊತ್ತ ಪಾವತಿಸಿ ಅನುಮತಿ ಪಡೆಯಬೇಕಾಗುತ್ತದೆ. ಆದರೆ ಈ ನಿಯಮ ಪಾಲನೆ ಆಗದಿರುವುದರಿಂದ ಎಲ್ಲೆಂದರಲ್ಲಿ ಫ್ಲೆಕ್ಸ್‌ಗಳನ್ನು ಹಾಕಲಾಗುತ್ತಿದೆ.

ಈ ಕುರಿತಾಗಿ ಪಿಡಿಒ ಮಂಜುನಾಥ ಶೆಟ್ಟಿ, ಈ ಫ್ಲೆಕ್ಸ್‌ ವಿಚಾರದಲ್ಲಿ ಕೊಂಚ ಎಡವಿದ್ದೇವೆ. ಪ್ರಭಾವ ಬಳಸಿ ಇದನ್ನು ಹಾಕಿಸಿಕೊಳ್ಳುವವರೂ ಇದ್ದಾರೆ. ಉತ್ಸವಗಳ ಹೆಸರಲ್ಲೂ ಕೆಲವೊಂದು ಬಾರಿ ಇವು ಪ್ರತ್ಯಕ್ಷಗೊಳ್ಳುತ್ತವೆ. ಹಿಂದೊಮ್ಮೆ ಫ್ಲೆಕ್ಸ್‌ನಲ್ಲಿ ಪರವಾನಿಗೆ ಸಂಖ್ಯೆಯನ್ನು ನಮೂದಿಸಲೂ ಸೂಚಿಸಿದ್ದೆವು. ಈಗ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದ್ದು ಪ್ರಕಟನೆಯ ಮೂಲಕ ಜನರಿಗೆ ಅರಿವು ಮೂಡಿಸಿ ಪರವಾನಿಗೆ ಪಡೆದೇ ಅಳವಡಿಸುವಂತೆ ಜನಜಾಗೃತಿ ಮೂಡಿಸಲಾಗುವುದು ಎಂದಿದ್ದಾರೆ.

ಟಾಪ್ ನ್ಯೂಸ್

SMG-Meggan

Shivamogga: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಣಂತಿ ಸಾವು

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ

Hunasu-Accident

ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ

yatnal–waqf

Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್‌

KSRTC

Ticket Price Hike: ನಾಲ್ಕು ನಿಗಮಗಳ ಬಸ್‌ ಪ್ರಯಾಣ ದರ ಇಂದು ಮಧ್ಯರಾತ್ರಿಯಿಂದಲೇ ಹೆಚ್ಚಳ

1-asasa

Viksit Bharat ‘ಯಂಗ್‌ ಲೀಡರ್ ಡೈಲಾಗ್‌’:ಉಡುಪಿಯ ಮನು ಶೆಟ್ಟಿ ಆಯ್ಕೆ

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ

Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ

Missing Case: ಮಗುವಿನೊಂದಿಗೆ ತಾಯಿ ನಾಪತ್ತೆ

Missing Case: ಮಗುವಿನೊಂದಿಗೆ ತಾಯಿ ನಾಪತ್ತೆ

Udupi: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Udupi: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಸುನಿಲ್ ಕುಮಾರ್

Udupi; ಪಿಣರಾಯಿ ವಿಜಯನ್ ಸನಾತನ ಹಿಂದೂ ಧರ್ಮದ ಶತ್ರು: ಸುನಿಲ್ ಕುಮಾರ್ ಆಕ್ರೋಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

SMG-Meggan

Shivamogga: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಣಂತಿ ಸಾವು

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ

puttige-6-

Udupi;ಗೀತಾರ್ಥ ಚಿಂತನೆ 146: ಚಾರ್ವಾಕ ಬಿಟ್ಟು ಉಳಿದೆಲ್ಲ ಮತಗಳಲ್ಲಿ ಪುಣ್ಯಪಾಪ ಕಲ್ಪನೆ

train-track

ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್‌ ಬಂದ್‌

1-ksde

CPCRI; ಅಡಿಕೆ ಉತ್ಪನ್ನ ಬಗ್ಗೆ ಸಂಶೋಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.