Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Team Udayavani, Nov 15, 2024, 10:50 PM IST
ಪಡುಬಿದ್ರಿ: ನವವಿವಾಹಿತೆ ಮೂಳೂರಿನ ಅಫÕತ್ (25) ಮೇಲೆ ಹಲ್ಲೆ ನಡೆಸಿ, ಚಿನ್ನವನ್ನೇನೂ ತಾರದೆ ತಮ್ಮ ಮಗನನ್ನು ಬುಟ್ಟಿಗೆ ಹಾಕಿಕೊಂಡೆ ಎನ್ನುತ್ತಾ ಬೈದು ಮನೆ ಬಿಟ್ಟು ತೆರಳುವಂತೆ ಹೀನಾಯವಾಗಿ ವರ್ತಿಸಿದ ಪತಿಯ ಮನೆಯವರ ವಿರುದ್ಧ ನ. 14ರಂದು ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾವ ಇಬ್ರಾಹಿಂ, ಅತ್ತೆ ನಫೀಸಾ, ಬಾವ ಮಹಮ್ಮದ್ ಶಂಶೀರ್, ಅತ್ತಿಗೆ ಸಾಯಿರಾಬಾನು ವಿರುದ್ಧ ಅಫÕತ್ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನಾ ಗ್ರಾಮದ ಅಹಮ್ಮದ್ ಸಮೀರ್ ಅವರನ್ನು ಪ್ರೇಮಿಸಿ ಎರಡೂ ಮನೆಯವರ ಒಪ್ಪಿಗೆಯೊಂದಿಗೆ ಅ. 13ರಂದು ಕಾರ್ಕಳದಲ್ಲಿ ನಡೆದಿದ್ದ ಮದುವೆಯ ಬಳಿಕ ಇನ್ನಾ ಗ್ರಾಮದ ಕಡೆಕುಂಜದ ಪತಿಯ ಮನೆಯಲ್ಲಿ ಅಫÕತ್ ವಾಸವಿದ್ದರು. ನ. 10ರಂದು ನಡೆದಿದ್ದ ಹಲ್ಲೆ ಬಳಿಕ ಮೂಳೂರಿನ ತನ್ನ ಮನೆಯನ್ನು ಸೇರಿ ಫಿನಾಯಿಲ್ ಸೇವಿಸಿ ಅಸ್ವಸ್ಥಗೊಂಡಿದ್ದರು. ಆ ಬಳಿಕ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಇದೀಗ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪಡುಬಿದ್ರಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.