Padubidri: ಹೆಜಮಾಡಿ ಬಂದರು ಮೀನಮೇಷ ಎಣಿಕೆ

ಪೂರ್ಣಗೊಳ್ಳದ ಭೂಸ್ವಾಧೀನ; ಅರೆಬರೆ ಕಾಮಗಾರಿ; ಹೆಚ್ಚುವರಿ ಹಣ ಬಿಡುಗಡೆಗೆ ಶಾಸಕ ಗುರ್ಮೆ ಮನವಿ

Team Udayavani, Nov 6, 2024, 3:35 PM IST

9

ಪಡುಬಿದ್ರಿ: 180 ಕೋಟಿ ರೂ. ವೆಚ್ಚದ ಹೆಜಮಾಡಿ ಸರ್ವಋತು ಬಂದರು ಯೋಜನೆಯು ಇನ್ನೂ ಮೀನ-ಮೇಷ ಎಣಿಸುತ್ತಿದೆ. ಕರಾವಳಿ ಭಾಗದ ಮೀನುಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗೆ ಬಲವನ್ನು ತಂದುಕೊಡಬಲ್ಲ ಈ ಯೋಜನೆಯ ಕಾಮಗಾರಿಗಳು ಅರೆಬರೆಯಾಗಿದ್ದು, ಭೂಸ್ವಾಧೀನ ಪ್ರಕ್ರಿಯೆಯು ಇನ್ನೂ ಪೂರ್ಣಗೊಂಡಿಲ್ಲ. ಈ ಯೋಜನೆಗೆ ಹೆಚ್ಚುವರಿ ಹಣ ಬಿಡುಗಡೆ ಮಾಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕಾಪು ಶಾಸಕ ಸುರೇಶ್‌ ಶೆಟ್ಟಿ ಗುರ್ಮೆ ಅವರು ಸೋಮವಾರ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಕೇಂದ್ರ, ರಾಜ್ಯಗಳ 50:50 ಅನುಪಾತದ ಈ ಮಹತ್ವಾಕಾಂಕ್ಷಿ ಯೋಜನೆಗೆ 2021ರ ಜ. 19ರಂದು ಅಂದಿನ ಸಿಎಂ ಬಿ.ಎಸ್‌. ಯಡಿಯೂರಪ್ಪ ಶಿಲಾನ್ಯಾಸ ಮಾಡಿದ್ದರು. ಯೋಜನೆಯಡಿ ಸರಕಾರದ ಸುಮಾರು 70 ಎಕ್ರೆ ಜಾಗದಲ್ಲಿ ಅರೆಬರೆ ಆವರಣ ಗೋಡೆ ಕಾಮಗಾರಿ, ಗೇಟು, ಭೂಮಿಯ ಸಮತಟ್ಟುಗೊಳಿಸುವಿಕೆ, ಆಂಶಿಕ ಧಕ್ಕೆ ಕಾಮಗಾರಿ, ಕಚ್ಚಾ ರಸ್ತೆ ನಿರ್ಮಾಣಗಳನ್ನು ಚೆನ್ನೈನ ಶ್ರೀಪತಿ ಎಸೋಸಿಯೇಟ್ಸ್‌ ಗುತ್ತಿಗೆದಾರ ಕಂಪೆನಿ ನಿರ್ವಹಿಸಿದೆ. ಡ್ರೆಜ್ಜಿಂಗ್‌, ಪೂರ್ಣ ಪ್ರಮಾಣದಲ್ಲಿ ನೀಲ ನಕಾಶೆಯಲ್ಲಿನ ಸಮಗ್ರ ಕಟ್ಟಡಗಳ ಕಾಮಗಾರಿ, ರಸ್ತೆ, ಆವರಣಗೋಡೆಗಳು ಇನ್ನೂ ಪೂರ್ಣಗೊಳ್ಳಬೇಕಿದೆ. ಅವರಿಗೂ ಸರಕಾರದಿಂದ ಸಿಗಬೇಕಾದ ಪಾವತಿ ಮೊತ್ತ ಈಗಾಗಲೇ 28 ಕೋಟಿಗಳಷ್ಟು ಬಾಕಿ ಇದೆ. ಸುಮಾರು 60-70ಶೇಕಡಾ ಪೂರ್ಣಗೊಂಡಿರುವುದಾಗಿ ಮೀನುಗಾರಿಕಾ ಇಲಾಖಾ ಅಧಿಕಾರಿಗಳು ಹೇಳುತ್ತಾರೆ.

ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ
ಈ ಯೋಜನೆಗಾಗಿ ಸುಮಾರು 12.20ಎಕ್ರೆ ಖಾಸಗಿ ಭೂಮಿಗಳ ಸ್ವಾಧೀನಕ್ಕಾಗಿ ಮೀಸಲಿಟ್ಟ 21 ಕೋಟಿ ರೂ. ಸದ್ಯ ಕುಂದಾಪುರದ ಸಹಾಯಕ ಕಮಿಶನರ್‌ ಕಚೇರಿಯಲ್ಲಿ ಜಮಾ ಆಗಿದೆ. ಈಗ ಯೋಜನಾ ವೆಚ್ಚ ಹೆಚ್ಚಾಗಿದ್ದು, ಇನ್ನೂ 21 ಕೋಟಿ ರೂ. ಮೊತ್ತಕ್ಕಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ರವಾನಿಸಲಾಗಿದೆ. ಇದು ಬಿಡುಗಡೆಗೊಂಡ ಬಳಿಕಷ್ಟೇ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರಧನದ ಹಂಚಿಕೆಯಾಗಬೇಕು. ಆ ಬಳಿಕವೇ 2025ರಲ್ಲಿ ಹೆಜಮಾಡಿ ಮೀನುಗಾರಿಕಾ ಬಂದರು ಪೂರ್ಣಗೊಳ್ಳಬಹುದು ಎನ್ನುತ್ತಾರೆ ಮೀನುಗಾರಿಕಾ ಹಾಗೂ ಬಂದರು ಇಲಾಖಾ ಜಂಟಿ ನಿರ್ದೇಶಕ ವಿವೇಕ್‌ ಆರ್‌. ತಿಳಿಸಿದ್ದಾರೆ.

ಕಾಮಗಾರಿ ಪೂರ್ಣಗೊಳಿಸಿ: ಶಾಸಕ ಗುರ್ಮೆ ಮನವಿ
ಬಂದರು ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಹೆಜಮಾಡಿ ಮತ್ತು ಸುತ್ತಮುತ್ತಲಿನ ಮೀನುಗಾರರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ತಕ್ಷಣ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಿ ಹೆಜಮಾಡಿ ಬಂದರಿನ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಅವರು ಮೀನುಗಾರಿಕಾ ಇಲಾಖಾ ಮುಖ್ಯ ಕಾರ್ಯದರ್ಶಿ ಅಜಯ್‌ ನಾಗಭೂಷಣ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಮೀನುಗಾರಿಕಾ ಕಾರ್ಯದರ್ಶಿ ಅವರು ಕೂಡಲೇ ಕಾಮಗಾರಿಯನ್ನು ಕೈಗೊಳ್ಳುವ ಬಗ್ಗೆ ಭರವಸೆಯನ್ನೂ ಶಾಸಕರಿಗೆ ನೀಡಿದ್ದಾರೆ.

ಟಾಪ್ ನ್ಯೂಸ್

Zameer Ahmed: ರಾಜ್ಯದಲ್ಲಿ ಬಿಜೆಪಿ ನಾಯಕರು ವಿನಾಕಾರಣ ಗೊಂದಲ ಸೃಷ್ಟಿಸಿದ್ದಾರೆ: ಜಮೀರ್

Zameer Ahmed: ರಾಜ್ಯದಲ್ಲಿ ಬಿಜೆಪಿ ನಾಯಕರು ವಿನಾಕಾರಣ ಗೊಂದಲ ಸೃಷ್ಟಿಸಿದ್ದಾರೆ: ಜಮೀರ್

US Result: ಭಾರತೀಯ ಮೂಲದ ಉಷಾ ಚಿಲುಕುರಿ ಪತಿ ಜೆಡಿ ವಾನ್ಸ್ ಉಪಾಧ್ಯಕ್ಷ ಪಟ್ಟ…ಟ್ರಂಪ್

US Result: ಭಾರತೀಯ ಮೂಲದ ಉಷಾ ಚಿಲುಕುರಿ ಪತಿ ಜೆಡಿ ವಾನ್ಸ್ ಉಪಾಧ್ಯಕ್ಷ…ಟ್ರಂಪ್

12

Nivin Pauly: ಲೈಂಗಿಕ ದೌರ್ಜನ್ಯ ಪ್ರಕರಣ; ʼಪ್ರೇಮಂʼ ನಟ ನಿವಿನ್‌ ಪೌಲಿಗೆ ಕ್ಲೀನ್‌ ಚಿಟ್  

Hubballi: ಹೆಸರು ಬೆಳೆಗಾರರ ಸಮಸ್ಯೆ ನಿವಾರಣೆಗೆ ಕೇಂದ್ರದಿಂದ ಸ್ಪಂದನೆ: ಪ್ರಹ್ಲಾದ ಜೋಶಿ‌

Hubballi: ಹೆಸರು ಬೆಳೆಗಾರರ ಸಮಸ್ಯೆ ನಿವಾರಣೆಗೆ ಕೇಂದ್ರದಿಂದ ಸ್ಪಂದನೆ: ಪ್ರಹ್ಲಾದ ಜೋಶಿ‌

10-dk-shi

R Ashok ಮ್ಯಾಚ್ ಫಿಕ್ಸಿಂಗ್ ಎಂದು ಹೇಳಿರುವುದು ಸಂವಿಧಾನಾತ್ಮಕ ಹುದ್ದೆಗೆ ಮಾಡಿದ ಅವಮಾನ

BBK11: ಅನುಷಾಗೆ ಕಾಲಿನಲ್ಲಿ ಒದ್ದ ಗೋಲ್ಡ್‌ ಸುರೇಶ್; ಬಿಗ್‌ಬಾಸ್‌ ಆಟದಲ್ಲಿ ರಾದ್ಧಾಂತ

BBK11: ಅನುಷಾಗೆ ಕಾಲಿನಲ್ಲಿ ಒದ್ದ ಗೋಲ್ಡ್‌ ಸುರೇಶ್; ಬಿಗ್‌ಬಾಸ್‌ ಆಟದಲ್ಲಿ ರಾದ್ಧಾಂತ

Vijayendra (2)

MUDA; ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟರೂ ಸಿಎಂಗೆ ಗಂಡಾಂತರ ತಪ್ಪಿದ್ದಲ್ಲ: ವಿಜಯೇಂದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Katpadi: ಅಂಚಿಗೆ ಬ್ಯಾರಿಕೇಡ್‌ ಇರಿಸಿ ರಿಬ್ಬನ್‌ ಅಳವಡಿಕೆ

8

Malpe: ಮೀನು ಒಣಗಿಸುವ ಜಾಗದ ಪಕ್ಕದಲ್ಲೇ ತ್ಯಾಜ್ಯರಾಶಿ!

7

Udupi: ಶ್ವಾನದಳಕ್ಕೆ ಬೆಲ್ಜಿಯಂ ಮೆಲಿನೋಯಸ್‌!

ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !

ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

12-uv-fusion

Mobile Phones: ಸಂಬಂಧ ಕಳಚುತ್ತಿರುವ ಮೊಬೈಲ್‌ ಬಾಂಧವ್ಯ

Zameer Ahmed: ರಾಜ್ಯದಲ್ಲಿ ಬಿಜೆಪಿ ನಾಯಕರು ವಿನಾಕಾರಣ ಗೊಂದಲ ಸೃಷ್ಟಿಸಿದ್ದಾರೆ: ಜಮೀರ್

Zameer Ahmed: ರಾಜ್ಯದಲ್ಲಿ ಬಿಜೆಪಿ ನಾಯಕರು ವಿನಾಕಾರಣ ಗೊಂದಲ ಸೃಷ್ಟಿಸಿದ್ದಾರೆ: ಜಮೀರ್

11-uv-fusion

Teacher: ಟೀ ಫಾರ್‌ ಟೀಚರ್‌

US Result: ಭಾರತೀಯ ಮೂಲದ ಉಷಾ ಚಿಲುಕುರಿ ಪತಿ ಜೆಡಿ ವಾನ್ಸ್ ಉಪಾಧ್ಯಕ್ಷ ಪಟ್ಟ…ಟ್ರಂಪ್

US Result: ಭಾರತೀಯ ಮೂಲದ ಉಷಾ ಚಿಲುಕುರಿ ಪತಿ ಜೆಡಿ ವಾನ್ಸ್ ಉಪಾಧ್ಯಕ್ಷ…ಟ್ರಂಪ್

12

Nivin Pauly: ಲೈಂಗಿಕ ದೌರ್ಜನ್ಯ ಪ್ರಕರಣ; ʼಪ್ರೇಮಂʼ ನಟ ನಿವಿನ್‌ ಪೌಲಿಗೆ ಕ್ಲೀನ್‌ ಚಿಟ್  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.