ಮಹಾಲಿಂಗೇಶ್ವರನಿಗೆ ತೇರು ಕಟ್ಟುವ ಕಡಲ ಮಕ್ಕಳು


Team Udayavani, Mar 17, 2019, 4:35 AM IST

padu.png

ಪಡುಬಿದ್ರಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೆ ಧ್ವಜಾ ರೋಹಣವಾಗಿದ್ದು, ಇದೀಗ ತೇರು ಕಟ್ಟುವ ಕಾರ್ಯ ಶುರುವಾಗಿದೆ.

ತೇರು ಕಟ್ಟುವ ಕಾರ್ಯಕ್ಕೆ ವಿಶೇಷ ಮಹತ್ವವಿದ್ದು  ಮೊಗವೀರ ಸಮಾಜದವರೇ ಇಲ್ಲಿ ತೇರು ಕಟ್ಟುತ್ತಾರೆ. ಕಡಲ ಮಕ್ಕಳು ಕಾಯಕಕ್ಕೆ ರಜೆ ಸಾರಿ ತೇರು ಕಟ್ಟುವ ಕಾಯಕವನ್ನು ನೂರಾರು ವರ್ಷಗಳಿಂದ ಚಾಚೂ ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ.

ಮೊಗವೀರ ಸಮಾಜದಿಂದ ಸೇವೆ
ಮಾ.14ರಂದು ಜಾತ್ರೆ ಆರಂಭವಾಗಿದ್ದು, ಮಾ.21ರಂದು ದೇವರ ರಥೋತ್ಸವ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಪಡುಬಿದ್ರಿ ಕಾಡಿಪಟ್ಣ ಹಾಗೂ ನಡಿಪಟ್ಣ ಎಂಬ ಎರಡು ಊರು ಮೊಗವೀರ ಸಮುದಾಯದವರು ಸಾಂಘಿಕವಾಗಿ ಪಡುಬಿದ್ರಿ ದೇಗುಲದ ರಥವನ್ನು ಆಯ ಪ್ರಮಾಣ ಬದ್ಧವಾಗಿ ಕಟ್ಟಿ ಕೊಡುತ್ತಾರೆ. ದೊಡ್ಡ ವ್ಯಾಸದ ಸುತ್ತಳತೆಯ ಈ ಬ್ರಹ್ಮರಥವನ್ನು ಆಯನದ ಬಲಿ ನಡೆದ ಬಳಿಕ ಬೆಳಗ್ಗಿನ 7ಗಂಟೆಗೆ ಹೊರತರುತ್ತಾರೆ. ನಾಲ್ಕು ಘನಮರಗಳನ್ನು ನೆಟ್ಟು, 6 ಅಡ್ಡ ಹಲಗೆಗಳ ಅಖಾಡಗಳನ್ನು ನಿರ್ಮಿಸಿ, ಬೆತ್ತ ಹಾಗೂ ಅಡಕೆ ರೀಪುಗಳನ್ನು  ಸುತ್ತಲೂ ಕಟ್ಟಿ ಮಧ್ಯಾಹ್ನದ 1-30ರ ಸುಮಾರಿಗೆ ಪೂರ್ಣಗೊಳಿಸಿ, ರಥದ ತುತ್ತತುದಿಯ ಮುಕುಟವನ್ನೂ ಇಟ್ಟು ಸಿದ್ಧಗೊಳಿಸುತ್ತಾರೆ.  

ತೇರು ಹೊರಕ್ಕೆ ತರುವ ಮೊದಲು ಗ್ರಾಮ ದೇವರು, ಶ್ರೀ ಕುಲಮಹಾಸ್ತ್ರೀ, ಶ್ರೀ ಮಹಾಲಕ್ಷಿ$¾à ದೇವರನ್ನು ಪ್ರಾರ್ಥಿಸಿ ಕೆಲಸವನ್ನು ಆರಂಭಿಸುತ್ತಾರೆ. ಬಳಿಕ ಕಟ್ಟಿದ ತೇರನ್ನು ದೇವಸ್ಥಾನದ ಎದುರು ಎಳೆದು ತಂದು ನಿಲ್ಲಿಸುತ್ತಾರೆ. ಅಲ್ಲಿಂದ ದೇವಸ್ಥಾನದ ಧ್ವಜಸ್ತಂಭದ ಮುಂದೆ ತೆರಳಿ ಅರ್ಚಕರೊಂದಿಗೆ ಮೊಗವೀರ ಜನಾಂಗದ ಉನ್ನತಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ಬಳಿಕ ಪ್ರಸಾದ ನೀಡಲಾಗುತ್ತದೆ. 

ತೇರು ಕಟ್ಟುವ ಗೌರವ
ಹಿಂದೆ ತೇರು ಕಟ್ಟಲು ವ್ಯಕ್ತಿಯೊಬ್ಬರಿಗೆ 1-2 ರೂ. ನೀಡಲಾಗುತ್ತಿದ್ದು. ಇಂದು ದೇಗುಲ ಭಂಡಾರದಿಂದ 90 ರೂ. ಪಾವತಿಸಲಾಗುತ್ತದೆ. ದೇಗುಲ ರಥ ಕಟ್ಟುವುದು ಒಂದು ಗೌರವವಾಗಿದ್ದು ಮೊಗವೀರ ಸಮುದಾಯದವರು ಇದನ್ನು ಶ್ರದ್ಧಾ ಭಕ್ತಿಗಳಿಂದ ಮಾಡುತ್ತಾರೆ. ರಥ ಕಟ್ಟುವ ಕಾಯಕದ ಬಳಿಕ ಶ್ರದ್ಧಾಳುಗಳಿಗೆ ಅನ್ನಪ್ರಸಾದ ಬಡಿಸಲಾಗುತ್ತದೆ.  
ಈ ಬಾರಿ ತೇರು ಕಟ್ಟುವ ಕಾಯಕವನ್ನು ಪಡುಬಿದ್ರಿ ನಡಿಪಟ್ಣ, ಕಾಡಿಪಟ್ಣ ಸಂಯುಕ್ತ ಸಭೆಯ ಅಧ್ಯಕ್ಷ ಸುಕುಮಾರ್‌ ಶ್ರೀಯಾನ್‌, ಕಾಡಿಪಟ್ಣ ಮೊಗವೀರ ಸಭೆಯ ಅಧ್ಯಕ್ಷ ಲೀಲಾಧರ ಸಾಲ್ಯಾನ್‌, ನಡಿಪಟ್ಣ ಸಭೆಯ ಅಧ್ಯಕ್ಷ ಶೇಖರ ಸಾಲ್ಯಾನ್‌ ಯುವಕರ ಮತ್ತು ಹಿರಿಯರ ದಂಡಿನೊಂದಿಗೆ ನಡೆಸಿದ್ದಾರೆ.  

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

8

Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.