Padubidri: ಮುದರಂಗಡಿಯಲ್ಲಿ ಕಾಡುಕೋಣ ಹಾವಳಿ; ವಾಹನ ಸವಾರರಿಗೆ ಅಪಾಯ
Team Udayavani, Oct 15, 2024, 4:12 PM IST
ಪಡುಬಿದ್ರಿ: ಮುದರಂಗಡಿ ಗ್ರಾ. ಪಂ. ವ್ಯಾಪ್ತಿಯಲ್ಲಿ ವರ್ಷಗಳಿಂದಲೇ ಚರ್ಚೆಯಾಗುತ್ತಿರುವ ಕಾಡುಕೋಣಗಳ ಹಾವಳಿ ಮತ್ತೆ ಅತಿಯಾಗಿದೆ. ಕೆಲಸ ಬಿಟ್ಟು ಮನೆಗೆ ಮೋಟಾರು ಬೈಕಲ್ಲಿ ತೆರಳುತ್ತಿದ್ದ ಸಾಂತೂರಿನ ರವಿ ಆಚಾರ್ಯ ಅವರಿಗೆ ರಸ್ತೆಗೆ ಅಡ್ಡಬಂದ ಕಾಡುಕೋಣದಿಂದಾಗಿ ಅಪಘಾತ ಸಂಭವಿಸಿದ್ದು ತೀವ್ರತರ ಗಾಯಗೊಂಡ ಅವರು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಲಯ ಅರಣ್ಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಹೇಳಿಕೆಗಳನ್ನು ಪಡೆದು ಕೊಂಡಿದ್ದಾರೆ. ಸರಕಾರದ ಸೂಕ್ತ ಪರಿಹಾರದ ಮೊತ್ತವನ್ನು ರವಿ ಆಚಾರ್ಯ ಅವರಿಗೆ ದೊರಕಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಕಾಪು ವಲಯ ಉಪ ಅರಣ್ಯ ಅಧಿಕಾರಿ ಜೀವನ್‌ದಾಸ್ ಶೆಟ್ಟಿ ಅವರು ಹೇಳಿದ್ದಾರೆ.
ಇನ್ನಾ, ಬೆಳ್ಮಣ್ ಜಂತ್ರ, ಕಿನ್ನಿಗೋಳಿ ಭಾಗದಲ್ಲೂ ಇದೀಗ ಈ ಕಾಡುಕೋಣಗಳು ಜನತೆಯ ಎದುರು ಪ್ರತ್ಯಕ್ಷವಾಗಿದ್ದು ಭಯಭೀತ ವಾತಾವರಣವು ಸೃಷ್ಟಿಯಾಗಿದೆ. ಇದಕ್ಕೆ ಅರಣ್ಯ ಇಲಾಖೆ ಸೂಕ್ತ ಕ್ರಮ ವನ್ನು ಕೈಗೊಳ್ಳಬೇಕಿದೆ ಎಂದೂ ಮುದರಂಗಡಿ ಗ್ರಾ. ಪಂ. ಮಾಜಿ ಅಧ್ಯಕ್ಷ, ಸದಸ್ಯ ರವೀಂದ್ರ ಪ್ರಭು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ನಾಳೆ ಕಾಡಿಗಟ್ಟುವ ಕಾರ್ಯಾಚರಣೆ
ಪಿಲಾರು ಅರಣ್ಯ ಪ್ರದೇಶದಲ್ಲಿ ಕಾಡುಕೋಣಗಳ ದಿಂಡುಗಳ ವಾಸ್ತವ್ಯವಿದೆ. ಬೆರಳೆಣಿಕೆಯಲ್ಲಿದ್ದ ಈ ಪ್ರಾಣಿಗಳ ಹೆಣ್ಣು, ಗಂಡು ಸಂತತಿಯಿಂದಾಗಿ ವಂಶಾಭಿವೃದ್ಧಿಯಾಗಿದ್ದು ಇಲ್ಲಿಂದ ಹೊರಬಂದಿರುವ ಕೆಲವೊಂದು ಕಾಡುಕೋಣಗಳು ಯುಪಿಸಿಎಲ್‌ಗಾಗಿ ಸಾಂತೂರಿನಲ್ಲಿ ಈ ಹಿಂದೆ ಕೆಐಎಡಿಬಿ ಸ್ವಾಧೀನಪಡಿಕೊಂಡಿರುವ ಭೂಭಾಗದಲ್ಲಿ ಹುಲುಸಾಗಿ ಹುಲ್ಲು ಬೆಳೆದಿರುವ ಎಕ್ರೆಗಟ್ಟಲೆ ಜಾಗದಲ್ಲಿ ಅವು ವಿಹರಿಸಿಕೊಂಡಿವೆ. ಇಲ್ಲೇ ಅವುಗಳ ಸಂಖ್ಯಾಭಿವೃದ್ಧಿಯೂ ಆಗಿದ್ದು ಅ. 16ರಂದು ಇಲಾಖಾ ಸಹಕಾರ ಹಾಗೂ ಸ್ಥಳೀಯರ ಜತೆಗೂಡಿ ಇವುಗಳನ್ನು ಮತ್ತೆ ಕಾಡಿಗಟ್ಟುವ ನಿಟ್ಟಿನಲ್ಲಿ ಪಟಾಕಿ ಸಿಡಿಸಿ ಓಡಿಸುವ ಕಾರ್ಯಾಚರಣೆಯನ್ನೂ ಕೈಗೊಳ್ಳಲಾಗುವುದೆಂದೂ ಅರಣ ಅಧಿಕಾರಿ ಜೀವನ್‌ದಾಸ್ ಶೆಟ್ಟಿ ಮಾಹಿತಿ ಇತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇ-ಖಾತಾ ತಿದ್ದುಪಡಿಯೇ ಭಾರೀ ಸವಾಲು; ತಿದ್ದುಪಡಿ ಅವಕಾಶ ಶೇ.3ರಿಂದ ಶೇ.15ಕ್ಕೆ ಏರಿಕೆಗೆ ಆಗ್ರಹ
Karkala: ಹೋಂ ನರ್ಸ್ 9 ಲಕ್ಷ ರೂ. ವಂಚನೆಗೈದ ಪ್ರಕರಣ: ಮುಂಬಯಿಯಲ್ಲಿ ಇಬ್ಬರು ಆರೋಪಿಗಳ ಸೆರೆ
Manipal: ‘ಉದಯವಾಣಿ’ ಸದಭಿರುಚಿಯ ಓದುಗರ ಸೃಷ್ಟಿಸಿದೆ: ಜಯಪ್ರಕಾಶ್
Highway: ಅಂಬಲಪಾಡಿ ಅಂಡರ್‌ಪಾಸ್: ಗೊಂದಲ ನಿವಾರಣೆಗೆ ರಮೇಶ್ ಕಾಂಚನ್ ಆಗ್ರಹ
Udupi: ಗೀತಾರ್ಥ ಚಿಂತನೆ-126: ವಾರ್ಧಕ್ಯಕ್ಕಾಗಿ ದುಃಖವಲ್ಲ, ಸಾಧನಾಚ್ಯುತಿಗಾಗಿ…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.