ತೀರ್ಥಗಳ ಸಂಗಮ ಪಾಜಕ

ಪರಶುರಾಮ ಸೃಷ್ಟಿಸಿದ ಜಲಾಶಯ

Team Udayavani, Jan 9, 2020, 6:30 AM IST

26

ಉಡುಪಿ: ಮಧ್ವಾಚಾರ್ಯರು ಜನಿಸಿದ ಪಾಜಕದ ಸುತ್ತ ಕೆಲವು ಕಿ.ಮೀ. ಅಂತರದಲ್ಲಿ ಪರಶುತೀರ್ಥ, ಧನುಸ್ತೀರ್ಥ, ಗದಾತೀರ್ಥ, ಬಾಣ ತೀರ್ಥ ಎಂಬ ಹೆಸರಿನ ನಾಲ್ಕು ತೀರ್ಥಗಳಿವೆ. ಇವುಗಳನ್ನು ಪರಶುರಾಮ ದೇವರು ಪರಶು, ಧನುಸ್ಸು, ಗದಾ, ಬಾಣಗಳಿಂದ ನಿರ್ಮಿಸಿದರು ಎಂಬ ನಂಬಿಕೆಗಳಿವೆ. ಈ ತೀರ್ಥಗಳೂ ಪರಶು, ಧನುಸ್ಸು, ಗದೆ, ಬಾಣಗಳ ಆಕಾರದಲ್ಲಿವೆ. ಇವು ನಾಲ್ಕೂ ಬಂಡೆಗಳಲ್ಲಿರುವ ಜಲಾಶಯಗಳಾದರೆ ಮಧ್ವರು ವಾಸುದೇವನಾಗಿದ್ದಾಗ ನಿರ್ಮಿಸಿದ ವಾಸುದೇವ ತೀರ್ಥ ಸಹಜವಾದ ಜಲಾಶಯ.

ಯಾವುದೇ ಒಂದು ವಸ್ತು ವಿವರಣೆಗೆ ಒಳಪಡುವುದು ನೋಡುವವನ ದೃಷ್ಟಿಗೆ ಅವ ಲಂಬಿತ. ಇಲ್ಲಿ ಧಾರ್ಮಿಕ, ವೈಜ್ಞಾನಿಕ ಎರಡು ರೀತಿಯಲ್ಲಿ ವಿಶ್ಲೇಷಿಸಬಹುದು. ಧಾರ್ಮಿಕವಾಗಿ ಪಾಪಪರಿಹಾರಕ, ಪುಣ್ಯಪ್ರದ ಎನ್ನಬಹುದಾದರೆ, ವಿಜ್ಞಾನದ ಆಧಾರದಲ್ಲಿ ನೀರಿನಲ್ಲಿನ ಅಂಶಗಳನ್ನು ಸಂಶೋಧಿಸಿದರೆ ಇದರಲ್ಲಿ ರೋಗಪರಿಹಾರಕ ಗುಣವಿದೆ ಎನ್ನಬಹುದು.

ಪ್ರಾಕೃತಿಕ ಅಚ್ಚರಿ
ಈ ಜಲಾಶಯಗಳಲ್ಲಿ ಕಡು ಬೇಸಗೆಯಲ್ಲೂ ನೀರಿರುವುದು ಪ್ರಾಕೃತಿಕ ಅಚ್ಚರಿ. ಸುಮಾರು ಮೂರು ದಶಕಗಳ ಹಿಂದೆ ಪಾಜಕದಲ್ಲಿ ಗಣಿಗಾರಿಕೆ ತಲೆ ಎತ್ತಿದಾಗ ಪ್ರತಿಭಟಿಸದಿದ್ದರೆ ಈ ಅಚ್ಚರಿ ಇಂದು ಇರುತ್ತಿರಲಿಲ್ಲ. ಪೇಜಾವರ ಶ್ರೀಗಳು ಸಹಿತ ವಿವಿಧ ಪೀಠಾಧಿಪತಿಗಳು, ಚಿಂತಕರಾದ ಡಾ| ಬನ್ನಂಜೆ ಗೋವಿಂದಾಚಾರ್ಯ,ಡಾ|ಯು.ಆರ್‌. ಅನಂತಮೂರ್ತಿ, ಡಾ| ರವೀಂದ್ರನಾಥ ಶ್ಯಾನುಭಾಗ್‌ ಮತ್ತಿತರರು ಹೋರಾಟದಲ್ಲಿದ್ದರು.

ಬಾಣತೀರ್ಥ
ಪರಶುರಾಮ ಬೆಟ್ಟಕ್ಕೆ ಇದಿರಾಗಿ ಕುಂಜಾರು ಗಿರಿಯ ಒಂದೆಡೆ ಪರಶು ರಾಮರು ಅರ್ಧಚಂದ್ರಾಕೃತಿಯ ಬಾಣದಿಂದ ಶಿಲೆಯಲ್ಲಿ ತೀರ್ಥ ನಿರ್ಮಿಸಿದರು. ಇದುವೇ ಸರ್ವತೀರ್ಥಮಯವಾದ ಬಾಣತೀರ್ಥ. ಸ್ಕಂದ ಪುರಾಣದಲ್ಲಿ ಈ ತೀರ್ಥದ ಬಗ್ಗೆ ಉಲ್ಲೇಖವಿದೆ.

ಇದರ ತಟದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವಿದೆ. ಇದು ಅದಮಾರು ಮಠದ ಆಡಳಿತದಲ್ಲಿದ್ದು ಇದೇ ಮಠಕ್ಕೆ ಸೇರಿದ ಇಬ್ಬರು ಸ್ವಾಮೀಜಿಯವರ ವೃಂದಾವನಗಳಿವೆ. ಮಠದ ಪರಂಪರೆಯನ್ನು ಅವಲೋಕಿಸಿದಾಗ ಮೂವರು ಸ್ವಾಮೀಜಿಯವರ ವೃಂದಾವನಗಳನ್ನು ಇಲ್ಲಿ ನಿರ್ಮಿ ಸಿದ್ದರು ಎಂದು ತಿಳಿಯುತ್ತದೆ. ಪರಂಪರೆಯಲ್ಲಿ 12ನೆಯವರಾದ ಶ್ರೀ ವೇದಗರ್ಭತೀರ್ಥರು, 13ನೆಯವರಾದ ಶ್ರೀ ಹಿರಣ್ಯಗರ್ಭತೀರ್ಥರು, 18ನೆಯವರಾದ ಶ್ರೀ ವಾದೀಂದ್ರತೀರ್ಥರು ಇಲ್ಲಿ ವೃಂದಾ ವನಸ್ಥರಾಗಿದ್ದರು ಎಂಬ ಉಲ್ಲೇಖವಿದೆ.

ಪರಶುತೀರ್ಥ
ಪರಶುತೀರ್ಥವು ಪಾಜಕ ಕ್ಷೇತ್ರದಿಂದ ಪೂರ್ವಕ್ಕೆ ಮೂರು ಕಿ.ಮೀ. ದೂರದಲ್ಲಿರುವ ಬೆಳ್ಳೆ ಗ್ರಾಮದ ಬಳಿಯ ಬಂಡೆಯ ಬೆಟ್ಟದ ಮಧ್ಯದಲ್ಲಿದೆ. ಇದು ಪರಶುವಿನಿಂದ ಉದ್ಭವಿಸಿದ ತೀರ್ಥ. ಇದರ ಮಗ್ಗುಲಲ್ಲಿ ಗೋಪಾಲಕೃಷ್ಣ ದೇವಸ್ಥಾನವಿದೆ. ಇದು ಬೆಳ್ಳೆ ಸಾಮಗರ ವಂಶಕ್ಕೆ ಸೇರಿದೆ.

ಧನುಸ್ತೀರ್ಥ
ಪಾಜಕದಿಂದ ದಕ್ಷಿಣಕ್ಕೆ ಸುಮಾರು 6 ಕಿ.ಮೀ. ದೂರ ದಲ್ಲಿ ದೊಡ್ಡ ಏಕಶಿಲಾ ಬ ಬೆಟ್ಟದ ಮಧ್ಯೆ ಧನುಸ್ತೀರ್ಥ ವಿದೆ. ಸುಮಾರು 50 ಅಡಿ ಎತ್ತರದ ಬಂಡೆಯಲ್ಲಿ ಜಲಾಶಯವಿ ರುವುದು ಅಚ್ಚರಿ ತರುತ್ತದೆ. ಇಲ್ಲಿ ವರ್ಷವಿಡೀ ನೀರು ಇರುವುದೂ ಇನ್ನೊಂದು ಅಚ್ಚರಿ. ಶಾಧನುಸ್ಸಿನಿಂದ ಪರಶುರಾಮ ಈ ತೀರ್ಥವನ್ನು ನಿರ್ಮಿಸಿದ ಎಂಬ ಕಥೆ ಇದೆ.

ಗದಾತೀರ್ಥ
ಕುಂಜಾರು ಗಿರಿ ಬೆಟ್ಟದ ಎದುರಿನ ಪರಶುರಾಮ ಬೆಟ್ಟದಲ್ಲಿ ಪರಶುರಾಮ ದೇವಾಲಯವಿದೆ. ಇದಕ್ಕೆ ಹೊಂದಿ ಕೊಂಡಂತೆ ಉತ್ತರದಲ್ಲಿ ಬಂಡೆಯೊಳಗೆ ಪರಶುರಾಮ ತನ್ನ ಕೌಮೋದಕೀ ಗದೆಯಿಂದ ಉದ್ಭವಿಸಿದ ತೀರ್ಥ ಗದಾತೀರ್ಥ. ಒಂದೊಂದು ತೀರ್ಥಕ್ಕೂ ವಿಭಿನ್ನ ಹಿನ್ನೆಲೆ ಇದೆ ಮತ್ತು ಪ್ರತಿ ತೀರ್ಥದ ಸ್ನಾನಕ್ಕೂ ಪ್ರತ್ಯೇಕ ಫ‌ಲಗಳಿವೆ.

ವಾಸುದೇವತೀರ್ಥ
ಮಧ್ವರು ವಾಸುದೇವನಾಗಿದ್ದಾಗ ಉಪನಯ ನವಾದ ಸಮಯ ನಾಲ್ಕೂ ತೀರ್ಥಗಳಲ್ಲಿ ಸ್ನಾನ ಮಾಡಿ ಬರುತ್ತಿದ್ದರಂತೆ. ಚಿಕ್ಕ ಮಗ ಒಬ್ಬನೇ ದೂರ ಹೋಗಿ ಸ್ನಾನ ಮಾಡಿ ಬರುವುದಕ್ಕೆ ತಾಯಿ ಆತಂಕ ವ್ಯಕ್ತಪಡಿಸಿದರು. ತಮ್ಮ ದಂಡದಿಂದ ನಾಲ್ಕೂ ತೀರ್ಥಗಳ ಸನ್ನಿಧಾನವಿರುವಂತೆ ತೀರ್ಥ ವೊಂದನ್ನು ನಿರ್ಮಿಸಿದರು. ಇದೇ ವಾಸುದೇವ ತೀರ್ಥ. ಇದು ಪಾಜಕದ ಮುಖ್ಯ ಕ್ಷೇತ್ರದ ಆವರಣದಲ್ಲಿದೆ.

ಟಾಪ್ ನ್ಯೂಸ್

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.