ಪರ್ಕಳ ಶ್ರೀ ಗಣೇಶೋತ್ಸವ: ಇಂದು ವೈಭವಯುತ ವಿಸರ್ಜನ ಮೆರವಣಿಗೆ


Team Udayavani, Sep 2, 2017, 10:10 AM IST

2408gk5-parkala-ganapathi.jpg

ಉಡುಪಿ: ಪರ್ಕಳ ಶ್ರೀ ಗಣೇಶೋತ್ಸವ ಸಮಿತಿಯ ಸುವರ್ಣ ಮಹೋತ್ಸವ ಪ್ರಯುಕ್ತ ಪರ್ಕಳ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ನಡೆಸಲಾದ ಶ್ರೀ ಗಣೇಶೋತ್ಸವದ ಗಣೇಶ ವಿಗ್ರಹದ ವಿಸರ್ಜನ ಮೆರವಣಿಗೆ ಸೆ. 2ರಂದು ಸಂಜೆ 5ರಿಂದ ನಡೆಯಲಿದೆ. 

ವೈವಿಧ್ಯಮಯ ಟ್ಯಾಬ್ಲೋಗಳು
ಐದು ಕಿ.ಮೀ. ದೂರದ ವರೆಗೆ ಕ್ರಮಿಸಲಿರುವ ವೈಭವದ ಪುರ ಮೆರವಣಿಗೆಯಲ್ಲಿ ತಿರುಪತಿ ಶ್ರೀ ವೆಂಕಟರಮಣ ದೇವರು, ಶೇಷಶಯನ ಶ್ರೀ ಅನಂತಪದ್ಮನಾಭ ದೇವರು, ಪಂಢರಪುರ ಶ್ರೀ ವಿಟuಲ ರುಕ್ಮಿಣಿ ದೇವರು, ಭಕ್ತಿಗೀತೆ ಸಹಿತ ಶ್ರೀ ಲಕ್ಷ್ಮೀ ದೇವರ ಟ್ಯಾಬ್ಲೋ, ಮಂಗಳೂರು ಬಾಲು ಆರ್ಟ್ಸ್ ಅವರ 5 ವಿಶೇಷ ಟ್ಯಾಬ್ಲೋಗಳು, ಪರ್ಕಳ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯವರ ಟ್ಯಾಬ್ಲೋ, ಪರ್ಕಳ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿಯವರ ಟ್ಯಾಬ್ಲೋ, ವಿಶೇಷ ಪುಷ್ಪಾಲಂಕೃತ ಗಣಪತಿ ದೇವರ ಟ್ಯಾಬ್ಲೋ ಹೀಗೆ ಹತ್ತು ಹಲವಾರು ವೈವಿಧ್ಯಮಯ ವಿಶೇಷ ಟ್ಯಾಬ್ಲೋಗಳು ಆಕರ್ಷಣೆಯಾಗಲಿವೆ.

ವಿಶಿಷ್ಟ ಜಾನಪದ ಪ್ರಕಾರಗಳು
ಮಂತ್ರಘೋಷದ ವಾಹನಗಳು, ಧ್ವನಿವರ್ಧಕ ವಾಹನಗಳು, ಜನತಾ ವ್ಯಾಯಾಮ ಶಾಲೆಯವರಿಂದ ತಾಲೀಮು, ಬ್ಯಾಂಡ್‌ಸೆಟ್‌, ಆಕರ್ಷಕ ಬಣ್ಣದ ಕೊಡೆಗಳು, ನಾಸಿಕ್‌ ಬ್ಯಾಂಡ್‌ಗಳು, 150 ಮಂದಿ ತಂಡದ ಜಾನಪದ ವೈಶಿಷ್ಟéತೆಗಳು, ಡೊಳ್ಳು ಕುಣಿತ, ಸೋಮನ ಕುಣಿತ, ಹೋಳಿ ಕುಣಿತ, 50 ಮಂದಿಯ ಕೇರಳದ ನೃತ್ಯ, ಚಂಡೆ ವಾದನ, ಕೋಳಿ ಕುಣಿತ, ಸೂರಾಲು ಬಳಗದ ಬ್ಯಾಂಡ್‌ಸೆಟ್‌, ಕೊಂಬು ವಾದನ, ಬಿರುದು ಬಾವಲಿಗಳು ಮೆರವಣಿಗೆಯ ಸೊಬಗು ಹೆಚ್ಚಿಸಲಿವೆ.

ಮೆರವಣಿಗೆ ಮಾರ್ಗ
ಪರ್ಕಳ ಶ್ರೀ ವಿಘ್ನೇಶ್ವರ ಸಭಾಭವನದಿಂದ ಹೊರಡಲಿರುವ ಆಕರ್ಷಕ ಮೆರವಣಿಗೆ ಅರ್ಜುನ ಯುವಕ ಮಂಡಲ, ಪರ್ಕಳ ಪೇಟೆ ಮಾರ್ಗವಾಗಿ ಪರ್ಕಳ ಹೈಸ್ಕೂಲ್‌ ವರೆಗೆ ತೆರಳಿ ಅಲ್ಲಿಂದ ಪುನಃ ಪೇಟೆಗೆ ಬಂದು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸರೋವರದಲ್ಲಿ ವಿಗ್ರಹವನ್ನು ಜಲಸ್ತಂಭನಗೊಳಿಸಲಾಗುವುದು ಎಂದು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಮಹೇಶ್‌ ಠಾಕೂರ್‌, ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಸಂಚಾಲಕ ದಿಲೀಪರಾಜು ಹೆಗ್ಡೆ ಆತ್ರಾಡಿ, ಮೆರವಣಿಗೆ ಉಸ್ತುವಾರಿ ಉಮೇಶ್‌ ಶಾನುಭಾಗ್‌ ತಿಳಿಸಿದ್ದಾರೆ.

“ಜೈ ಗಣೇಶ’ ಕೇಸರಿ ಬಣ್ಣದ ಟೋಪಿ ವಿತರಣೆ
ಮೆರವಣಿಗೆಯಲ್ಲಿ ಭಾಗವಹಿಸಲಿರುವ ಎಲ್ಲ ಭಕ್ತಾಭಿಮಾನಿಗಳಿಗೆ “ಜೈ ಗಣೇಶ’ ಎಂದು ಬರೆಯಲ್ಪಟ್ಟ ಕೇಸರಿ ಬಣ್ಣದ ಟೋಪಿಯನ್ನು ವಿತರಿಸಲಾಗುವುದು. ಸುವರ್ಣ ಮಹೋತ್ಸವದ ಬಾಲಗಂಗಾಧರ ತಿಲಕ್‌ ವೇದಿಕೆಯಲ್ಲಿ ಸಂಜೆ 4ರಿಂದ ಮೆರವಣಿಗೆಯಲ್ಲಿ ಭಾಗವಹಿಸಲಿರುವ ಎಲ್ಲ ಜಾನಪದ ತಂಡಗಳಿಂದ ವಿಶೇಷ ಮೆರುಗಿನೊಂದಿಗೆ ಜಾನಪದ ಕಲಾ ಪ್ರಾಕಾರಗಳು ಪ್ರದರ್ಶನಗೊಳ್ಳಲಿವೆ.

ಟಾಪ್ ನ್ಯೂಸ್

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Shirva: ಕಾರು ಢಿಕ್ಕಿ; ದ್ವಿಚಕ್ರ ಸವಾರನಿಗೆ ಗಾಯ

car-parkala

Kaup: ಉದ್ಯಾವರ; ಮಹಿಳೆಗೆ ಬೈಕ್‌ ಢಿಕ್ಕಿ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

crime

Padubidri: ಸ್ಕೂಟಿಗೆ ಈಚರ್‌ ವಾಹನ ಢಿಕ್ಕಿ; ಸವಾರನಿಗೆ ಗಾಯ

11

Udupi: ಜಿಲ್ಲಾಧಿಕಾರಿ ಕಚೇರಿಯಲ್ಲೇ ನೆಟ್‌ವರ್ಕ್‌ ಸಮಸ್ಯೆ!

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

14

Sullia: ಚರಂಡಿಯಲ್ಲಿ ಸಿಲುಕಿದ ಶಾಲಾ ವಾಹನ

byndoor

Shirva: ಕಾರು ಢಿಕ್ಕಿ; ದ್ವಿಚಕ್ರ ಸವಾರನಿಗೆ ಗಾಯ

car-parkala

Kaup: ಉದ್ಯಾವರ; ಮಹಿಳೆಗೆ ಬೈಕ್‌ ಢಿಕ್ಕಿ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.