ಬಿಎಸ್ಸೆನ್ನೆಲ್ ಗುತ್ತಿಗೆ ಕಾರ್ಮಿಕರ 1 ತಿಂಗಳ ಬಾಕಿ ವೇತನ ಪಾವತಿ
Team Udayavani, Apr 18, 2020, 8:56 AM IST
ಸಾಂದರ್ಭಿಕ ಚಿತ್ರ
ಉಡುಪಿ: ಲಾಕ್‌ಡೌನ್ ಸಂಕಟದಿಂದ ತೊಂದರೆಗೆ ಒಳಗಾಗಿದ್ದ ಆವಿಭಜಿತ ದ.ಕ. ಜಿಲ್ಲೆಯ ಬಿಎಸ್ಸೆನ್ನೆಲ್ ಗುತ್ತಿಗೆ ಕಾರ್ಮಿಕರಿಗೆ ಸಂಸ್ಥೆಯು ಒಂದು ತಿಂಗಳ ವೇತನವನ್ನು ಎ. 16ರಂದು ಪಾವತಿಸಿದೆ. ಬಿಎಸ್ಸೆನ್ನೆಲ್‌ನಲ್ಲಿ ಗುತ್ತಿಗೆ ಕಾರ್ಮಿಕರಾಗಿದ್ದ ಸಾವಿರಾರು ಮಂದಿಗೆ ಹಿಂದಿನ ಹಲವು ತಿಂಗಳ ವೇತನ ಪಾವತಿಗೆ ಬಾಕಿ ಇತ್ತು. ಮೊದಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಕಾರ್ಮಿಕರು ಲಾಕ್‌ಡೌನ್ ಪರಿಣಾಮ ಮತ್ತಷ್ಟು ತೊಂದರೆಗೆ ಒಳಗಾಗಿದ್ದರು. ಕಾರ್ಮಿಕರ ಹಾಜರಾತಿ ಆಧರಿಸಿ ಗುತ್ತಿಗೆದಾರರ ಮೂಲಕ ಹಣ ಹಂಚಿಕೆ ಮಾಡಲಾಗಿದೆ.
670 ಮಂದಿಗೆ ಅನುಕೂಲ
ಮಂಗಳೂರು ಟೆಲಿಕಾಂ ವೃತ್ತದಡಿಯ ದ.ಕ., ಉಡುಪಿ ಜಿಲ್ಲೆಗಳ 500 ಮಂದಿ ಹಾಗೂ ಕಾರವಾರ ಭಾಗದ 170 ಮಂದಿ ಸೇರಿ 670 ಕಾರ್ಮಿಕರಿಗೆ ಹಣ ಪಾವತಿಯಾಗಿದೆ. ಮೊದಲ ಹಂತವಾಗಿ 72 ಲಕ್ಷ ರೂ.ಗಳನ್ನು ತುರ್ತಾಗಿ ಬಿಡುಗಡೆಗೊಳಿಸಿದೆ. ಇನ್ನುಳಿದ ಕಾರ್ಮಿಕರನ್ನು ಎರಡನೇ ಹಂತದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಬಾಕಿ ವೇತನವನ್ನು ಹಂತಹಂತವಾಗಿ ನೀಡುವ ಬಗ್ಗೆ ಬಿಎಸ್ಸೆನ್ನೆಲ್ ಸಂಸ್ಥೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಉದಯವಾಣಿಯಲ್ಲಿ ವರದಿ
ಅವಿಭಜಿತ ದ.ಕ. ಜಿಲ್ಲೆ ಮಂಗಳೂರು ಟೆಲಿಕಾಂ ವೃತ್ತ ವ್ಯಾಪ್ತಿಯಲ್ಲಿ 1,100ಕ್ಕೂ ಅಧಿಕ ಮಂದಿ ಗುತ್ತಿಗೆ ಕಾರ್ಮಿಕರಾಗಿ ವಿವಿಧ ಹುದ್ದೆಗಳಲ್ಲಿ ಖಾಯಂ ನೌಕರರಿಗೆ ಸಮನಾಗಿ ಕೆಲಸ ನಿರ್ವಹಿಸುತ್ತಿದ್ದರು. ಬಿಎಸ್ಸೆನ್ನೆಲ್ ಆರ್ಥಿಕ ನಷ್ಟಕ್ಕೆ ಒಳಗಾದ ಸಂದರ್ಭ ಈ ವಲಯದ ಗುತ್ತಿಗೆ ಕಾರ್ಮಿಕರಿಗೆ ಕೆಲಸ ನಿರಾಕರಿಸಲಾಗಿತ್ತು. ಆಗ 14 ತಿಂಗಳ ವೇತನ ಬಾಕಿ ಇತ್ತು. ಲಾಕ್‌ಡೌನ್ ಬಳಿಕವಂತೂ ಆ ಕಾರ್ಮಿಕರ ಸ್ಥಿತಿ ಶೋಚನೀಯವಾಗಿಪಿತ್ತು. ಈ ಬಗ್ಗೆ ಎ. 16ರಂದು ಉದಯವಾಣಿ ಕಾರ್ಮಿಕರ ಸಂಕಷ್ಟದ ಬದುಕಿನ ಬಗ್ಗೆ ಚಿತ್ರಣದ ವರದಿ ಪ್ರಕಟಿಸಿತ್ತು. ಸುದ್ದಿ ಪ್ರಕಟಗೊಂಡ ಮರುದಿನವೇ ಕಾರ್ಮಿಕರಿಗೆ ವೇತನ ಪಾವತಿಯಾಗಿದೆ. ಕಾರ್ಮಿಕರು ಕಷ್ಟ ಕಾಲದಲ್ಲಿ ವೇತನ ದೊರಕಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.