ಆಸ್ಪತ್ರೆಯಿಂದ ಮರಳಿದ ಪೇಜಾವರ ಶ್ರೀ
Team Udayavani, Oct 28, 2017, 10:54 AM IST
ಉಡುಪಿ: ಬುಧವಾರ ಹಠಾತ್ ನೋವು ಕಂಡುಬಂದ ಹಿನ್ನೆಲೆ ಯಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖ ಲಾಗಿದ್ದ ಪರ್ಯಾಯ ಶ್ರೀ ಪೇಜಾವರ ಶ್ರೀಗಳು ಶುಕ್ರವಾರ ಅಪರಾಹ್ನ ಶ್ರೀಕೃಷ್ಣ ಮಠಕ್ಕೆ ವಾಪಸಾದರು.
ಶುಕ್ರವಾರ ಬೆಳಗ್ಗೆ ಆಗಮಿಸುವು ದೆಂದು ನಿರ್ಧರಿಸಿದ್ದರೂ ವೈದ್ಯರು ಮಧ್ಯಾಹ್ನ 2 ಗಂಟೆ ಹೊತ್ತಿಗೆ ಆರೋಗ್ಯ ತಪಾಸಣೆ ನಡೆಸಿ ಬಿಟ್ಟುಕೊಟ್ಟರು. 3.45 ಗಂಟೆ ಹೊತ್ತಿಗೆ ಮಠಕ್ಕೆ ಆಗಮಿಸಿದರು. ಬಂದ ತತ್ಕ್ಷಣ ವೀಲ್ ಚೆಯರ್ನಲ್ಲಿ ಬಡಗುಮಾಳಿಗೆ ಹೊರಗಿನ ಲಿಫ್ಟ್ ಮೂಲಕ ಬಡಗುಮಾಳಿಗೆಯ ಸ್ವಸ್ಥಾನಕ್ಕೆ ತೆರಳಿದರು. ಬಂದವರನ್ನು ಮಾತನಾಡಿಸುವುದು, ಪುಸ್ತಕ, ಪತ್ರಿಕೆಗಳ ಅವಲೋಕನ ನಡೆಸಿದ ಶ್ರೀಗಳು ಸಂಜೆ ನಿತ್ಯಾಹಿ°ಕಗಳನ್ನು ಪೂರೈಸಿ ಕಿರಿಯ ಸ್ವಾಮೀಜಿಯವರು ನಡೆಸಿದ ಪೂಜೆ, ಸಂಕೀರ್ತನೆಯಲ್ಲಿ ಕೆಲ ಹೊತ್ತು ಪಾಲ್ಗೊಂಡರು.
ಆಸ್ಪತ್ರೆಯಿಂದಲೇ ಬರೆದ ಪತ್ರ!
ಕೈಯಿಂದ ತಯಾರಿಸುವ ಉತ್ಪನ್ನಗಳಿಗೆ ಜಿಎಸ್ಟಿಯಿಂದ ರಿಯಾಯಿತಿ ನೀಡಬೇಕೆಂದು ರಂಗಕರ್ಮಿ ಪ್ರಸನ್ನ ಅವರು ನಡೆಸುತ್ತಿರುವ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರವನ್ನು ಗುರುವಾರ ಆಸ್ಪತ್ರೆಯ ಬೆಡ್ನಲ್ಲಿ ಕುಳಿತೇ ಬರೆದರು. ಆಸ್ಪತ್ರೆಗೂ ಸಂಸ್ಕೃತ ಗ್ರಂಥಗಳನ್ನು ತರಿಸಿ ಓದಿದರು. ಬೆಳಗ್ಗೆ ಪತ್ರಿಕೆಗಳನ್ನೂ ಓದಿದ್ದರು.
ಸದ್ಯ ಕಿರಿಯ ಶ್ರೀಗಳು ಪರ್ಯಾಯ ಪೀಠಸ್ಥರು ಮಾಡುವ ಬೆಳಗ್ಗಿನ ಪಶ್ಚಿಮಜಾಗರ ಪೂಜೆ, ಮಧ್ಯಾಹ್ನದ ಮಹಾಪೂಜೆ, ಸಂಜೆಯ ಚಾಮರ ಸೇವೆಯಲ್ಲದೆ ಇತರ ಪೂಜೆಗಳನ್ನೂ ನಿರ್ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.