ರಾಮ-ವಿಠಲ, ಶ್ರೀಕೃಷ್ಣ, ರಾಮಲಲ್ಲಾ…

Team Udayavani, Dec 31, 2019, 7:00 AM IST

ve-47

ಮಣಿಪಾಲ: ಶ್ರೀ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರ ಪಟ್ಟದ ದೇವರು ರಾಮ- ವಿಠಲ. ಇವರು ಶ್ರೀಗಳು ನಿತ್ಯವೂ ಪೂಜಿಸುತ್ತಿದ್ದ ದೇವರು. ತಮ್ಮ ಐದು ಪರ್ಯಾಯ ಸಂದರ್ಭಗಳಲ್ಲಿ ಶ್ರೀಗಳು ಉಡುಪಿಯ ಕಡೆಗೋಲು ಶ್ರೀಕೃಷ್ಣನನ್ನು ಪೂಜಿಸಿದ್ದವರು. ಅತ್ತ ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡ ಉರುಳಿದ ಮರುದಿನ ನಸುಕಿನಲ್ಲಿ ರಾಮಲಲ್ಲಾನನ್ನು ಪ್ರತಿಷ್ಠಾಪಿಸಿದ 12 ಮಂದಿ ಸಂತರಲ್ಲಿ ಶ್ರೀ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರೂ ಓರ್ವರಾಗಿದ್ದರು.

ಕಣ್ವತೀರ್ಥದಿಂದ ಬಂದ ಶ್ರೀರಾಮ, ವಿಠಲನ ರೂಪದಲ್ಲಿ ಶ್ರೀಕೃಷ್ಣ ಮತ್ತು ಉಡುಪಿಯ ಬಾಲಕೃಷ್ಣನಿಗೆ ಪೂಜೆ ಸಲ್ಲಿಸುವ, ಆರಾಧಿಸುವ ಅಪೂರ್ವ ಭಾಗ್ಯ ಪೇಜಾವರ ಶ್ರೀಗಳದ್ದಾಗಿತ್ತು. ಪೇಜಾವರ ಶ್ರೀಗಳು ಅಯೋಧ್ಯೆ ಚಳವಳಿಯಲ್ಲಿ ಮುಂಚೂ ಣಿಯಲ್ಲಿದ್ದವರು. 1996ರ ಡಿ. 6ರಂದು ಕಟ್ಟಡ ಕುಸಿದ ಬಳಿಕ ಅದರೊಳಗಿದ್ದ ರಾಮಲಲ್ಲಾನ ವಿಗ್ರಹವನ್ನು ಕಾರ್ಯಕರ್ತರು ಎಲ್ಲೋ ಕೊಂಡೊಯ್ದಿದ್ದರು. ಪ್ರಾಯಃ ಇದಾಗುವಾಗ ಬೆಳಗ್ಗಿನ ಜಾವ ಆಗಿತ್ತು. ಸಾವಿರಾರು ಜನರ ಜಮಾವಣೆ, ಎಲ್ಲೆಡೆ ಗಂಭೀರ ವಾತಾವರಣವಿತ್ತು. ಡಿ. 7ರ ಬೆಳಗ್ಗೆ ಪೇಜಾವರ ಶ್ರೀಗಳೂ ತರಾತುರಿಯಲ್ಲಿ ಹೋಗುವಾಗ ದಾರಿ ಮಧ್ಯೆ ಕಾರ್ಯಕರ್ತರು ಆ ವಿಗ್ರಹವನ್ನು ಮೂಲ ಸ್ಥಳದಲ್ಲಿ ಇರಿಸುವಂತೆ ಹೇಳಿದರು. ಶ್ರೀಗಳು ಘಳಿಗೆ, ಮುಹೂರ್ತ ಯಾವುದನ್ನೂ ಕಾಣದೆ ತತ್‌ಕ್ಷಣವೇ ರಾಮಮಂತ್ರವನ್ನು ಹೇಳಿ ಪ್ರತಿಷ್ಠಾಪನೆ ಮಾಡಿದರು.

ಪೇಜಾವರ ಶ್ರೀಗಳು ಐದು ಪರ್ಯಾಯಗಳಲ್ಲಿ ಉಡುಪಿಯ ಶ್ರೀಕೃಷ್ಣನನ್ನು ಪೂಜಿಸಿದ್ದಾರೆ. ಮೊದಲ ಬಾರಿಗೆ ಪರ್ಯಾಯ ಪೀಠವೇ ರುವಾಗ ಅವರಿಗೆ ಕಿರಿವಯಸ್ಸು. 2016-18ರ ಐದನೆಯ ಪರ್ಯಾಯದಲ್ಲಿ ಇಳಿಪ್ರಾಯದಲ್ಲಿದ್ದರು. ಅದು ಪಟ್ಟದ ದೇವರಾದ ರಾಮವಿಠಲನ ಜತೆಗೆ ಉಡುಪಿಯ ಕಡೆಗೋಲು ಕೃಷ್ಣನನ್ನೂ ಪೂಜಿಸುವ ಸುಯೋಗ. ಹೀಗೆ ರಾಮನನ್ನೂ ವಿಠಲನನ್ನೂ ಶ್ರೀಕೃಷ್ಣನನ್ನೂ ಅಯೋಧ್ಯೆಯ ರಾಮಲಲ್ಲಾನನ್ನೂ ಪೂಜಿಸುವ ಅವಕಾಶ ಅಪೂರ್ವದಲ್ಲಿ ಅಪೂರ್ವವಲ್ಲದೆ ಇನ್ನೇನು!

20 ವರ್ಷಗಳ ಹಿಂದಿನ ಜ್ವರವೂ ಈಗ ಬಾಧಿಸಿದ್ದ ಜ್ವರವೂ
1999ರ ಪ್ರಥಮೈಕಾದಶಿಯಂದು ಶ್ರೀಗಳಿಗೆ ಜ್ವರ ಬಾಧಿಸಿತ್ತು. ಬೆಂಗಳೂರಿನಲ್ಲಿ ಮಧ್ಯಾಹ್ನ ಸಾವಿರಾರು ಶಿಷ್ಯರಿಗೆ ತಪ್ತಮುದ್ರಾಧಾರಣೆ ಮಾಡಿ ಸಂಜೆ ಚೆನ್ನೈಗೆ ತೆರಳಿ ಅಲ್ಲಿಯೂ ತಪ್ತಮುದ್ರೆ ಅನುಗ್ರಹಿಸಿ ಮರುದಿನ ಬೆಳಗ್ಗೆ ಬೆಂಗಳೂರಿಗೆ ಬಂದರು. ಒಂದೆಡೆ ಜ್ವರ ಬಾಧೆ, ಇನ್ನೊಂದೆಡೆ ನಿರಶನದ ದೃಢ ದೀಕ್ಷೆ. ಇದಾಗಿ ಎರಡು ದಶಕಗಳ ಬಳಿಕ ಅದೇ ರೀತಿ ಜ್ವರ ಬಂದಿತ್ತು. ಆದರೂ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡಿದರು. 1999ರಲ್ಲಿ ಅವರ ದೇಹ ಈಗಿನಿಂದ ಹೆಚ್ಚು ದೃಢವಾಗಿತ್ತು. ಆದರೆ ಈಗ ವಯೋಸಹಜವಾಗಿ ದೇಹ ದುರ್ಬಲವಾದ ಕಾರಣ ಅಸೌಖ್ಯವನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ.

ದೇಶವೇ ದೇಹವಿದ್ದಂತೆ
1967ರಲ್ಲಿ ಬಿಹಾರದಲ್ಲಿ ಭೀಕರ ಬರಗಾಲ. ಕರ್ನಾಟಕದ ಮೂಲೆ ಮೂಲೆಗಳಿಂದ ಸಹಾಯ ಕೇಳಿದರು. “ದೇವರ ಕೃಪೆ ಬಯಸುವ ಸಜ್ಜನರಿಗೆ ಇದೊಂದು ಸದವಕಾಶ. ಗ್ರಹಣದಂತೆ ಇದೂ ಒಂದು ಪರ್ವಕಾಲ. ದುಃಖ ಪೀಡಿತರ ಸೇವೆ ಮಾಡಿ ಆ ಮೂಲಕ ಸರ್ವಾಂತರ್ಯಾಮಿ ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗುವ ದೊಡ್ಡ ಅವಕಾಶ’ ಎಂದು ಘೋಷಿಸಿದರು. ಉರಿಬಿಸಿಲಿನಲ್ಲಿ ಪಾದಯಾತ್ರೆ ಕೈಗೊಂಡರು. “ಎಲ್ಲೋ ದೂರದ ಸಮಸ್ಯೆಗೆ ನಾವೇಕೆ ಕೊಡಬೇಕು’ ಎಂದು ಕೆಲವರು ಪ್ರಶ್ನಿಸಿದರು. “ನಮ್ಮ ದೇಹದ ಒಂದು ಅಂಗಕ್ಕೆ ತೊಂದರೆಯಾದರೂ ಇಡೀ ದೇಹವೇ ಕಾಳಜಿ ವಹಿಸುತ್ತದೆ. ಅದರಂತೆ ಭರತಖಂಡ ನಮ್ಮದು. ಅದರ ಒಂದು ಭಾಗದಲ್ಲಿ ತೊಂದರೆಯಾದರೂ ಇಡೀ ದೇಶವೇ ಸಹಾಯಕ್ಕೆ ಸಜ್ಜಾಗಬೇಕು’ ಎಂದರು.

ಟಾಪ್ ನ್ಯೂಸ್

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.