ಕನಸನ್ನೇ ವೃತ್ತಿಯಾಗಿಸಿಕೊಂಡ ಛಾಯಾಗ್ರಾಹಕಿ ವಿಮಲಾ
Team Udayavani, Jan 9, 2020, 5:57 AM IST
ಉಡುಪಿಯ ಹಲವೆಡೆ ನಡೆಯವ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮ, ಮದುವೆ-ಮುಂಜಿ ಮುಂತಾದ ಕಾರ್ಯಕ್ರಮಗಳಲ್ಲಿ ಮಹಿಳೆಯೊಬ್ಬರು ಕೆಮರಾ ಹಿಡಿದು, ಫೋಟೋ ಕ್ಲಿಕ್ಕಿಸುವ ದೃಶ್ಯವನ್ನು ಸಾಮಾನ್ಯವಾಗಿ ನೀವು ನೋಡಿರಬಹುದು. ಇವರೇ ವಿಮಲ ಕೊಟ್ಯಾನ್ ಕಲ್ಮಾಡಿ. ಇವರು ಮಲ್ಪೆ ಬಳಿಯ ಕಲ್ಮಾಡಿಯವರು. ಕಾಂತಪ್ಪ ಪೂಜಾರಿ ಮತ್ತು ಕಿಟ್ಟಿ ಪೂಜಾರ್ತಿಯ ಮಗಳು. ವಿಮಲ ಕೈಯಲ್ಲಿ ಕೆಮರಾ ಹಿಡಿದು 15 ವರ್ಷಗಳು ಕಳೆದಿವೆ. ಕಲ್ಯಾಣ ಮಂಟಪದಲ್ಲಿ ವಧೂ ವಿವಿಧ ಹಾವ ಭಾವವನ್ನು ವಿವಿಧ ಭಂಗಿಗಳಲ್ಲಿ ಚಿತ್ರ ಸೆರೆ ಹಿಡಿಯವಲ್ಲಿ ಸಿದ್ಧ ಹಸ್ತರು ಇವರು. ಎತೆಗೆ ಆ ಚಿತ್ರಗಳನ್ನು ಸಂಕಲಿಸಿ ಮತ್ತಷ್ಟು ಸುರೂಪಗೊಳಿಸುವ ಚಾಣಾಕ್ಷತನವೂ ಇವರಿಗಿರುವುದು ವಿಶೇಷ.
ವಿಮಲ ಕಲ್ಮಾಡಿ ಅವರು ಶಿಕ್ಷಕ ತರಬೇತಿ ಪಡೆಯಲು 2004 ರಲ್ಲಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಆಹ್ವಾನವೂ ಬಂದಿತು. ಆದರೆ ಒಂದು ದಿನ ಪತ್ರಿಕೆ ಪುಟ ತೆರೆಯುವಾಗ, ಫೋಟೋ ಸ್ಟುಡಿಯೋವೊಂದಕ್ಕೆ ಛಾಯಾಗ್ರಾಹಕರು ಬೇಕಾಗಿದ್ದಾರೆ ಎಂಬ ಜಾಹೀರಾತು ಕಂಡರಂತೆ. ಕೆಮರಾ ಹಿಡಿಯಬೇಕೆಂಬ ಆಸೆ ಮೊದಲಿಂದಲೂ ಇತ್ತು. ಕೂಡಲೇ ತಡಮಾಡದೇ ನಗರದ ಕವಿ ಮುದ್ದಣ ಮಾರ್ಗದಲ್ಲಿದ್ದ ಚೇತನಾ ಸ್ಟುಡಿಯೋವನ್ನು ಸಂಪರ್ಕಿಸಿದರಂತೆ. ಮಹಿಳೆಯಾಗಿದ್ದು ಕೊಂಡು ಛಾಯಾಗ್ರಾಹಕರಾಗಲು ತೋರಿದ ಆಸಕ್ತಿಯನ್ನು ಕಂಡು ಅದರ ಮಾಲಕರಾದ ರಾಘವ ಪದ್ಮಶಾಲಿ ಅಚ್ಚರಿ ಪಟ್ಟರಂತೆ.
ಪ್ರಾರಂಭಿಕ ಹಂತದಲ್ಲಿ ವಿಮಲ ಅವರಿಗೆ ಸ್ಟುಡಿಯೋದಲ್ಲಿ ಕೆಲಸ. ಬಳಿಕ ನಿಧಾನವಾಗಿ ಛಾಯಾಗ್ರಹಣ ಕಲೆಯನ್ನು ಕರಗತ ಮಾಡಿಕೊಂಡರು ವಿಮಲಾ. ಸಭೆ ಸಮಾರಂಭಗಳಿಗೆ ಫೋಟೋ ತೆಗೆಯಲು ಕರೆ ಬಂದಾಗ ಹಿಂಜರಿಯಲಿಲ್ಲ. ಈಗ ಅದೇ ಅವರ ವೃತ್ತಿ ಮತ್ತು ಬದುಕು.
ಚೇತನಾ ಸ್ಟುಡಿಯೋಗೆ ಈಗ 50 ವರ್ಷ. ತಾನು ಈ ಎತ್ತರಕ್ಕೆ ಬೆಳೆಯಲು ಗುರು ರಾಘವ ಪದ್ಮಶಾಲಿ ಯವರೇ ಕಾರಣ ಎನ್ನುವ ವಿಮಲಾ, ಅವರ ಸಹಾಯವನ್ನು ಮರೆಯುವುದಿಲ್ಲ. ವಿಮಲಾ ಅವರ ಸಾಧನೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಸಮ್ಮಾನಿಸಿ ಗೌರವಿಸಿವೆ. ಆತ್ಮವಿಶ್ವಾಸದಿಂದ ಯಾವುದಕ್ಕೂ ಹಿಂಜರಿಯದೇ ಮುನ್ನುಗ್ಗಿದ್ದರೆ ಮಹತ್ತರ ಸಾಧನೆ ಸಾಧ್ಯ ಎಂಬುದಕ್ಕೆ ವಿಮಲಾ ಅವರೇ ನಿದರ್ಶನ.
-ತಾರಾನಾಥ್ ಮೇಸ್ತ ಶಿರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.