ಯೋಜನಾಬದ್ಧ ಅಭಿವೃದ್ಧಿ: ಶೋಭಾ
Team Udayavani, May 24, 2019, 6:10 AM IST
ಉಡುಪಿ: ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಯೋಜನಾ
ಬದ್ಧವಾಗಿ ಅಭಿವೃದ್ಧಿ ಮಾಡುವು ದಾಗಿ ನೂತನ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. “ಉದಯವಾಣಿ’ಯೊಂದಿಗೆ ಮಾತನಾಡಿದ ಅವರ ಅನಿಸಿಕೆಗಳು ಇಂತಿವೆ:
– ನಿಮ್ಮ ಗೆಲುವಿನ ಕುರಿತು ಏನಂತೀರಿ?
ಕಾರ್ಯಕರ್ತರು, ಮತದಾರರು ಪ್ರಧಾನಿ ಮೋದಿ ನೇತೃತ್ವದ ಸರಕಾರವನ್ನು ಮೆಚ್ಚಿದ್ದಾರೆ. ರಾಜ್ಯ ಸರಕಾರದ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕದ ಅಭಿವೃದ್ಧಿಯನ್ನು ಬಯಸಿ ಕಾರ್ಯಕರ್ತರು, ಮತದಾರರು ಮತಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಬಿಜೆಪಿಗೆ ನೀಡಿದ್ದಾರೆ. ಮೋದಿಯಿಂದಾಗಿ ಇಂತಹ ಗೆಲುವು ಸಾಧ್ಯವಾಗಿದೆ. ಇದು ಕಾರ್ಯಕರ್ತರ ಗೆಲುವು. ಮೂರನೆಯ ಎರಡರಷ್ಟು ಬಹುಮತ ಬರುವ ವಿಶ್ವಾಸವಿದೆ. ಖರ್ಗೆ, ಮೊಲಿಯಂತಹ ನಾಯಕರೂ ಮೋದಿ ಎದುರು ಸೋತಿದ್ದಾರೆ. ಮಹಾಘಟ ಬಂಧನ್ ಪ್ರಯತ್ನ ನಡೆಯಲಿಲ್ಲ. ಉಡುಪಿಯ ಮತದಾರರು ಬುದ್ಧಿವಂತರು. ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ.
– ನಿಮ್ಮ ಮುಂದಿನ ಗುರಿ ಏನು?
ಲೋಕಸಭಾ ಕ್ಷೇತ್ರವನ್ನು ಯೋಜನಾಬದ್ಧವಾಗಿ ಅಭಿವೃದ್ಧಿಗೊಳಿಸುವುದು ನಮ್ಮ ಇರಾದೆ. ಈಗಾಗಲೇ ಐದು ವರ್ಷಗಳ ಅನುಭವ ಇರುವುದರಿಂದ ಯೋಜನೆಯನ್ನು ಸಿದ್ಧಪಡಿಸಿ ಅಭಿವೃದ್ಧಿಪಡಿಸುತ್ತೇನೆ.
– ಪಕ್ಷದ ಹೊಣೆ, ಜನಪ್ರತಿನಿಧಿಯ ಹೊಣೆ ಹೇಗೆ ನಿಭಾಯಿಸುತ್ತೀರಿ?
ಇದೇನೂ ಕಷ್ಟವಲ್ಲ. ಎರಡನ್ನೂ ನಿರ್ವಹಿಸುತ್ತೇನೆ. ಪಕ್ಷ ಸಂಘಟನೆಗೆ ಒತ್ತು ಕೊಡುತ್ತೇನೆ. ರಾಜ್ಯದಲ್ಲಿ ಬಿಜೆಪಿ ಇನ್ನಷ್ಟು ಬಲಗೊಳ್ಳಬೇಕಾಗಿದೆ.
– ನಿರ್ದಿಷ್ಟವಾಗಿ ಯಾವ ಯೋಜನೆಗಳನ್ನು ತರಲು ಪ್ರಯತ್ನಿಸುತ್ತೀರಿ?
ಹಿಂದಿನ ಬಾರಿ ಇಎಸ್‌ಐ ಆಸ್ಪತ್ರೆಯನ್ನು ಮಾಡುವುದಾಗಿ ಹೇಳಿದ್ದೆ. ಆದರೆ ರಾಜ್ಯ ಸರಕಾರ ವರದಿ ಕೊಡದ ಕಾರಣ ಆಗಿರಲಿಲ್ಲ. ಈ ಬಾರಿ ಫಾಲೋ ಅಪ್ ಮಾಡಿ ಉಡುಪಿಗೆ ಇಎಸ್‌ಐ ಆಸ್ಪತ್ರೆ ತರಲು ಪ್ರಯತ್ನಿಸುತ್ತೇನೆ. ಕೊಂಕಣ ರೈಲ್ವೇ ದ್ವಿಪಥ ಕಾಮಗಾರಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ಇತ್ಯಾದಿಗಳನ್ನು ನಡೆಸುತ್ತೇನೆ. ಜಗನ್‌ಮೋಹನ್ ರೆಡ್ಡಿಯವರ ಬಳಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಕೆಲಸ ತ್ವರಿತಗೊಳಿಸಲು ಒತ್ತಾಯಿಸುತ್ತೇನೆ.
– ಸರಕಾರದಲ್ಲಿ ಮಂತ್ರಿಗಿರಿ ಸಿಗುವ ಸಾಧ್ಯತೆ ಇದೆಯೆ?
ನಾನು ಅಂತಹ ಹುದ್ದೆಗಳ ಆಕಾಂಕ್ಷಿಯಲ್ಲ. ಪಕ್ಷ ಹೇಳಿದಂತೆ ನಡೆದುಕೊಳ್ಳುತ್ತೇನೆ. ಮೋದಿ ಮತ್ತು ಅಮಿತ್ ಶಾ ಹೇಳಿದರೆ ಒಪ್ಪಿಕೊಳ್ಳುತ್ತೇನೆ.
– ರಾಜ್ಯ ಸರಕಾರದ ಪತನದ ಬಗ್ಗೆ ಏನು ಹೇಳುತ್ತೀರಿ?
ರಾಜ್ಯದ ಜೆಡಿಎಎಸ್- ಕಾಂಗ್ರೆಸ್ ಸರಕಾರ ಪತನದ ಕ್ಷಣಗಣನೆ ಆರಂಭವಾಗಿದೆ. ಈ ಹಿಂದೆಯೇ ಹೇಳಿದಂತೆ ನಾವು ಬೇರೆ ಪಕ್ಷಗಳ ಶಾಸಕರನ್ನು ಕರೆಯುವುದಿಲ್ಲ. ಅವರು ರಾಜೀನಾಮೆ ನೀಡಿ ನಮ್ಮ ಜತೆ ಬಂದರೆ ಸ್ವಾಗತಿಸುತ್ತೇವೆ. ರಾಜ್ಯ ಸರಕಾರದವರು ಮಾಡಿದ ಪಾಪದ ಫಲವನ್ನು ಅವರು ಅನುಭವಿಸುತ್ತಾರೆ. ಇದು ಜನವಿರೋಧಿ ಸರಕಾರ.
ಮೋದಿ ಸರಕಾರದ ಯೋಜನೆಗಳನ್ನು ಜಾರಿಗೆ ತರುತ್ತೇನೆ.
– ಗೋಬ್ಯಾಕ್, ಪ್ರಮೋದ್…
ಗೋ ಬ್ಯಾಕ್ ಎಂದು ಸ್ವಾರ್ಥಕ್ಕಾಗಿ ಹೇಳಿದರು. ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಬೇಕು. ಪ್ರಮೋದ್ ಅವರು ಏಕೆ ಜೆಡಿಎಸ್ ಕಡೆಗೆ ಹೋದರೋ ಗೊತ್ತಿಲ್ಲ. ಕಾಂಗ್ರೆಸ್ ಅವರಿಗೆ ಒಳ್ಳೆಯದೇ ಮಾಡಿತ್ತು. ಅವರು ಮುಂದೆ ಏನು ಮಾಡುತ್ತಾರೆಂದು ಗೊತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.