ನೀರು ಕಲುಷಿತ: ಮತದಾನ ಬಹಿಷ್ಕಾರ !
Team Udayavani, Apr 14, 2023, 3:57 PM IST
ಉಡುಪಿ: ನಗರಸಭೆಯ ಒಳಚರಂಡಿ ಕಾಮಗಾರಿ ಅವ್ಯವಸ್ಥೆಯಿಂದ ಕರಂಬಳ್ಳಿ ವೆಂಕಟರಮಣ ಲೇಔಟ್‌ನ ಹಲವು ಮನೆಗಳ ಬಾವಿ ನೀರು ಹಾಳಾಗಿ, ಕುಡಿ ಯುವ ನೀರಿಗೆ ತೀವ್ರ ಸಮಸ್ಯೆಯಾಗಿದೆ.
ಲೇಔಟ್‌ನಲ್ಲಿ ಸುಮಾರು 15-20 ಮನೆಗಳಿದ್ದು, ಕಳೆದ 10 ವರ್ಷಗಳಿಂದ ಚರಂಡಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪ್ರತೀ ಮಳೆಗಾಲದಲ್ಲೂ ನೆರೆಯ ನೀರಿ ನೊಂದಿಗೆ ಇಲ್ಲಿನ ಚರಂಡಿಯಲ್ಲಿನ ತ್ಯಾಜ್ಯ ನೀರು ಮೇಲೆ ಬಂದು ರಸ್ತೆಯಲ್ಲೇ ಹರಿಯುತ್ತಿತ್ತು. ಇದರಿಂದ ಬಾವಿ ನೀರು ಮಲಿನವಾಗಿ ಕುಡಿಯಲು ಸಾಧ್ಯ ವಾಗುತ್ತಿಲ್ಲ ಎಂದು ನಾಗರಿಕರ ದೂರು. ಬೇಸಗೆ ಆಗಿರುವುದರಿಂದ ನಗರಸಭೆ ದಿನ ಬಿಟ್ಟು ದಿನಕ್ಕೆ ನೀರು ಪೂರೈಕೆ ಮಾಡುತ್ತಿದೆ. ಇದರಿಂದ ಕುಡಿಯಲು, ಸ್ನಾನ ಮಾಡಲು ನೀರು ಇಲ್ಲದಂತಾಗಿದೆ. ಖಾಸಗಿಯಾಗಿ ನೀರು ಖರೀದಿ ಮಾಡಿ ಕುಡಿಯುತ್ತಿದ್ದೇವೆ. ಕೆಲವು ಮಕ್ಕಳಿಗೆ ಅನಾರೋಗ್ಯ ಕಾಡಿದೆ. ಬಾವಿಗಳ ನೀರು ಕೆಟ್ಟ ವಾಸನೆ ಬೀರುತ್ತಿದೆ. ಈ ಬಗ್ಗೆ ಹಲವು ಸಲ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಅಳಲು.
ಮತದಾನ ಬಹಿಷ್ಕಾರದ ಎಚ್ಚರಿಕೆ
ಪರಿಸರದ 12 ಮನೆಗಳ ಗೇಟ್‌ಗಳಲ್ಲಿ ಮತದಾನ ಬಹಿಷ್ಕರಿಸುವ ಬಗ್ಗೆ ಬ್ಯಾನರ್ ಅಳವಡಿಸಿ ಎಚ್ಚರಿಕೆ ನೀಡಲಾಗಿದೆ.
“ಕಳಪೆ ಚರಂಡಿ ವ್ಯವಸ್ಥೆಯಿಂದ ವೆಂಕಟರಮಣ ಲೇಔಟ್‌ನ ಚರಂಡಿಯ ನೀರು ಪ್ರತೀ ಮನೆಯ ಬಾವಿಯ ನೀರಿಗೆ ಸೇರಿಕೊಂಡಿದೆ. ಇದರಿಂದ ಪ್ರತೀ ಮನೆ ಯಲ್ಲಿ ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ. ಇದನ್ನು ಸರಿಪಡಿಸದಿದ್ದಲ್ಲಿ ಚುನಾವಣೆ ಬಹಿಷ್ಕರಿಸಲಾಗುವುದು’ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ.
ಕರಂಬಳ್ಳಿ ವಾರ್ಡ್‌ನ ವೆಂಕಟರಮಣ ಲೇಔಟ್‌ನಲ್ಲಿರುವ ಸುಮಾರು 15-20 ಮನೆಗಳ ಬಾವಿಗಳಿಗೆ ತ್ಯಾಜ್ಯ ನೀರು ಸೇರಿ ಕಲುಷಿತಗೊಂಡಿರುವ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ನೀರಿನ ಪರೀಕ್ಷೆ ಮಾಡಿ ಭೂವೈಜ್ಞಾನಿಕ ತನಿಖೆ ನಡೆಸಿ ವರದಿ ನೀಡುವಂತೆ ಎಂಐಟಿ ಮುಖ್ಯಸ್ಥರಿಗೆ ತಿಳಿಸಲಾಗಿದೆ. ಸಾರ್ವಜನಿಕರ ಎದುರಿನಲ್ಲಿ ಒಳಚರಂಡಿಯ ಎಲ್ಲ ಚೇಂಬರ್‌ಗಳನ್ನು ತೆರೆದು ಯಾವುದೇ ಬ್ಲಾಕ್ ಆಗಿಲ್ಲವೆಂದು ಮನದಟ್ಟು ಮಾಡಲಾಗಿದೆ. ಸದ್ಯಕ್ಕೆ ಈ ಪ್ರದೇಶದ ಮನೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ವ್ಯವಸ್ಥೆ ಮಾಡಲಾಗಿದೆ. ನೀರಿನ ಪರೀಕ್ಷಾ ವರದಿಯ ಬಳಿಕ ಸಮಸ್ಯೆ ಕಂಡುಬಂದರೆ ನೀರನ್ನು ಖಾಲಿ ಮಾಡಿ ಸ್ವತ್ಛ ಮಾಡಿಕೊಡಲಾಗುವುದು ಎಂದು ಪೌರಾಯುಕ್ತರು ತಿಳಿಸಿದ್ದಾರೆ.
ಪೈಪ್ ಒಡೆದು ಪೋಲಾಗುತ್ತಿರುವ ನೀರು
ಮಣಿಪಾಲ: ಅಶೋಕ ನಗರದಲ್ಲಿ ಕಳೆದ 25 ದಿನಗಳಿಂದ ಕುಡಿಯುವ ನೀರಿನ ಪೈಪ್ ಒಡೆದು ಹೋಗಿದ್ದು ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. 10 ದಿನಗಳ ಹಿಂದೆ ಇಲ್ಲಿ ಅರ್ಧ ಕೆಲಸ ಮಾಡಿ ಹಾಗೆಯೇ ಬಿಡಲಾಗಿದೆ. ಪ್ರಸ್ತುತ ಬೇಸಗೆಯಾದ್ದರಿಂದ ನೀರಿನ ಕೊರತೆ ಇದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯರು ನಗರಸಭೆಯನ್ನು ಆಗ್ರಹಿಸಿದ್ದಾರೆ.
ದುಃಸ್ಥಿತಿಯಲ್ಲಿರುವ
ಮರ ತೆರವುಗೊಳಿಸಿ
ಉಡುಪಿ: ಹಯಗ್ರೀವ ನಗರದಲ್ಲಿ ಎರಡು ದೊಡ್ಡ ಶಿಥಿಲಗೊಂಡ ತಾಳೆ ಮರಗಳಿದ್ದು, ಇದು ಯಾವುದೇ ಕ್ಷಣದಲ್ಲಿಯೂ ಬೀಳುವ ಸ್ಥಿತಿಯಲ್ಲಿದೆ. ಇಲ್ಲಿನ ಎರಡು ಮನೆಗಳ ಮೇಲೆ ಬೀಳುವ ಸಾಧ್ಯತೆ ದಟ್ಟವಾಗಿದೆ. ರಸ್ತೆ, ಚರಂಡಿಗೂ ಇದರಿಂದ ಸಮಸ್ಯೆಯಾಗಲಿದ್ದು, ಕೂಡಲೆ ಮರಗಳನ್ನು ತೆರವುಗೊಳಿಸುವ ಬಗ್ಗೆ ನಗರಸಭೆ, ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.