ಕೆಲಸವೇ ಶ್ರೀರಕ್ಷೆ  , ಜನಾಶೀರ್ವಾದವೇ ವಿಶ್ವಾಸ


Team Udayavani, Mar 13, 2018, 6:20 AM IST

Pramod-Madhwaraj–600-A.jpg

ಉಡುಪಿ: ನಾನು ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನನ್ನದೇನಿದ್ದರೂ ಕಾನೂನುಬದ್ಧವಾದ ಕೆಲಸ, ಜನ ಸೇವೆ. ನನ್ನ ಪ್ರತೀ ಹೆಜ್ಜೆಗಳು ಯಾವತ್ತೂ ತೆರೆದ ಪುಸ್ತಕದ ಪುಟಗಳು.

– ಇದು ಉಡುಪಿ ವಿಧಾನ ಸಭಾ ಕ್ಷೇತ್ರವನ್ನು ಪ್ರಪ್ರಥಮ ಬಾರಿಗೆ ಪ್ರತಿನಿಧಿಸುತ್ತಿರುವ ಪ್ರಮೋದ್‌ ಮಧ್ವರಾಜ್‌ ಸದಾ ಹೇಳುವ ಮಾತುಗಳು. ಮೊದಲ ಬಾರಿಗೆ ಶಾಸಕನಾಗಿ, ಸಚಿವನಾಗಿ “ರಾಜ್ಯದ ನಂ.1 ಶಾಸಕ’ ಎಂದು ಖಾಸಗಿ ಸಂಸ್ಥೆ ಯೊಂದರ ಸಮೀಕ್ಷೆಯಿಂದ ಗುರುತಿಸಲ್ಪಟ್ಟಿರುವ ಪ್ರಮೋದ್‌  ಅಭಿವೃದ್ಧಿಯನ್ನೇ ಮಂತ್ರವನ್ನಾಗಿಸಿ ಕೊಂಡಿದ್ದಾರೆ.

ದೂರದರ್ಶಿತ್ವ
ತಂದೆಯಂತೆಯೇ ದಾನಧರ್ಮದ ಮೂಲಕ ಜನರಿಂದ ಗುರುತಿಸಲ್ಪಟ್ಟ ಪ್ರಮೋದ್‌ ಅವರು ಸೋಲು-ಗೆಲುವು ಗಳನ್ನು ಸಮನಾಗಿ ಸ್ವೀಕರಿಸಿದವರು. “ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಆದರೆ ಜನರ ಕೆಲಸಗಳು ಮಾತ್ರ ನಿರಂತರ’ ಎನ್ನುತ್ತಾರವರು. ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿದಾಗ ಅವರು ಸ್ವ ಆಸಕ್ತಿಯಿಂದ ರೂಪಿಸಿದ “ಮಿಷನ್‌ ಉಡುಪಿ 2025′ ಎಂಬ ಸಮಗ್ರ ಯೋಜನೆಗಳ ಪಟ್ಟಿ ಯೊಂದನ್ನು ಉಡುಪಿ ಜನತೆಯ ಮುಂದಿಟ್ಟಿದ್ದರು. ಇದು 2025ರ ವೇಳೆಗೆ ಉಡುಪಿ ಹೇಗಿರಬೇಕು ಎಂಬುದನ್ನು ತೋರಿಸಿ ಜನರಲ್ಲಿ ಹೊಸ ಆಶಾಭಾವನೆ ಮೂಡಲು ಕಾರಣವಾಗಿತ್ತು. “ಈ ಪೈಕಿ ಬಹುತೇಕ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದೇನೆ. ಇದು ಪೂರ್ಣ ಅನುಷ್ಠಾನಕ್ಕೆ 7 ವರ್ಷಗಳು ಬೇಕಾಗಿದ್ದು ಅವಕಾಶ ದೊರೆತರೆ ಆ ನಿಗದಿತ ಅವಧಿಗಿಂತಲೂ ಮುನ್ನ ಗುರಿ ತಲುಪುವ ವಿಶ್ವಾಸವಿದೆ’ ಎನ್ನುತ್ತಾರೆ ಪ್ರಮೋದ್‌.

ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ 5 ವರ್ಷಗಳಲ್ಲಿ 2,005 ಕೋ.ರೂ. ವಿನಿಯೋಗಿಸಿದ್ದೇನೆ. ಜಾತಿ, ಧರ್ಮ, ಪಕ್ಷ ಎಂಬುದನ್ನು ನೋಡದೆ ಕೆಲಸ ಮಾಡಿದ್ದೇನೆ. ಜನ ಸಂಪರ್ಕ ಸಭೆ ನಡೆಸಿದ್ದರಿಂದ ಜನರ ಬೇಕು-ಬೇಡಗಳು ನೇರ ತಿಳಿಯುವಂತಾಯಿತು. ನನ್ನೊಂದಿಗೆ 4,000ಕ್ಕೂ ಅಧಿಕ ಮಂದಿ ಸ್ವಯಂಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಸರಕಾರದ ನೂರಾರು ಯೋಜನೆಗಳನ್ನು ಜನರಿಗೆ ತಲು ಪಿಸುವುದೇ ನನ್ನ ಗುರಿ.ಇದಕ್ಕಾಗಿಯೇ ನಾನು ಗಮನ ಕೇಂದ್ರೀಕರಿಸಿದ್ದೆ ಎಂಬುದು ಅವರ ವಿಶ್ವಾಸದ ನುಡಿ.

ಸಾಮಾನ್ಯರೊಂದಿಗೆ ಸಾಮಾನ್ಯನಾಗಿ
ಸಿರಿವಂತ ಕುಟುಂಬದ ಹಿನ್ನೆಲೆಯಿದ್ದರೂ ಅವರು ಸಾಮಾನ್ಯ ಜನರೊಂದಿಗೆ ಬೆರೆಯುವ ಗುಣ ಹೊಂದಿರುವುದರಿಂದ ಜನರಿಗೆ ಹತ್ತಿರವಾಗಿದ್ದಾರೆ ಎಂಬ ಅಭಿಪ್ರಾಯಗಳಿವೆ. ಇದಕ್ಕೆ ಪೂರಕವಾಗಿ ಎಲ್ಲ ವರ್ಗದವರೊಂದಿಗೂ ಇವರಿಗೆ ಒಡನಾಟವಿದೆ. ಪ್ರಮೋದ್‌ ಜನಸಂಪರ್ಕ ಅವರ ಪ್ರತಿಸ್ಪರ್ಧಿಗಳಲ್ಲಿ ಒಂದಷ್ಟು ಭೀತಿ ಮೂಡಿಸಿದರೂ ಆಶ್ಚರ್ಯವಿಲ್ಲ.
ವಾರಾಹಿ ಕುಡಿಯುವ ನೀರು, ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಅನುಷ್ಠಾನ, ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಕ್ರಮ ಮೊದಲಾದವು ಅವರ ವಿಶೇಷ ಕಾಳಜಿಯ ಕೆಲವು ಯೋಜನೆಗಳು. ರಸ್ತೆ, ಸೇತುವೆ ಗಳ ನಿರ್ಮಾಣ ಮತ್ತು ಅಭಿವೃದ್ಧಿ, ಮೀನುಗಾರಿಕೆ, ಕ್ರೀಡಾಕ್ಷೇತ್ರಗಳಿಗೆ ಆದ್ಯತೆ ನೀಡಿರುವುದನ್ನು ಸಚಿವರು ಪ್ರಸ್ತಾವಿಸಲು ಮರೆಯುವುದಿಲ್ಲ. ಕಾಮಗಾರಿಗಳ ಗುಣ ಮಟ್ಟಕ್ಕೆ ಒತ್ತು ಕೊಡುತ್ತಾ ಬಂದಿದ್ದೇನೆ. ಮುಲಾಜಿ ಲ್ಲದೆ ಗುತ್ತಿಗೆದಾರರನ್ನು ಪ್ರಶ್ನಿಸುತ್ತೇನೆ. ಪ್ರಾಮಾಣಿಕತೆಯಲ್ಲಿ ರಾಜಿ ಇಲ್ಲ ಎನ್ನುವುದು ಪ್ರಮೋದ್‌ ದೃಢ ನಿಲುವು.

ಕ್ರೀಡಾ ನೀತಿಯ ಗರಿ
ರಾಜ್ಯಕ್ಕೆ ಪ್ರಪ್ರಥಮ ಕ್ರೀಡಾ ನೀತಿಯನ್ನು ಕೊಟ್ಟಿದ್ದೇನೆ. ಇದು ನನ್ನ ಪಾಲಿಗೆ ದೊರೆತ ಅವಕಾಶ. ರಾಜ್ಯದ ಮಕ್ಕಳು ಎಳವೆಯಲ್ಲಿಯೇ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳು ವಂತಾಗಬೇಕು, ಅವರಿಗೆ ಉತ್ತಮ ದರ್ಜೆಯ ತರಬೇತಿ, ಸೌಲಭ್ಯಗಳು ದೊರೆಯಬೇಕು. ಕ್ರೀಡಾ ಕ್ಷೇತ್ರದಲ್ಲಿ ಕೂಡ ಹಣಕಾಸಿನ ಹೂಡಿಕೆ ಹೆಚ್ಚಾಗಬೇಕು ಎಂಬ ನಿಲುವು ನನ್ನದು. ಯಾವುದೇ ಪ್ರತಿಭೆ ಕಮರಿ ಹೋಗಬಾರದು. ಗ್ರಾಮೀಣ ಭಾಗಗಳಲ್ಲಿಯೂ ಅಂತಾರಾಷ್ಟ್ರೀಯ ಕ್ರೀಡಾ ಪಟುಗಳು ಬೆಳೆಯುವಂತಾಗಬೇಕು ಎಂಬ ನಿಟ್ಟಿನಲ್ಲಿ ಕ್ರೀಡಾ ನೀತಿ ರೂಪಿಸಿದ್ದೇವೆ. ಅನೇಕ ತಜ್ಞರು, ವಿವಿಧ ಇಲಾಖೆ
ಗಳ ಜತೆಗೆ ಚರ್ಚಿಸಿ ಕ್ರೀಡಾನೀತಿ ರೂಪಿಸಿದ್ದೇವೆ. ಕ್ರೀಡೆಯಲ್ಲಿ ನಮ್ಮ ರಾಜ್ಯ ಕೂಡ ರಾರಾಜಿಸಬೇಕೆಂಬ ನಮ್ಮೆಲ್ಲರ ಆಸೆಗೆ ಕ್ರೀಡಾ ನೀತಿ ಪೂರಕವಾಗಲಿದೆ. ಕನಸುಗಳು ಸಾಕಾರವಾಗಲಿವೆ ಎನ್ನುವ ವಿಶ್ವಾಸ ಪ್ರಮೋದ್‌ ಅವರದ್ದು.

ಕೆಲವೊಮ್ಮೆ ಅಧಿಕಾರಿಗಳೂ
ನನ್ನ ಮಾತು ಕೇಳುವುದಿಲ್ಲ!

ನೀವೇನಾದರೂ ಅಧಿಕಾರಿಗಳ ಮೇಲೆ ಪ್ರಭಾವ ಬೀರುವುದುಂಟಾ? ಎಂದು ಕೇಳಿದರೆ “ನಾನು ಯಾವತ್ತೂ ಕೂಡ ಆಡಳಿತದಲ್ಲಿ ಮೂಗು ತೂರಿಸಿದವನಲ್ಲ. ಎಲ್ಲಿಯಾ ದರೂ ಅನಿವಾರ್ಯ ಸಂದರ್ಭದಲ್ಲಿ ಕಾನೂನು ಸಡಿಲಿಕೆ ಸಾಧ್ಯವೆ ? ಎಂದು ಕೇಳಿದರೆ ಅದನ್ನು ಕೂಡ ಅಧಿಕಾರಿಗಳು ಒಪ್ಪುವುದಿಲ್ಲ. ಅನಂತರ ನಾನು ಕೂಡ ಸುಮ್ಮನಾಗುತ್ತೇನೆ’ ಎಂಬುದು ಸಚಿವ ಪ್ರಮೋದ್‌ ಅವರ ಸ್ಪಷ್ಟ ನುಡಿ.

ಧಾರ್ಮಿಕ ಮುಖಂಡರ ಸಂಪರ್ಕ
ಹಲವು ಧರ್ಮಗಳ ಮುಖಂಡರ ಸಂಪರ್ಕ ನನಗಿದೆ. ಅದು ಅತ್ಯಂತ ಗೌರವಯುತವಾದದ್ದು. ರಾಜಕೀಯಕ್ಕಾಗಿ ನಾನು ಅಂತಹ ಸಂಪರ್ಕಗಳನ್ನು ಇಟ್ಟುಕೊಂಡವನಲ್ಲ. ಭಕ್ತಿ, ಸರ್ವಧರ್ಮ ಸಮನ್ವಯವನ್ನು ನಾನು ಪಾಲಿಸಿಕೊಂಡು ಬಂದವನು ನಾನು ಎನ್ನುತ್ತಾರವರು.

ಶೀರೂರು ಶ್ರೀಗಳು ಬಿಜೆಪಿಯಿಂದ ಅಥವಾ ಪಕ್ಷೇತರ ರಾಗಿ ಸ್ಪರ್ಧಿಸುತ್ತಾರೆ ಎಂಬ ಇತ್ತೀಚೆಗಿನ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸುವ ಪ್ರಮೋದ್‌ ಅವರು “ಶೀರೂರು ಶ್ರೀಗಳ ನಿರ್ಧಾರದ ಯಾವ ಸೂಚನೆಯೂ ನನಗಿರಲಿಲ್ಲ. ಕಳೆದ ಬಾರಿ ಅವರು ನನ್ನ ಪರ ಪ್ರಚಾರಕ್ಕೆ ಬಂದಿದ್ದರು. ಅವರ ಆಶೀರ್ವಾದ ನನಗೆ ಬೇಕು. ಅವರು ನನ್ನ ಬಗ್ಗೆ ಮೆಚ್ಚುಗೆಯ ಮಾತನಾಡಿರುವುದಕ್ಕೆ ಅವರಿಗೆ ಧನ್ಯವಾದಗಳು. ಅವರನ್ನು ಚುನಾವಣೆಗೆ ನಿಲ್ಲುವಂತೆ ಪ್ರೇರೇಪಿಸುವ ರಾಜಕಾರಣ ನಾನು ಮಾಡುವುದಿಲ್ಲ. ಅಂತಹ ರಾಜಕಾರಣ ಮಾಡುವು ದಾದರೆ ನಿಮ್ಮೆಲ್ಲರಲ್ಲಿ ಹೇಳಿಯೇ ಮಾಡುತ್ತೇನೆ’ ಎನ್ನುತ್ತಾರೆ.

ಕ್ರೀಡಾ ರಾಜಧಾನಿ ಯತ್ನ
ಉಡುಪಿಯನ್ನು ಕ್ರೀಡಾ ರಾಜಧಾನಿಯನ್ನಾಗಿ ಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದೇನೆ. ನನಗೆ ಕ್ರೀಡಾ ಖಾತೆ ದೊರೆತ ಅನಂತರ ಉಡುಪಿ ಜಿಲ್ಲೆಯೊಂದಕ್ಕೇ 22 ಕೋ.ರೂ. ಅಧಿಕ ಅನುದಾನ ವಿನಿಯೋಗಿಸಲಾಗಿದೆ. ಉಡುಪಿ ಜಿಲ್ಲಾ ಕ್ರೀಡಾಂಗಣವನ್ನು ಸುಸಜ್ಜಿತಗೊಳಿಸಿದ್ದೇವೆ. ಅಂತಾರಾಷ್ಟ್ರೀಯ ದರ್ಜೆಯ ಈಜುಕೊಳ, ಒಳಾಂಗಣ ಕ್ರೀಡಾಂಗಣ, ಇನ್‌ಡೋರ್‌ ಲಾನ್‌ ಟೆನ್ನಿಸ್‌ ಕೋರ್ಟ್‌ ಇತ್ಯಾದಿ ಕೆಲಸಗಳು ನನ್ನ ಮಹತ್ವದ ಕೊಡುಗೆಗಳು ಎನ್ನಲು ಖುಷಿಯಾಗುತ್ತವೆ. ಯುವಚೈತನ್ಯ ಯೋಜನೆಯ ಮೂಲಕ ಸಾವಿರಾರು ಯುವಕ ಯುವತಿ ಸಂಘಗಳಿಗೆ ತಲಾ 40,000 ರೂ. ಮೌಲ್ಯದ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದ್ದೇನೆ. ಯುವಕರು ಬೇರೆ ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಬೇಡ, ಬದಲು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಂಡು ಉತ್ತಮ ವ್ಯಕ್ತಿಗಳಾಗಲಿ ಎಂಬುದು ನನ್ನ ಅಭಿಲಾಷೆಯಾಗಿತ್ತು. ನನ್ನ ಒತ್ತಾಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮನ್ನಿಸಿದ್ದರಿಂದ ಯುವಚೈತನ್ಯ ಕೂಡ ಜಾರಿಗೆ ಬರಲು ಸಾಧ್ಯವಾಯಿತು ಎನ್ನುತ್ತಾರೆ ಪ್ರಮೋದ್‌.

– ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.