ಹೆಚ್ಚುವರಿ ಆಯುಷ್ ಕೇಂದ್ರ ನಿರ್ಮಾಣಕ್ಕೆ ಪ್ರಸ್ತಾವನೆ
ಜಿಲ್ಲೆಯಲ್ಲಿ ಆಯುರ್ವೇದಕ್ಕೆ ಸಿಗುತ್ತಿದೆ ಉತ್ತೇಜನ
Team Udayavani, Dec 20, 2021, 6:01 PM IST
ಉಡುಪಿ: ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸಂರಕ್ಷಣೆ ಉದ್ದೇಶದಿಂದ ಕೇಂದ್ರ ಸರಕಾರ ಉತ್ತೇಜನ ನೀಡಿರುವ ಆಯುಷ್ ಇಲಾಖೆ ಉಡುಪಿ ಜಿಲ್ಲೆಯಲ್ಲಿ ಯಶಸ್ಸು ಕಾಣುತ್ತಿದೆ. ಈಗಾಗಲೇ ಇರುವ ಗ್ರಾಮಾಂತರ ಭಾಗದ ಆಯುಷ್ ಕೇಂದ್ರಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ 5 ಕಡೆಗಳಲ್ಲಿ ಆಯುಷ್ ಕೇಂದ್ರ ತೆರೆಯಲು ಪ್ರಸ್ತಾವನೆ ಕಳುಹಿಸಲಾಗಿದೆ.
ಕುಂದಾಪುರ ತಾಲೂಕಿನ ಸಿದ್ದಾಪುರ, ಕಾಪುವಿನ ಮಲ್ಲಾರು, ಬ್ರಹ್ಮಾವರದ ಪೆರ್ಡೂರು, ಕೋಟ, ವಂಡ್ಸೆಯಲ್ಲಿಯ ಹೆಸರು ಪ್ರಸ್ತಾವನೆಯಲ್ಲಿದೆ.
ಕಾರ್ಯಾಚರಿಸುತ್ತಿರುವ ಆಯುಷ್ ಆಸ್ಪತ್ರೆಗಳು
ಉಡುಪಿ, ಕುಂದಾಪುರ, ಕಾರ್ಕಳ ತಾಲೂಕುಗಳಲ್ಲಿ ಆಯುಷ್ ಆಸ್ಪತ್ರೆಗಳಿವೆ. ಅದಲ್ಲದೆ ಗ್ರಾಮಾಂತರ ಭಾಗಗಳಲ್ಲಿ ಕೆರ್ವಾಶೆ, ಕಾಂತಾವರ, ಪಲಿಮಾರು, ಬೆಳಪು, ಕುರ್ಕಾಲು, ಕರ್ಜೆ, ಶಿರೂರು, ಸೋಮೇಶ್ವರ, ಗುಲ್ವಾಡಿ, ಕಾಳಾವರ, ಅಮಾಸೆಬೈಲು, ನಾವುಂದ, ಬೆಳ್ಳಾಲ, ಕಾಲೊ¤àಡುಗಳಲ್ಲಿ ಆಯುಷ್ ಕೇಂದ್ರ ಕಾರ್ಯಾಚರಿಸುತ್ತಿದೆ. ಇಲ್ಲಿ ಬೆಳಪುವಿಗೆ ಆರೋಗ್ಯಾಧಿಕಾರಿ ಇಲ್ಲ. ಪಲಿಮಾರಿನ ಆರೋಗ್ಯಾಧಿಕಾರಿ ಇಲ್ಲಿ ಪ್ರಭಾರಿಯಾಗಿದ್ದಾರೆ.
ಆಯುಷ್ ಕ್ಷೇಮ ಕೇಂದ್ರ
ಕಳೆದ ವರ್ಷದಿಂದ ಆಯುಷ್ ಕ್ಷೇಮ ಕೇಂದ್ರಗಳನ್ನು ಮಾಡಲಾಗಿದ್ದು, ಯೋಗ ಚಟುವಟಿಕೆ, ಮನೆ-ಮನೆ ಭೇಟಿ ನೀಡಿ ಆಯುರ್ವೇದ ಸಮೀಕ್ಷೆ, ಮನೆಮದ್ದುಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಕೆಲಸ ನಡೆಯುತ್ತಿದೆ. ಸರಕಾರ ಇದಕ್ಕಾಗಿ 1 ಲ.ರೂ.ಗಳು ಹಾಗೂ ಇತರ ಸೌಲಭ್ಯಗಳಿಗಾಗಿ 1 ಲ.ರೂ.ಗಳ ನೆರವನ್ನು ಆಯುಷ್ ಇಲಾಖೆಗೆ ನೀಡುತ್ತಿದೆ. ಗ್ರಾಮಗಳನ್ನು ದತ್ತು ತೆಗೆದುಕೊಂಡು ಆಯುರ್ವೇದದ ಬಗ್ಗೆ ಪ್ರಚಾರವನ್ನೂ ಮಾಡಲಾಗುತ್ತಿದೆ. ಚಿಕಿತ್ಸಾಲಯದ ಆವರಣದಲ್ಲಿ ಔಷಧೀಯ ಗಿಡಗಳನ್ನು ನೆಡಲೂ ಉತ್ತೇಜನ ನೀಡಲಾಗುತ್ತಿದೆ.
ಪ್ರಾಯೋಗಿಕ ಅನುಷ್ಠಾನ
ಜಿಲ್ಲೆಯ ಅಮಾಸೆಬೈಲು, ಕರ್ಜೆ, ಕುರ್ಕಾಲು, ಕಾಲೊ¤àಡಿನಲ್ಲಿ ಆಯುಷ್ ಕ್ಷೇಮ ಕೇಂದ್ರವನ್ನು ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗಿದೆ. ತರಬೇತಿ ದಾರರು ಹಾಗೂ ಯೋಗ ಟೀಚರ್ ಈ ಕೇಂದ್ರದಲ್ಲಿದ್ದಾರೆ. ಆದರೆ “ಡಿ’ ಗ್ರೂಪ್ ನೌಕರರು ಯಾವ ಕೇಂದ್ರದಲ್ಲಿಯೂ ಇಲ್ಲ. ಇದಕ್ಕಾಗಿ ನ್ಯಾಶನಲ್ ಆಯುರ್ವೇದಿಕ್ ಮೆಡಿಸಿನ್ ಮಿಷನ್ ಮೂಲಕ ತಾತ್ಕಾಲಿಕ ನೆಲೆಯಲ್ಲಿ ಸಿಬಂದಿಯನ್ನು ನೇಮಕ ಮಾಡಲಾಗುತ್ತಿದೆ ಎಂದು ಆಯುಷ್ ಅಧಿಕಾರಿಗಳು ತಿಳಿಸಿದ್ದಾರೆ.
ಆಯುರ್ವೇದ ಜಾಗೃತಿ
ಕೇಂದ್ರ ಆಯುಷ್ ಇಲಾಖೆಯ ಸೂಚನೆ ಹಾಗೂ ಮಾರ್ಗದರ್ಶನದಂತೆ ಜಿಲ್ಲೆಯಲ್ಲಿ ಆಯುರ್ವೇದ ಔಷಧಗಳ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಕೇಂದ್ರಗಳ ಮೂಲಕ ಜಿಲ್ಲೆಯ 4 ಕಡೆಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗಿದೆ. ಅಲ್ಲದೆ 5 ಕಡೆಗಳಲ್ಲಿ ಆಯುಷ್ ಕೇಂದ್ರ ನಿರ್ಮಾಣಕ್ಕೆ ಪ್ರಸ್ತಾವನೆಯನ್ನೂ ಕಳುಹಿಸಲಾಗಿದೆ.
-ಡಾ| ಸತೀಶ್, ಜಿಲ್ಲಾ ಆಯುಷ್ ಅಧಿಕಾರಿ
– ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.