ಕಾಪು: ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ


Team Udayavani, Aug 8, 2019, 6:55 AM IST

go-rakshane

ಕಾಪು: ಕೇರಳದ ವಯನಾಡ್‌ನಿಂದ ಕಾಪುವಿಗೆ ಮೂರು ಲಾರಿಗಳಲ್ಲಿ ಅಕ್ರಮವಾಗಿ ಮತ್ತು ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿದ್ದ 48ಕ್ಕೂ ಹೆಚ್ಚು ಗೋವುಗಳನ್ನು ರಾ. ಹೆ. 66ರ ಪೊಲಿಪು ಜಂಕ್ಷನ್‌ ಬಳಿ ಬುಧ ವಾರ ಬೆಳಗ್ಗೆ ಕಾಪು ಪೊಲೀಸರು ರಕ್ಷಿಸಿ, ಮೂವರನ್ನು ಬಂಧಿಸಿದ್ದಾರೆ.

ಲಾರಿಯಲ್ಲಿ ದನ ಕರುಗಳನ್ನು ಹಿಂಸಾತ್ಮಕವಾಗಿ ಕಟ್ಟಲಾಗಿತ್ತು ಹಾಗೂ ಮಳೆ ನೀರಿನಿಂದ ರಕ್ಷಣೆ ಪಡೆಯಲು ಮೇಲ್ಛಾವಣಿಯ ವ್ಯವಸ್ಥೆಯೂ ಇರಲಿಲ್ಲ. ದನಕರುಗಳನ್ನು ಬಂಟಕಲ್ಲು ಸಮೀಪದ ಕುರ್ಕಾಲು ಅರಸೀಕಟ್ಟೆಯಲ್ಲಿ ನಿರ್ಮಾಣ ಗೊಂಡಿರುವ ಧರ್ಮ ಫೌಂಡೇಶನ್‌ ಗೋ ರೀಸರ್ಚ್‌ ಸೆಂಟರ್‌ಗೆ ಸಾಕುವ ಉದ್ದೇಶಕ್ಕಾಗಿ ತರಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಲಾರಿ ಚಾಲಕರಾದ ಕೋಯಿಕ್ಕೋಡ್‌ ನಿವಾಸಿಗಳಾದ ರಶೀದ್‌ (40), ಜಮಿÏೕರ್‌ (31) ಹಾಗೂ ಶಮೀರ್‌ ಎಂ.ಪಿ. (42) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಗೋ ಸಾಗಾಟಕ್ಕೆ ಬಳಸಲಾಗಿದ್ದ 3 ಲಾರಿ ಹಾಗೂ 1 ಕಾರು ಸಹಿತ ಸುಮಾರು 28.11 ಲ.ರೂ. ಮೌಲ್ಯದ ಸೊತ್ತು ಗಳನ್ನು ವಶಕ್ಕೆ ಪಡೆಯಲಾಗಿದೆ.

ಅಕ್ರಮ ಹಾಗೂ ಹಿಂಸಾತ್ಮಕವಾಗಿ ಗೋವುಗಳನ್ನು ಸಾಗಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಕುರ್ಕಾಲು ಅರಸೀಕಟ್ಟೆ ಧರ್ಮ ಫೌಂಡೇಷನ್‌ ಗೋ ರೀಸರ್ಚ್‌ ಸೆಂಟರ್‌ ಮುಖ್ಯಸ್ಥ ಗಿರೀಶ್‌ ಜಿ. ಅವರ ವಿರುದ್ಧ ಪ್ರಾಣಿ ಕ್ರೌರ್ಯ ತಡೆ ಕಾಯ್ದೆ ಮತ್ತು ಮೋಟಾರು ವಾಹನ ಕಾಯ್ದೆ ಉಲ್ಲಂಘನೆಯಡಿ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ

ಕೇರಳ ನೋಂದಣಿಯ ಮೂರು ಲಾರಿಗಳಲ್ಲಿ ದನ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದುಕೊಂಡ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮಂಗಳೂರಿನಿಂದ ಬೆನ್ನಟ್ಟಿಕೊಂಡು ಬಂದಿದ್ದು, ಅವರು ನೀಡಿದ್ದ ಮಾಹಿತಿಯಂತೆ ಕಾಪು ಪೊಲೀಸರು ವಾಹನಗಳನ್ನು ತಡೆದರು. ಪರಿಶೀಲಿಸಿದಾಗ ಲಾರಿಗಳಲ್ಲಿ ಕ್ರಮವಾಗಿ 15, 16 ಮತ್ತು 17 ಗೋವು ಗಳನ್ನು ಹಿಂಸಾತ್ಮಕವಾಗಿ ತುಂಬಿಸಿದ್ದುದು ಪತ್ತೆಯಾಯಿತು. ಈ ಪೈಕಿ ಎರಡು ಹಸುಗಳು ಅಸ್ವಸ್ಥವಾಗಿವೆ. ಲಾರಿಗೆ ಬೆಂಗಾವಲಾಗಿ ಕಾರೊಂದು ಬರುತ್ತಿತ್ತು.

ಗೋಶಾಲೆಗೆ ರವಾನೆ

ರಕ್ಷಿಸಲಾಗಿರುವ 48 ಗೋವುಗಳನ್ನು ಕಾಪು ಸಿಐ ಮಹೇಶ್‌ ಪ್ರಸಾದ್‌ ಅವರ ಸೂಚನೆಯಂತೆ ಎಸ್‌ಐ ಜಯ ಕೆ. ನೇತೃತ್ವದಲ್ಲಿ ಪೊಲೀಸರು ಪುರಸಭಾ ಸದಸ್ಯರಾದ ಅರುಣ್‌ ಶೆಟ್ಟಿ ಪಾದೂರು, ಅನಿಲ್ ಕುಮಾರ್‌, ಕಿರಣ್‌ ಆಳ್ವ, ಸಂಘಟನೆಯ ಮುಖಂಡ ಸುಧೀರ್‌ ಪೂಜಾರಿ ಹಾಗೂ ಕಾರ್ಯ ಕರ್ತರ ನೆರವಿನೊಂದಿಗೆ ಬಂಟ ಕಲ್ಲು ಸಮೀಪದ ಧರ್ಮ ಫೌಂಡೇ ಷನ್‌ನ ಗೋ ಶಾಲೆಯ ಪ್ರದೇಶಕ್ಕೆ ಸ್ಥಳಾಂ ತರಿಸಲಾಗಿದೆ. ಅವುಗಳ ಭದ್ರತೆಗಾಗಿ ಇಬ್ಬರು ಎಎಸ್‌ಐಗಳು ಮತ್ತು ನಾಲ್ವರು ಪೊಲೀಸರನ್ನು ನಿಯೋಜಿಸಲಾಗಿದೆ. ಅಕ್ರಮ ಗೋ ಸಾಗಾಟ ಸಹಿತ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನ್ಯಾಯಾಲಯದ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಷ್ಟರವರೆಗೆ ಪೊಲೀಸ್‌ ಭದ್ರತೆ ಮುಂದುವರಿಯಲಿದೆ ಎಂದು ಸಿಐ ತಿಳಿಸಿದ್ದಾರೆ.

ಕಾರ್ಕಳ ಉಪ ವಿಭಾಗದ ಪೊಲೀಸ್‌ ಉಪ ಅಧೀಕ್ಷಕ ಕೃಷ್ಣಕಾಂತ್‌ ಸ್ಥಳಕ್ಕೆ ಭೇಟಿ ನೀಡಿದ್ದು, ಪಶು ಇಲಾಖೆಯ ಅಧಿಕಾರಿಗಳು ಗೋವುಗಳ ಆರೋಗ್ಯ ತಪಾಸಣೆ ಮಾಡಿದ್ದಾರೆ.

ಟಾಪ್ ನ್ಯೂಸ್

gold

D.K.Suresh ಹೆಸರಲ್ಲಿ 14 ಕೆಜಿ ಚಿನ್ನ ವಂಚನೆ

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

5

Udupi: ತಂಡಗಳ ನಡುವೆ ಹಲ್ಲೆ; ಪ್ರಕರಣ ದಾಖಲು

4

Malpe: ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

14

Padubidri: ವೃದ್ಧ ದಂಪತಿಗೆ ಸುರಕ್ಷಿತ ಕಾಲು ಸಂಕದ ಭರವಸೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

gold

D.K.Suresh ಹೆಸರಲ್ಲಿ 14 ಕೆಜಿ ಚಿನ್ನ ವಂಚನೆ

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

1-ravi

Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್‌ ಭಟ್‌

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.