ಕ್ವಾರಂಟೈನ್ ಉಲ್ಲಂಘಿಸಿದರೆ ಸಜೆ
Team Udayavani, May 22, 2020, 8:35 AM IST
ಹೆಬ್ರಿ: ವಸತಿಗೃಹ ಪ್ರದೇಶ ಸೀಲ್‌ಡೌನ್ ಮಾಡಲಾಗಿದೆ.
ಉಡುಪಿ: ಕ್ವಾರಂಟೈನ್‌ನಲ್ಲಿ ಇರುವ ಮಂದಿ ಸಂಬಂಧಿಸಿದ ನಿಯಮಗಳನ್ನು ಉಲ್ಲಂ ಸಿದರೆ ಅಂಥವರನ್ನು ಬಂಧಿಸಿ 1 ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಯಲ್ಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ಎಚ್ಚರಿಸಿದ್ದಾರೆ. ಕ್ವಾರಂಟೈನ್ ಕೇಂದ್ರದ ಆವರಣದ ಹೊರಗೆ ಬಂದು ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡುವುದು, ತಾವು ಕ್ವಾರಂಟೈನ್‌ನಲ್ಲಿಲ್ಲ ಎಂಬಂತೆ ಹೊರಗೆ ಬಂದು ದೂರವಾಣಿಯಲ್ಲಿ ಮಾತನಾಡುತ್ತ ಪೋಸ್ ಕೊಡುವುದು, ಮನೆಗ ಳಿಂದ ಊಟ ತರಿಸಿಕೊಳ್ಳುವುದೇ ಮೊದಲಾದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಅವರನ್ನು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿ ದಾಗ ಈ ಉತ್ತರ ನೀಡಿದ್ದಾರೆ.
ಕಂಡಲ್ಲಿ ದೂರು ನೀಡಿ
ಪೊಲೀಸ್ ಇಲಾಖೆಗೆ ಕ್ವಾರಂಟೈನ್ ಕೇಂದ್ರಗಳ ಭದ್ರತೆಯ ಜವಾಬ್ದಾರಿ ನೀಡಲಾಗಿದೆ. ಇಲಾಖೆಯಿಂದ ಗೃಹರಕ್ಷಕ ದಳದ ಸಿಬಂದಿಯನ್ನು ನಿಯೋಜಿಸಲಾಗಿದೆ. ಒಂದು ವೇಳೆ ಕ್ವಾರಂಟೈನ್ ನಿಯಮ ಗಳ ಉಲ್ಲಂಘನೆ ಗಮನಕ್ಕೆ ಬಂದರೆ ಸಮೀಪದ ಪೊಲೀಸ್ ಠಾಣೆ ಯನ್ನು ಸಂಪರ್ಕಿಸಿ ದೂರು ಸಲ್ಲಿಸಬಹುದು ಎಂದು ಡಾ| ಸೂಡ ಅವರು ಹೇಳಿದರು.
ಹೆಬ್ರಿ: ವಸತಿಗೃಹ ಸೀಲ್‌ಡೌನ್
ಹೆಬ್ರಿ: ಹೆಬ್ರಿ-ಕುಚ್ಚಾರು ರಸ್ತೆಯ ವಸತಿಗೃಹದಲ್ಲಿ ಕ್ವಾರಂಟೈನ್‌ನಲ್ಲಿದ್ದ ಮುಂಬಯಿಯಿಂದ ಬಂದವರಲ್ಲಿ ಇಬ್ಬರಿಗೆ ಕೊರೊನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ವಸತಿಗೃಹದ ಸುತ್ತ ಸೀಲ್‌ಡೌನ್ ಮಾಡಲಾಗಿದೆ. ಅಲ್ಲಿರುವ ಇತರರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಬಾಧಿತರು ಇದ್ದ ಕೊಠಡಿಗಳನ್ನು ರಾಸಾಯನಿಕ ಬಳಸಿ ಶುದ್ಧೀಕರಿಸಲಾಗಿದೆ. ಸ್ಥಳೀಯರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ತಹಶೀಲ್ದಾರ್ ಮಹೇಶ್ಚಂದ್ರ ತಿಳಿಸಿದ್ದಾರೆ.
ವಸತಿಗೃಹದ ಉಸ್ತುವಾರಿ ವಿರುದ್ಧ ದೂರು
ಸೀಲ್‌ಡೌನ್ ಆಗಿರುವ ವಸತಿಗೃಹದಲ್ಲಿ ಕ್ವಾರಂಟೈನ್‌ನಲ್ಲಿರುವವರ ಮೇಲ್ವಿಚಾರಣೆ ಮಾಡುತ್ತಿದ್ದ ಇಬ್ಬರು ನಿಯಮ ಉಲ್ಲಂಘನೆ ಮಾಡಿ ಹೊರಗಡೆ ತಿರುಗಾಡುತ್ತಿದ್ದರು ಎಂದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ವಸತಿಗೃಹದ ಉಸ್ತುವಾರಿ ವಹಿಸಿಕೊಂಡವರು ಕೂಡ ಅದೇ ಸ್ಥಳದಲ್ಲಿ ಕ್ವಾರಂಟೈನ್‌ನಲ್ಲಿರಬೇಕಿತ್ತು. ಆದರೆ ಅವರು ನಾಡಾ³ಲು ಗ್ರಾಮದಲ್ಲಿರುವ ತಮ್ಮ ಮನೆಗೆ ಹೋಗಿದ್ದೂ ಅಲ್ಲದೆ ಪರಿಸರದಲ್ಲಿ ಅಡ್ಡಾಡುತ್ತಿದ್ದಾರೆ
ಎಂದು ದೂರು ಬಂದಿತ್ತು. ಅವರನ್ನು ಕ್ವಾರಂಟೈನ್ ಮಾಡುವಂತೆ ಆರೋಗ್ಯಾಧಿಕಾರಿಗಳು ಸೂಚಿಸಿರುವ ಹಿನ್ನೆಲೆಯಲ್ಲಿ ರಾತ್ರಿ ಪೊಲೀಸ್ ಹಾಗೂ ದೂರುದಾರರು ಸೀತಾನದಿಗೆ ಹೋಗಿ ಪರಿಶೀಲಿಸಿದಾಗ ಆರೋಪಿತರು ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಸುತ್ತಾಡುತ್ತಿರುವುದು ದೃಢವಾಗಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.