ಪರ್ಕಳದಲ್ಲಿ ಮನೆಯೊಳಗೆ ನುಗ್ಗಿದ ಮಳೆ ನೀರು
Team Udayavani, May 16, 2020, 5:52 AM IST
ಉಡುಪಿ: ಶುಕ್ರವಾರ ಸಂಜೆ ಸುರಿದ ಭಾರೀ ಮಳೆಗೆ ಪರ್ಕಳ ಶಾಲಾ ಬಳಿಯ ಹಲವಾರು ಮನೆಗಳೊಳಗೆ ಮಳೆಯ ನೀರು ನುಗ್ಗಿ ನಿವಾಸಿಗಳೆಲ್ಲರೂ ತೊಂದರೆ ಅನುಭವಿಸಿದರು.
ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 169ಎ ಚತುಷ್ಪಥ ಕಾಮಗಾರಿ ಕಳೆದೆರಡು ವರುಷಗಳಿಂದ ನಡೆಯುತ್ತಿದ್ದು, ರಸ್ತೆಯನ್ನು ಹಿಂದಿನ ನೆಲಮಟ್ಟದಿಂದ ನಾಲ್ಕೆçದು ಅಡಿಗಳಷ್ಟು ಎತ್ತರಿಸಲಾಗಿದೆ. ಕಾಮಗಾರಿ ಅಪೂರ್ಣವಾಗಿದೆ. ರಸ್ತೆಯ ಕೆಲಸ ಬಹುತೇಕ ಪೂರ್ಣಗೊಂಡಿದ್ದರೂ, ನೀರು ಹರಿಯುವ ಚರಂಡಿಯ ಕೆಲಸ ಇನ್ನೂ ಆರಂಭವಾಗದೆ ಇದ್ದ ಕಾರಣ ಮಳೆ ನೀರು ಹರಿಯಲು ದಾರಿಯಿಲ್ಲದೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು. ಮನೆಯೊಳಗಿನ ಪಾತ್ರೆ ಪಗಡಿಗಳು ನೀರಿನಲ್ಲಿ ತೇಲಿದವು.
ಈ ಸಮಸ್ಯೆಯನ್ನು ಬಹು ಹಿಂದೆಯೇ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ತ್ವರಿತ ಕಾಮಗಾರಿ ನಡೆಯದೆ ನಾವು ಬವಣೆ ಅನುಭವಿಸುವಂತಾಗಿದೆ. ಸದ್ಯೋಭವಿಷ್ಯದಲ್ಲಿ ಮುಂಗಾರು ಆಗಮನವಾಗಲಿದ್ದು ತುರ್ತಾಗಿ ನೀರು ಹರಿಯಲು ವ್ಯವಸ್ಥೆ ಮಾಡಿಕೊಡದಿದ್ದಲ್ಲಿ, ಮಳೆಗಾಲದಲ್ಲಿ ಇಲ್ಲಿನ ಹಲವಾರು ಮನೆಗಳು ನೀರಿನಲ್ಲಿ ಮುಳುಗುವ ಮತ್ತು ಬೀಳುವ ಅಪಾಯವಿದೆ. ಹೆದ್ದಾರಿ ಪ್ರಾಧಿಕಾರವು ತತ್‌ಕ್ಷಣ ಸೂಕ್ತ ವ್ಯವಸ್ಥೆಯನ್ನು ಮಾಡಬೇಕಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.