ರಾಮ ಮಂದಿರಕ್ಕೆ ದಿಲ್ಲಿಯಿಂದ ಹಳ್ಳಿ ವರೆಗಿನವರ ಸಹಕಾರ ಅಗತ್ಯ
Team Udayavani, Dec 21, 2020, 1:10 AM IST
ಕೊಡವೂರು ಪಾಳೆಕಟ್ಟೆಯ ದಲಿತರ ಮನೆಗಳಿಗೆ ಪೇಜಾವರ ಶ್ರೀಗಳು ಭೇಟಿ ನೀಡಿದ ಸಂದರ್ಭ.
ಉಡುಪಿ: ಎಲ್ಲರ ಸಹಕಾರದೊಂದಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿದೆ. ನಾವು ದಿಲ್ಲಿಯ ನಾಯಕರಿಂದ ತೊಡಗಿ ಹಳ್ಳಿಯ ಜನಸಾಮಾನ್ಯರ ತನಕ ಎಲ್ಲರ ಸಹಕಾರ ಕೋರುತ್ತಿದ್ದೇವೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ತಿಳಿಸಿದರು.
ಕೊಡವೂರು ಪಾಳೆಕಟ್ಟೆಯ ಮೂಕಾಂಬಿಕಾ ಭಜನ ಮಂದಿರ, ಬಬ್ಬುಸ್ವಾಮಿ ದೈವಸ್ಥಾನಕ್ಕೆ ರವಿವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ಶ್ರೀಗಳು ಬಳಿಕ ದಲಿತರ ಮನೆಗಳಲ್ಲಿ ರಾಮಮಂದಿರ ಕುರಿತು ನಿಧಿ ಸಂಗ್ರಹ ಅಭಿಯಾನದಲ್ಲಿ ಸಾಂಕೇತಿಕವಾಗಿ ರಾಮದೀಪವನ್ನು ಬೆಳಗಿಸಿ ಮಾತನಾಡಿದರು.
ರಾಮ ಮಂತ್ರೋಪದೇಶ ನಿಧಿ ಸಂಗ್ರಹ, ರಾಮಮಂದಿರ ನಿರ್ಮಾಣವಾಗುವ ಜತೆಗೆ ರಾಮರಾಜ್ಯ ನಿರ್ಮಾಣವಾಗಬೇಕು. ದೇಶದ ಪುನರುತ್ಥಾನವಾಗಬೇಕು. ಇದಕ್ಕಾಗಿ ರಾಮನ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಹೀಗಾಗಬೇಕಾದರೆ ನಿತ್ಯ ರಾಮನ ಸ್ಮರಣೆ ಮಾಡಬೇಕು ಎಂದ ಸ್ವಾಮೀಜಿ “ಹರೇರಾಮ ಹರೇರಾಮ ರಾಮ ರಾಮ ಹರೇ ಹರೇ| ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ’ ಎಂಬ ಮಂತ್ರವನ್ನು ಉಪದೇಶಿಸಿದರು.
ಅಳಿಲಿನ ಸೇವೆ ರೀತಿ…
ರಾಮನು ಸೇತುವೆ ಕಟ್ಟುವಾಗ ಅಳಿಲು ಕೂಡ ಪರಿಪೂರ್ಣವಾಗಿ ಸೇವೆ ಸಲ್ಲಿಸಿದಂತೆ ನಾವೂ ಕೂಡ 10 ರೂ.ಗಳಿಂದ
ಹಿಡಿದು 10,000 ರೂ. ತನಕ ಯಥಾಶಕ್ತಿ ದೇಣಿಗೆ ನೀಡಬೇಕು. ಯಾರೋ ಒಬ್ಬರು ಧನಿಕರು ಮಂದಿರ ನಿರ್ಮಿಸಿದರೆ ರಾಮ ಮಂದಿರವಾಗುವುದಿಲ್ಲ. ರಾಮನಾದರೋ ಒಬ್ಬ ಪ್ರಭು. ಈಗ ಪ್ರಜೆಗಳೆಲ್ಲ ಪ್ರಭುಗಳು. ಎಲ್ಲ ಪ್ರಜೆಗಳ ಸಹಕಾರದಲ್ಲಿ ಮಂದಿರ ನಿರ್ಮಾಣವಾಗಬೇಕು ಎಂದರು.
ಜ. 15ರಿಂದ ನಿಧಿ ಸಂಗ್ರಹ ಅಭಿಯಾನ ನಡೆಯಲಿದ್ದು ವಿಹಿಂಪ ಕಾರ್ಯಕರ್ತರು ಬಂದಾಗ ಸಹಕರಿಸಬೇಕು ಎಂದರು.
ರವಿ ಕರ್ಕೇರ ಮತ್ತು ಸದಾನಂದರ ಮನೆಯಲ್ಲಿ ದೀಪ ಬೆಳಗಿಸಲಾಯಿತು. ನಗರಸಭಾ ಸದಸ್ಯ ವಿಜಯ ಕೊಡವೂರು, ವಿಹಿಂಪ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಸುಂದರ ಮೇಸ್ತ್ರಿ, ಜಯ ಸಾಲ್ಯಾನ್, ಮಾಧವ ಕರ್ಕೇರ, ಜೀವನ್ ಪಾಳೆಕಟ್ಟೆ, ವಾಸುದೇವ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.