ರಾಮಾಯಣ ಭಾರತೀಯ ಆತ್ಮದ ಕನ್ನಡಿ ಇದ್ದಂತೆ: ನಿರುಪಮಾ ರಾವ್
Team Udayavani, Sep 28, 2021, 3:44 AM IST
ಉಡುಪಿ: ಮಹಾಕಾವ್ಯ ಪರಂಪರೆಯನ್ನು ಕುರಿತ ಸಂಶೋಧನ ಕ್ಷೇತ್ರದಲ್ಲಿ ಈ ಕೃತಿ ಮಹತ್ವದ್ದಾಗಿದೆ. ರಾಮಾಯಣವನ್ನು ಭಾರತೀಯ ಅತ್ಮದ ಕನ್ನಡಿ ಎಂದು ಬಣ್ಣಿಸಿ ಮಹಾಕಾವ್ಯದ ಮರುಕಥನಗಳು ಮತ್ತೆ ಮತ್ತೆ ರೂಪುಗೊಳ್ಳುತ್ತಿರುತ್ತವೆ ಮತ್ತು ನಾಗರಿಕತೆ ಇರುವವರೆಗೆ ರಾಮಾಯಣ ಜೀವಂತವಾಗಿ ಇರುತ್ತದೆ. ಇದಕ್ಕೆ ಪ್ರಸ್ತುತ ಕೃತಿಯ ಲೇಖನಗಳು ದೃಷ್ಟಾಂತವಾಗಿವೆ ಎಂದು ವಿದೇಶಾಂಗ ಕಾರ್ಯದರ್ಶಿ, ರಾಯಭಾರಿ ನಿರುಪಮಾ ರಾವ್ ಅಭಿಪ್ರಾಯಪಟ್ಟರು.
ಮಾಹೆ ಮಣಿಪಾಲದ ಪ್ರಸಾರಾಂಗ ಮಣಿಪಾಲ್ ಯೂನಿವರ್ಸಲ್ ಪ್ರಸ್ (ಎಂಯುಪಿ), ಡಿಎಸ್‌ಎ ಹಿಸ್ಟರ್ ಎಂಡೋ ಮೆಂಟ್‌ನ ಸಹಭಾಗಿತ್ವದಲ್ಲಿ ಬೆಂಗಳೂರು ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ದಿಲ್ಲಿ ವಿ.ವಿ. ಪ್ರಾಧ್ಯಾಪಕಿ ಪಾರುಲ್ ಪಾಂಡ್ಯ ಧರ್ ಸಂಪಾದಿಸಿದ “ದಿ ಮಲ್ಟಿವೆಲೆನ್ಸ್ ಆಫ್ ಆ್ಯನ್ ಎಪಿಕ್-ರೀಟೆ ಲ್ಲಿಂಗ್ ದಿ ರಾಮಾಯಣ ಇನ್ ಸೌತ್ ಇಂಡಿಯಾ ಆ್ಯಂಡ್ ಸೌತ್ ಈಸ್ಟ್ ಏಷ್ಯಾ’ ಕೃತಿ
ಯನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.
ರಾಮಾಯಣದ ಮಹಾಕಥನ ಮತ್ತು ಅದರ ವಿವಿಧ ಮರುಕಥನಗಳನ್ನು ಒಂದು ಮಹಾಯಾನವೆಂದು ಬಣ್ಣಿಸಿ ಈ ಪಯಣ ನಿರಂತರ ವಾಗಿರುತ್ತದೆ. ಸಂಪುಟದ ಲೇಖನಗಳು, ಭಾರತ ಉಪಖಂಡದ ದಕ್ಷಿಣ ಭಾಗ, ಆಗ್ನೇಯ ಏಷ್ಯಾದ ಮ್ಯಾನ್ಮಾರ್, ಮಲೇಷ್ಯಾ, ಥೈಲ್ಯಾಂಡ್ ಮತ್ತಿತರ ದೇಶಗಳಲ್ಲಿ ರಾಮಾಯಣ ಮಹಾಯಾನದ ಮಾರ್ಗವನ್ನು ಈ ಕೃತಿಯ ಸಂಶೋಧನ ಲೇಖನಗಳು ದಾಖಲಿಸುತ್ತವೆ ಎಂದವರು ತಿಳಿಸಿದರು.
ಇದನ್ನೂ ಓದಿ:ಮದುವೆಗೆ ಮಾಡಿದ ಸಾಲ ತೀರಿಸಲಾಗಲಿಲ್ಲ ಎಂದು ಮದುವೆಯಾದ ಐದೇ ತಿಂಗಳಲ್ಲಿ ವ್ಯಕ್ತಿ ನೇಣಿಗೆ ಶರಣು
ಪ್ರಸ್ತುತ ಕೃತಿಯಲ್ಲಿ ರಾಮಾಯಣವನ್ನು ಬಹುಮುಖೀ ನೆಲೆಯಲ್ಲಿ ಪರಿಶೀಲಿಸಲಾಗಿದೆ. ಇತಿಹಾಸ, ಸಾಹಿತ್ಯ, ಕಲೆ, ಪ್ರದರ್ಶನ ಕಲೆ, ಶಿಲ್ಪ ಕಲೆಗಳೂ ಸೇರಿದಂತೆ ಹಲವು ಪ್ರಕಾರಗಳಲ್ಲಿ ಆದಿಮ ಕಾಲದಿಂದ ತೊಡಗಿ ಆಧುನಿಕತೆಯ ವರೆಗೆ ರಾಮಾಯಣ ಸಾಗಿಬಂದ ಹೆಜ್ಜೆ ಗುರುತುಗಳನ್ನು ದಾಖಲಿಸಲಾಗಿದೆ. ಎಂದು ಸಂಪಾದಕಿ ಪಾರುಲ್ ಪಾಂಡ್ಯ ಧರ್ ಹೇಳಿದರು.
ಗ್ರಂಥವು ದಕ್ಷಿಣ ಏಷ್ಯಾ ಮತ್ತು ಅಗ್ನೇಯ ಏಷ್ಯಾ ಸಂಬಂಧವನ್ನು ಬೆಸೆಯುವ ಪ್ರಯತ್ನ ಮಾಡುತ್ತದೆ. ರಾಮಾಯಣ ಕಾವ್ಯವು ಗತಕಾಲದ ಕಥನವಲ್ಲ, ಅದು ಭವಿಷ್ಯದಲ್ಲಿ ನಿರ್ಮಾಣಗೊಂಡ ಮಹಾಕಥನ ಎಂದು ಜೆಎನ್‌ಯು ಪ್ರಾಧ್ಯಾಪಕ ಎಚ್.ಎಸ್. ಶಿವಪ್ರಕಾಶ್ ತಿಳಿಸಿದರು. ದಕ್ಷಿಣ ಭಾರತ ಮತ್ತು ಆಗ್ನೇಯ ಏಷ್ಯಾದ ಭಾಗಗಳನ್ನು ಪೌರಾಣಿಕ ಕಾಲದಲ್ಲಿ ಸುವರ್ಣ ಭೂಮಿ, ಸುವರ್ಣ ದ್ವೀಪಗಳೆಂದು ಬಣ್ಣಿಸಲಾಗುತ್ತಿದ್ದು, ಆ ಭಾಗಗಳ ಐತಿಹಾಸಿಕ ಸಂಬಂಧವನ್ನು ರಾಮಾಯಣ ಮಹಾಕಾವ್ಯವು ಎತ್ತಿ ಹಿಡಿಯುತ್ತದೆ ಎಂದು ಹೈದರಾಬಾದ್ ವಿ.ವಿ. ಇತಿಹಾಸ ಪ್ರಾಧ್ಯಾಪಕಿ ಸುಚಂದ್ರಾ ಘೋಷ್ ಹೇಳಿದರು. ಡಿಎಸ್‌ಎ ಹಿಸ್ಟರಿ ಎಂಡೋಮೆಂಟ್‌ನ ಸಂಚಾಲಕ ಡಿ.ಎ. ಪ್ರಸನ್ನ ಪ್ರಾಸ್ತಾವಿಕ ಮಾತನಾಡಿದರು. ಎಂಯುಪಿ ಪ್ರಧಾನ ಸಂಪಾದಕಿ ನೀತಾ ಇನಾಂದಾರ್ ಸ್ವಾಗತಿಸಿದರು. ಕೊರಿಯೋಗ್ರಾಫರ್, ನೃತ್ಯ ವಿದುಷಿ ಮಧು ನಟರಾಜ್ ಅವರಿಂದ ಪ್ರದರ್ಶನ ಕಲೆಗಳಲ್ಲಿ ರಾಮಾಯಣದ ಪ್ರಸ್ತುತಿ ಕುರಿತು ಚಿತ್ರ ಪ್ರದರ್ಶನ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ನ. 14-20: ರಾಜ್ಯಮಟ್ಟದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ
Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ
Yakshadhruva Patla Foundation Trust: ನ.14ರಂದು ಉಡುಪಿ ಘಟಕದ ಮಹಿಳಾ ವಿಭಾಗ ಆರಂಭ
Parashurama Murthy Case: ಉಳಿದ ಆರೋಪಿಗಳನ್ನು ಬಂಧಿಸಲು ಆಗ್ರಹ
Udupi: ನಗರದಲ್ಲಿ ಫುಟ್‌ಪಾತ್‌ಗಳ ಅತಿಕ್ರಮಣ; ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್
MUST WATCH
ಹೊಸ ಸೇರ್ಪಡೆ
Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್ʼ ಚಿತ್ರದ ಟೈಟಲ್ ಬದಲಾವಣೆ
ED; ಅಕ್ರಮವಾಗಿ ಒಳನುಸುಳಿದ ಇಬ್ಬರು ಬಾಂಗ್ಲಾ ಪ್ರಜೆಗಳು ಸೇರಿ ಮೂವರ ಬಂಧನ
John Michael D’Cunh ಟೀಕೆ;ಜೋಶಿ ತತ್ ಕ್ಷಣ ರಾಜೀನಾಮೆ ನೀಡಲಿ: ಎಚ್.ಕೆ. ಪಾಟೀಲ್
Udupi: ನ. 14-20: ರಾಜ್ಯಮಟ್ಟದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ
Bhairathi Ranagal: ಭೈರತಿಗೆ ಸ್ಯಾಂಡಲ್‌ವುಡ್ ಆರತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.