Ration: ದ.ಕ., ಉಡುಪಿಯಲ್ಲಿ 1.5 ಕೋ.ರೂ.ಗೂ ಅಧಿಕ ಬಾಕಿ

ಪಡಿತರ ವಿತರಕರ ಕಮಿಷನ್‌ ಖೋತಾ

Team Udayavani, Aug 29, 2023, 11:30 AM IST

10-karkala

ಕಾರ್ಕಳ: ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆಯಲ್ಲಿ 10 ಕೆಜಿ ಅಕ್ಕಿ ಘೋಷಣೆ ಮಾಡಿದಾಗ ಹೆಚ್ಚಿನ ಕಮಿಷನ್‌ ದೊರಕಬಹುದು ಎಂಬ ನಿರೀಕ್ಷೆ ವಿತರಕರದ್ದಾಗಿತ್ತು. ಆದರೆ ಸರಕಾರ ಏಕಾಏಕಿ ಅಕ್ಕಿಯ ಪ್ರಮಾಣವನ್ನೇ ಕಡಿತಗೊಳಿಸಿದ ಕಾರಣ ಅವರ ಕಮಿಷನ್‌ಗೂ ಹೊಡೆತ ಬಿದ್ದಿದೆ. ಜತೆಗೆ ಹಿಂದಿನ ತಿಂಗಳುಗಳ ಕಮಿಷನ್‌ ಪಾವತಿಯಾಗದೆ ಜೀವನ ಕಷ್ಟ ಎನ್ನುವ ಪರಿಸ್ಥಿತಿ ಅವರದ್ದಾಗಿದೆ.

ದ.ಕ. ಜಿಲ್ಲೆಯಲ್ಲಿ 900 ಮತ್ತು ಉಡುಪಿಯಲ್ಲಿ 292 ಮಂದಿ ಒಳಗೊಂಡಂತೆ ರಾಜ್ಯದಲ್ಲಿ 20,295 ಪಡಿತರ ವಿತರಕರಿದ್ದಾರೆ. ಒಬೊಬ್ಬರಿಗೆ ಸರಾಸರಿ 15 ಸಾವಿರ ರೂ.ಗಳಂತೆ ಉಭಯ ಜಿಲ್ಲೆಗಳಲ್ಲಿ ಒಟ್ಟು ಒಂದೂ ಮುಕ್ಕಾಲು ಕೋಟಿ ರೂಪಾಯಿಗೂ ಅಧಿಕ, ರಾಜ್ಯದಲ್ಲಿ ಸುಮಾರು 31 ಕೋ.ರೂ. ಬಾಕಿ ಇದೆ. ಎಲ್ಲ ಮಾದರಿಯ ಪಡಿತರ ಕಾರ್ಡ್‌ದಾರರಿಗೆ ಪಡಿತರ ಒದಗಿಸುವ ಮಹತ್ವದ ಜವಾಬ್ದಾರಿ ಇವರದ್ದು. ಜನರ ಹಸಿವು ನೀಗಿಸುವಲ್ಲಿ ಸಹಕರಿಸುವ ವಿತರಕರಿಗೆ ಸಲ್ಲಬೇಕಾದ ಕಮಿಷನ್‌ ಹಣವನ್ನು ಕಾಲಕಾಲಕ್ಕೆ ನೀಡುವ ವಿಚಾರದಲ್ಲಿ ಸರಕಾರ ಆಸಕ್ತಿ ತೋರಿದಂತಿಲ್ಲ.

ವಿತರಣೆಯಲ್ಲೂ ವ್ಯತ್ಯಾಸ

ಜಿಲ್ಲಾಧಿಕಾರಿ ಕಚೇರಿಯ ಮೂಲಕ ಈ ಮೊತ್ತ ಪಾವತಿಯಾಗುವುದು ಕ್ರಮ. ಆದರೆ ಸರಕಾರದಿಂದ ನಿಯಮಿತವಾಗಿ ಅನುದಾನ ಬಾರದ ಕಾರಣ ಸಕಾಲಕ್ಕೆ ಕಮಿಷನ್‌ ಸಿಗುತ್ತಿಲ್ಲ. ಪಾವತಿಯಲ್ಲಿ ಜಿಲ್ಲಾವಾರು ವ್ಯತ್ಯಾಸವೂ ಕಂಡು ಬರುತ್ತಿದೆ. ಬೆಂಗಳೂರು ಸಹಿತ ಕೆಲವೆಡೆ ಜೂನ್‌, ಜುಲೈ ತಿಂಗಳ ಕಮಿಷನ್‌ ಬಾಕಿಯಿದ್ದರೆ, ದ.ಕ. ಮತ್ತು ಉಡುಪಿಯಲ್ಲಿ ಎಪ್ರಿಲ್‌ನಿಂದ ಆಗಸ್ಟ್‌ ತನಕ ಐದು ತಿಂಗಳಿನದು ಬಾಕಿಯಿದೆ.

ಕಮಿಷನ್‌ ಮೊತ್ತವೂ ಅಲ್ಪ

25ರಿಂದ 30 ವರ್ಷಗಳಿಂದ ಜನರಿಗೆ ಪಡಿತರ ವಿತರಿಸುತ್ತಿರುವ ವಿತರಕರು ಇದ್ದಾರೆ. ಒಂದು ಕ್ವಿಂಟಾಲ್‌ ದವಸ ವಿತರಣೆಗೆ 124 ರೂ. ಕಮಿಷನ್‌ ಮಾತ್ರ ಲಭಿಸುತ್ತದೆ. ಈ ಮೊತ್ತದಲ್ಲಿ ನಾವು ಎಲ್ಲ ಖರ್ಚುಗಳನ್ನು ನಿಭಾಯಿಸಿಕೊಂಡು ಜೀವನ ನಡೆಸುವುದು ಕಷ್ಟವಾಗಿದೆ. ಕಮಿಷನ್‌ ಅನ್ನು ಒಂದು ಕ್ವಿಂಟಾಲಿಗೆ 250 ರೂ.ಗಳಿಗೆ ಹೆಚ್ಚಿಸಬೇಕು ಎಂಬುದು ವಿತರಕರ ಆಗ್ರಹ.

ಕಾರ್ಡ್‌ಗೆ 10 ರೂ. ಭರವಸೆಯೂ ಠುಸ್‌

3 ವರ್ಷಗಳ ಹಿಂದೆ ಬೆರಳಚ್ಚು ನೀಡಿ ಪಡಿತರ ಕಾರ್ಡ್‌ನ ಫ‌ಲಾನುಭವಿಗಳನ್ನು ದೃಢೀಕರಿಸಿಕೊಳ್ಳಬೇಕಿತ್ತು. ಆಗ ಒಂದು ಕಾರ್ಡ್‌ಗೆ 10 ರೂ.ಗಳಂತೆ ಪಾವತಿಸುವುದಾಗಿ ವಿತರಕರಿಗೆ ಭರವಸೆ ನೀಡಲಾಗಿತ್ತು. ಆದರೆ ಆ ಮೊತ್ತವೂ ವಿತರಕರ ಖಾತೆಗೆ ಜಮೆಯಾಗಿಲ್ಲ.

ದಾಸ್ತಾನು ಮಾಹಿತಿಯೂ ಸಿಗುತ್ತಿಲ್ಲ

ಆನ್‌ಲೈನ್‌ ಆಧಾರಿತವಾಗಿ ದಾಖಲೆಗಳ ಮೂಲಕ ಪಡಿತರ ಸಾಮಗ್ರಿ ವಿತರಣೆಯಾಗುತ್ತಿದೆ. ಕಳೆದೊಂದು ತಿಂಗಳಿನಿಂದ ಸಮರ್ಪಕವಾಗಿ ಪೋರ್ಟಲ್‌ ತೆರೆದುಕೊಳ್ಳದ ಕಾರಣ, ಆಹಾರ ದಾಸ್ತಾನಿನ ಅಂಕಿ-ಅಂಶ ಕೂಡ ಸಮರ್ಪಕವಾಗಿ ಅರಿವಿಗೆ ಬರುತ್ತಿಲ್ಲ. ಸಾಮಗ್ರಿ ವಿತರಣೆಯಾಗಿದ್ದರೂ ಆನ್‌ಲೈನ್‌ಲ್ಲಿ ದಾಸ್ತಾನು ಇದೆ ಎಂಬ ಅಂಕಿ – ಅಂಶ ತೋರಿಸುತ್ತಿರುವುದು ವಿತರಕರಿಗೆ ಇನ್ನೊಂದು ತಲೆನೋವಾಗಿದೆ. ಸರಬರಾಜಿನಲ್ಲೂ ವ್ಯತ್ಯಾಸ ಆಗುತ್ತಿರುವುದು ಮತ್ತೂಂದು ಸಮಸ್ಯೆ.

ಸರಕಾರ ಮೇ ತನಕದ ಕಮಿಷನ್‌ ಬಿಡುಗಡೆಗೊಳಿಸಿದೆ. ಅನಂತರದ ಎರಡು ತಿಂಗಳಿನದ್ದು ಬಾಕಿಯಿದೆ. ಕೆಲವು ಜಿಲ್ಲೆಗಳಲ್ಲಿ ಹಿಂದಿನ ಕಮಿಷನ್‌ ಸಿಗದೇ ಇದ್ದಲ್ಲಿ ಅದಕ್ಕೆ ಸ್ಥಳೀಯವಾಗಿ ಆಗಿರುವ ಸಮಸ್ಯೆ ಕಾರಣವಾಗಿರಬಹುದು. ಸೆಪ್ಟಂಬರ್‌ ಬಳಿಕ 10 ಕೆಜಿ ಅಕ್ಕಿ ವಿತರಿಸುವುದಾಗಿ ಸರಕಾರ ಭರವಸೆ ನೀಡಿದೆ. ಅಕ್ಕಿ ನೀಡಲು ಸಾಧ್ಯವಾಗದಿದ್ದಲ್ಲಿ ಇತರ ಧಾನ್ಯಗಳನ್ನು ನೀಡುವಂತೆ ಮನವೊಲಿಸಿದ್ದೇವೆ. ಕಮಿಷನ್‌ ಹೆಚ್ಚಿಸುವಂತೆಯೂ ಸರಕಾರದ ಗಮನಕ್ಕೆ ತಂದಿದ್ದೇವೆ. – ಟಿ. ಕೃಷ್ಣಪ್ಪ, ರಾಜ್ಯಾಧ್ಯಕ್ಷ ಪಡಿತರ ವಿತರಕರ ಸಂಘ, ಬೆಂಗಳೂರು

ವಿತರಕರಿಗೆ 5 ಕೆ.ಜಿ ಅಕ್ಕಿ ವಿತರಣೆಯ ಕಮಿಷನ್‌ ಕಾಲಕಾಲಕ್ಕೆ ಪಾವತಿಯಾಗುತ್ತಿದೆ. 2 ತಿಂಗಳ ಕಮಿಷನ್‌ ಬಂದಿಲ್ಲ ಎನ್ನುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ನಾನು ಇತ್ತೀಚೆಗಷ್ಟೆ ಅಧಿಕಾರ ವಹಿಸಿಕೊಂಡಿದ್ದು, ಈ ಬಗ್ಗೆ ಪರಿಶೀಲಿಸುವೆ. – ರವೀಂದ್ರ, ಉಪನಿರ್ದೇಶಕ (ಪ್ರಭಾರ), ಆಹಾರ, ಮತ್ತು ನಾಗರಿಕ ಪೂರೈಕೆ ಇಲಾಖೆ ಉಡುಪಿ

-ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.