ಸುಗಮ ಚುನಾವಣೆಗೆ ಸನ್ನದ್ಧ; ಅಚ್ಚುಕಟ್ಟಿಗೆ ಆದ್ಯತೆ

Team Udayavani, Apr 18, 2019, 6:30 AM IST

sugama-chunavane

ಉಡುಪಿ: ಗುರುವಾರ ನಡೆಯುವ ಮತದಾನ ಪ್ರಕ್ರಿಯೆ ನಡೆಸಿಕೊಡಲು ಅಧಿಕಾರಿ, ಸಿಬಂದಿ ಬುಧವಾರದಂದು ಉಡುಪಿ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್‌ ಕೇಂದ್ರವಾದ ಅಜ್ಜರಕಾಡು ಸೈಂಟ್‌ ಸಿಸಿಲೀಸ್‌ ಶಾಲೆಯಿಂದ ವಿವಿಪ್ಯಾಟ್‌ ಸಹಿತವಾದ ಮತಯಂತ್ರ ಹಾಗೂ ಇತರ ಪರಿಕರಗಳೊಂದಿಗೆ ನಿಯೋಜಿತ ಮತಗಟ್ಟೆಗಳಿಗೆ ತೆರಳಿದರು.

ಉಡುಪಿ ಜಿಲ್ಲಾಧಿಕಾರಿ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಎಸ್‌ಪಿ ನಿಶಾ ಜೇಮ್ಸ್‌, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌, ಉಡುಪಿ ವಿ.ಭಾ ಕ್ಷೇತ್ರದ ಚುನಾವಣಾಧಿಕಾರಿ ಕೆಂಪೇಗೌಡ ಅವರ ಮೇಲುಸ್ತುವಾರಿಯಲ್ಲಿ ಮಸ್ಟರಿಂಗ್‌ ಪ್ರಕ್ರಿಯೆ ಬೆಳಗ್ಗೆ ಆರಂಭಗೊಂಡಿತು. ಮಧ್ಯಾಹ್ನ 2.30ರ ವೇಳೆಗೆ ಸುಮಾರು 2,000 ಮಂದಿ ಅಧಿಕಾರಿ,ಸಿಬಂದಿ ಮತದಾನ ಕೇಂದ್ರಗಳಿಗೆ ಬಸ್‌, ಮ್ಯಾಕ್ಸಿಕ್ಯಾಬ್‌ಗಳಲ್ಲಿ ತೆರಳಿದರು.

ಅಚ್ಚುಕಟ್ಟು ವ್ಯವಸ್ಥೆ
ತಮಗೆ ನಿಯೋಜಿತವಾದ ಮತಗಟ್ಟೆಯ ಮಾಹಿತಿ ಪಡೆಯಲು ಈ ಹಿಂದೆ ಕೆಲವೊಮ್ಮೆ ಅಧಿಕಾರಿಗಳು,ಸಿಬಂದಿ ಪರದಾಡುವ ಸ್ಥಿತಿ ಇತ್ತು. ಮತಗಟ್ಟೆಗಳಿಗೆ ತೆರಳುವ ವಾಹನಗಳ ಬಗ್ಗೆಯೂ ಗೊಂದಲ ಉಂಟಾಗುತ್ತಿತ್ತು. ಆದರೆ ಈ ಬಾರಿ ಇಂತಹ ಗೊಂದಲಗಳಿಗೆ ಅವಕಾಶವಿರಲಿಲ್ಲ. ಬಸ್‌ಗಳ ರೂಟ್‌, ಮತಗಟ್ಟೆಯ ವಿವರವನ್ನೊಳಗೊಂಡ ಮಾಹಿತಿ ಫ‌ಲಕವನ್ನು ಕೂಡ ಅಳವಡಿಸಲಾಗಿತ್ತು.

ಬಸ್‌ಗಳು ಮಸ್ಟರಿಂಗ್‌ ಕೇಂದ್ರದ ಎದುರಿನ ಮೈದಾನದಲ್ಲಿ ಒಂದೇ ಕಡೆ ನಿಲುಗಡೆಯಾಗಲು ಅವಕಾಶ ಮಾಡಿಕೊಡಲಾಗಿತ್ತು. ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕೂಡ ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು. ತಹಶೀಲ್ದಾರ್‌ ಅವರು ಸ್ಥಳದಲ್ಲಿದ್ದು ನಿಗಾ ವಹಿಸಿದ್ದರು.

ಒಟ್ಟು 2,250 ಮಂದಿಗೆ ಉಪಾಹಾರ ಹಾಗೂ ಪಾಯಸ ಸಹಿತವಾದ ಊಟ ಒದಗಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿಯವರ ನೇತೃತ್ವದಲ್ಲಿ ಮೂವರು ವೈದ್ಯರು ಮತ್ತು ದಾದಿಯರನ್ನೊಳಗೊಂಡ ವೈದ್ಯಕೀಯ ತಂಡ ಅಗತ್ಯವಿದ್ದ ಸಿಬಂದಿಗೆ ಚಿಕಿತ್ಸೆ ನೀಡಿತು.

ಪ್ರತಿ ಮತಗಟ್ಟೆಗೆ 1,800 ರೂ.
ಪ್ರತಿ ಮತಗಟ್ಟೆಗೂ ಸಿಬಂದಿಗೆ ಉಪಾಹಾರ ಮತ್ತು ಊಟಕ್ಕಾಗಿ ಈಗಾಗಲೇ 1,800 ರೂ.ಗಳನ್ನು ಮತಗಟ್ಟೆ (ಶಾಲೆ) ಮುಖ್ಯೋಪಾಧ್ಯಾಯರಿಗೆ ನೀಡಲಾಗಿದೆ. ಅಲ್ಲದೆ ಪ್ರತಿ ಮತಗಟ್ಟೆಗೆ 20 ಲೀಟರ್‌ನ 2 ಕ್ಯಾನ್‌ ಕುಡಿಯುವ ನೀರು ಒದಗಿಸಲಾಗುತ್ತದೆ. ಅಗತ್ಯಬಿದ್ದರೆ ಹೆಚ್ಚುವರಿ ನೀರು ಒದಗಿಸಲಾಗುತ್ತದೆ. ಸಿಬಂದಿಗೆ ಮೆಡಿಕೆಲ್‌ ಕಿಟ್‌ನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದರು.

ಬ್ಯಾಂಡೇಜ್‌ ಹಾಕಿದರೂ ಕುಗ್ಗದ ಉತ್ಸಾಹ
ಚುನಾವಣಾ ಕರ್ತವ್ಯ ದೃಢಪತ್ರ(ಇಡಿಸಿ) ಪಡೆಯಲು ಮಸ್ಟರಿಂಗ್‌ ಕೇಂದ್ರಕ್ಕೆ ಆಗಮಿಸಿದ್ದ ಶೀರೂರಿನ ಶಾಲೆಯೊಂದರ ಶಿಕ್ಷಕ ಗಿರೀಶ್‌ ಅವರು ಇತ್ತೀಚೆಗೆ ಮನೆ ಸಮೀಪ ಬಿದ್ದು ಕೈ ಮುರಿತವಾಗಿತ್ತು. ಕೈಗೆ ಬ್ಯಾಂಡೇಜ್‌ ಹಾಕಿಕೊಂಡೇ ಚುನಾವಣಾ ಕರ್ತವ್ಯಕ್ಕಾಗಿ ಆಗಮಿಸಿದ್ದರು. “ನನಗೆ ವಿನಾಯಿತಿ ಕೇಳಿದರೆ ಕೊಡುತ್ತಾರೆ. ಆದರೆ ನಾನು ಆಸಕ್ತಿಯಿಂದ ಕರ್ತವ್ಯಕ್ಕೆ ಬಂದಿದ್ದೇನೆ. ನನ್ನಿಂದ ಆಗುವ ಕೆಲಸ ಮಾಡುತ್ತೇನೆ. ಈ ಹಿಂದೆ ಹಲವು ಚುನಾವಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೆ’ ಎಂದು ಗಿರೀಶ್‌ ಪ್ರತಿಕ್ರಿಯಿಸಿದರು.

ಟಾಪ್ ನ್ಯೂಸ್

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

School-Chikki

Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!

Rangavaibhava

Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala ಸಿಸ್ಟರ್‌ ಡೋನಾಲ್ಡಾ ಪಾಯಸ್‌ ನಿಧನ

Karkala: ಅರುಣೋದಯ ವಿಶೇಷ ಶಾಲೆ ಮುಖ್ಯಸ್ಥೆ ಸಿಸ್ಟರ್‌ ಡೋನಾಲ್ಡಾ ಪಾಯಸ್‌ ನಿಧನ

Manipal ದಾಳಿ: 15 ಬುಟ್ಟಿ ಮರಳು ವಶಕ್ಕೆ

Manipal ದಾಳಿ: 15 ಬುಟ್ಟಿ ಮರಳು ವಶಕ್ಕೆ

Udupi: ಗೀತಾರ್ಥ ಚಿಂತನೆ-87: ಎದೆಗಾರಿಕೆಗೆ ಮಾದರಿ ಮಹಿಳೆ ಕುಂತಿ

Udupi: ಗೀತಾರ್ಥ ಚಿಂತನೆ-87: ಎದೆಗಾರಿಕೆಗೆ ಮಾದರಿ ಮಹಿಳೆ ಕುಂತಿ

sand

Kaup: ಕೈಪುಂಜಾಲು; ಅಕ್ರಮ ಮರಳು ಸಂಗ್ರಹ; ಪ್ರಕರಣ ದಾಖಲು

Karkala: ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹ*ತ್ಯೆ

Karkala: ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹ*ತ್ಯೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.