ಕರಾವಳಿಗೆ ಕುಚ್ಚಲಕ್ಕಿ ಪೂರೈಕೆ ಮನವಿಗೆ ಸಿಕ್ಕಿಲ್ಲ ಮನ್ನಣೆ
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ
Team Udayavani, Jun 20, 2020, 5:08 AM IST
ಉಡುಪಿ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಅವಿಭಜಿತ ದ.ಕ. ಜಿಲ್ಲೆಗೆ ಕೆಂಪು ಕುಚ್ಚಲಕ್ಕಿ ವಿತರಿಸಬೇಕು ಎನ್ನುವ ಹಲವು ವರ್ಷಗಳ ಬೇಡಿಕೆ ಕೇವಲ ಕಾಗದಕ್ಕೆ ಸೀಮಿತವಾಗಿ ಉಳಿದುಕೊಂಡಿದೆ.
ಹಲವು ವರ್ಷಗಳ ಬೇಡಿಕೆ?
ಅವಳಿ ಜಿಲ್ಲೆಯ ಆಹಾರ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯಿಂದ ಸರಕಾರಕ್ಕೆ ಅನೇಕ ವರ್ಷಗಳಿಂದ ಕುಚ್ಚಲಕ್ಕಿ ನೀಡುವಂತೆ ಮನವಿ ನೀಡುತ್ತಲೇ ಇದ್ದರು. ಆದರೆ ಇಲ್ಲಿಯವರೆಗೂ ಈ ಬೇಡಿಕೆ ಈಡೇರಿಲ್ಲ.ಶೇ. 80ರಷ್ಟು ಮಂದಿ ಅನ್ನಕ್ಕೆ ಕುಚ್ಚಲಕ್ಕಿ ಹೆಚ್ಚಾಗಿ ಬಳಸುತ್ತಾರೆ. ಪ್ರಸ್ತುತ ಜಿಲ್ಲೆಯಲ್ಲಿ ಬೆಳ್ತಿಗೆ ಹಾಗೂ ಬಿಳಿ ಕುಚ್ಚಲಕ್ಕಿ, ಗೋಧಿಯನ್ನು ವಿತರಿಸಲಾಗುತ್ತಿದೆ.
ಕೆಂಪಕ್ಕಿ ಕೊರತೆ
ಸರಕಾರ ಕುಚ್ಚಲಕ್ಕಿ ನೀಡಲು ಸಿದ್ಧವಿದೆ. ಆದರೆ ಅಗತ್ಯವಿರುವಷ್ಟು ಪ್ರಮಾಣದ ಕುಚ್ಚಲಕ್ಕಿ ಲಭ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಬೆಳೆಸಲಾಗುತ್ತಿ ರುವ ಕುಚ್ಚಲಕ್ಕಿ ಇಲ್ಲಿನವರ ಬಳಕೆಗೆ ಸಾಕಾಗುತ್ತಿದೆ. ಪಡಿತರ ವಿತರಣೆಗೆ ಅಗತ್ಯವಿರುವಷ್ಟು ಪ್ರಮಾಣದ ಇದು ಉತ್ಪತ್ತಿಯಾಗುತ್ತಿಲ್ಲ. 5 ವರ್ಷಗಳ ಹಿಂದೊಮ್ಮೆ ಆಂಧ್ರದಿಂದ ಆಮದು ಮಾಡಿಕೊಂಡು ಕುಚ್ಚಲಕ್ಕಿಯನ್ನು ವಿತರಿಸಲಾಗಿತ್ತು. ಆದರೂ ರುಚಿಯಲ್ಲಿ ಬದಲಾವಣೆಯಾದ ಹಿನ್ನೆಲೆಯಲ್ಲಿ ಈ ಆಮದು ಪ್ರಕ್ರಿಯೆಯನ್ನು ನಿಲ್ಲಿಸಲಾಗಿತ್ತು.
ಉಪಯೋಗಕ್ಕೆ ಬಾರದ ಅಕ್ಕಿ
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಅವಿಭಜಿತ ದ.ಕ. ಜಿಲ್ಲೆಗೆ ತಿಂಗಳಿಗೆ ಸಾವಿರಾರು ಕ್ವಿಂಟಾಲ್ ಅಕ್ಕಿ ಬಿಡುಗಡೆಯಾಗುತ್ತಿದೆ. ಅದರಲ್ಲಿ ಕರಾವಳಿಯ ಜನರು ಶೇ. 10ರಷ್ಟನ್ನು ಉಪಾಹಾರ, ಇತರ ಖಾದ್ಯ ಮಾಡಲು ಬಳಸುತ್ತಾರೆ. ಜಿಲ್ಲೆಯ ಶೇ.80ರಷ್ಟು ಜನರೂ ಆರೋಗ್ಯದ ದೃಷ್ಟಿಯಿಂದ ಹೆಚ್ಚಾಗಿ ಕುಚ್ಚಲಕ್ಕಿಗೆ ಅವಲಂಬಿತರು. ಬೆಳ್ತಿಗೆ ಅಕ್ಕಿ ಊಟ ಮಾಡಲು ಉಪಯೋಗಿಸದವರು ಮಾರಾಟ ಮಾಡುತ್ತಿದ್ದಾರೆ. ಅದರಿಂದ ಬಂದ ಹಣದಿಂದ ಕುಚ್ಚಲಕ್ಕಿಯನ್ನು ಖರೀದಿಸು ವುದೂ ಇದೆ.
ಉಚಿತ ಅಕ್ಕಿ ವಿತರಣೆ
ಬಡ ಕುಟುಂಬಗಳು ಯಾರೂ ಹಸಿವಿನಿಂದ ಬಳಲಬಾರದು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ನಿರ್ದಿಷ್ಟ ಬಿಪಿಎಲ್ ಕಾರ್ಡ್‌ದಾರಿಗೆ 3 ರೂ. ದರದಲ್ಲಿ ರಾಜ್ಯ ಸರಕಾರಕ್ಕೆ ನೀಡುತ್ತದೆ. ರಾಜ್ಯ ಸರಕಾರ ಈ 3 ರೂ.ಗಳನ್ನು ತಾನೇ ಭರಿಸಿ ಉಚಿತವಾಗಿ ವಿತರಿಸುತ್ತಿದೆ. ಬಾಕಿ ಉಳಿದ ಕಾರ್ಡ್‌ದಾರರಿಗೆ ರಾಜ್ಯ ಸರಕಾರ ಓಪನ್ ಬಿಡ್ ಮೂಲಕ ಅಕ್ಕಿ ಖರೀದಿಸಿ ವಿತರಿಸುತ್ತದೆ. ಒಂದು ಕೆ.ಜಿ. ಅಕ್ಕಿಗೆ ಸುಮಾರು 30 ರೂ. ವರೆಗೆ ವೆಚ್ಚ ತಗಲುತ್ತದೆ. ಉಡುಪಿ ಜಿಲ್ಲೆಯಲ್ಲಿ ಪಡಿತರ ಅಕ್ರಮ ವ್ಯವಹಾರದ ಎರಡು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ?
2.99 ಲಕ್ಷ ಕಾರ್ಡ್‌ದಾರರು
ಉಡುಪಿ ಜಿಲ್ಲೆಯ 2,99,779 ಕಾರ್ಡ್‌ದಾರಿಗೆ ಗರಿಬ್ ಕಲ್ಯಾಣ್ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಜೂನ್ ತಿಂಗಳಿಗೆ 84,000 ಕ್ವಿಂಟಾಲ್ ಅಕ್ಕಿ, ಗೋಧಿ 3,289 ಕ್ವಿಂಟಾಲ್., ತೊಗರಿ 3,821.7 ಕ್ವಿಂಟಾಲ್ ಬೇಳೆ ಬಿಡುಗಡೆಯಾಗಿದ್ದು, ಕಳೆದ 6 ದಿನಗಳಲ್ಲಿ 13,525 ಕಾರ್ಡ್‌ದಾರರು ತಮ್ಮ ಪಾಲಿನ ರೇಷನ್ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ 1,64,145 ಬಿಪಿಲ್ ಕಾರ್ಡ್,28,625 ಅಂತ್ಯೋದಯ ಕಾರ್ಡ್, 1,10,000 ಎಪಿಎಲ್ ಕಾರ್ಡ್‌ಗಳಿದ್ದು, ಈ ಬಾರಿ ಎಪಿಎಲ್ ಕಾರ್ಡ್‌ನಲ್ಲಿ ಪಡಿತರ ಪಡೆಯಲು ನೋಂದಾಯಿಸಿದ
ಕಾರ್ಡ್‌ದಾರರಿಗೆ ಅಕ್ಕಿ ಬಿಡುಗಡೆಯಾಗಿದೆ.
ಜೂ. 25ರ ಒಳಗೆ ಪಡಿತರ ಪಡೆಯಿರಿ
ಜಿಲ್ಲೆಯ ಪಡಿತರ ಚೀಟಿ ದಾರರು ಜೂ. 25ರ ಒಳಗೆ ಪಡಿತರ ಪಡೆದುಕೊಳ್ಳಬೇಕು. ಈ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಮಗ್ರಿ ಪಡೆದುಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮನವಿ ಸಲ್ಲಿಸಲಾಗಿದೆ
ಕರಾವಳಿಗೆ ಬೆಳ್ತಿಗೆ ಬದಲಾಗಿ ಕೆಂಪಕ್ಕಿ ನೀಡುವಂತೆ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಹಿಂದೊಮ್ಮೆ ಆಂಧ್ರಪ್ರದೇಶದಿಂದ ಕೆಂಪಕ್ಕಿ ಆಮದು ಮಾಡಿಕೊಂಡು ವಿತ್ತರಿಸಲಾಗಿತ್ತು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಜೂನ್ ತಿಂಗಳ ಪಡಿತರ ವಿತರಣೆಯಾಗುತ್ತಿದೆ.
-ಗಜೇಂದ್ರ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಡಿಡಿ (ಪ್ರಭಾರ), ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.