Katpadi : ರಸ್ತೆ ಗುಂಡಿಗೆ ತೇಪೆ, ತಾತ್ಕಾಲಿಕ ಪರಿಹಾರ
Team Udayavani, Aug 6, 2024, 6:34 PM IST
ಕಟಪಾಡಿ: ಕಟಪಾಡಿ-ಶಿರ್ವ ಸಂಪರ್ಕದ ಮುಖ್ಯ ರಸ್ತೆಯ ಗುಂಡಿಗೆ ಸೋಮವಾರ ಸಂಜೆಯ ವೇಳೆಗೆ ಅಚ್ಚಡ ಕ್ರಾಸ್ ಬಳಿಯಲ್ಲಿ ಮೂರನೇ ಬಾರಿ ವೆಟ್‌ಮಿಕ್ಸ್ ಅಳವಡಿಸುವ ಮೂಲಕ ಅಪಾಯಕಾರಿ ಗುಂಡಿಗೆ ತಾತ್ಕಾಲಿಕ ಪರಿಹಾರವನ್ನು ಕಂಡುಕೊಳ್ಳಲಾಗಿದೆ.
ರಾ.ಹೆ. 66ರ ಕಟಪಾಡಿ ಜಂಕ್ಷನ್‌ನಿಂದ ಸುಮಾರು 200 ಮೀ. ದೂರದಲ್ಲಿ ಮತ್ತು ಅಚ್ಚಡ ಕ್ರಾಸ್ ಬಳಿಯ ಇಳಿಜಾರು ಪ್ರದೇಶದಲ್ಲಿ ಡಾಮರು ಕಿತ್ತು ಬಂದಿದ್ದು ಬಳಿಕ ನಡೆಸಿದ ಪ್ಯಾಚ್ ವರ್ಕ್ ಕೂಡಾ ಚೆಲ್ಲಾ ಪಿಲ್ಲಿಯಾಗಿ ದ್ವಿಚಕ್ರ ಮತ್ತು ತ್ರಿಚಕ್ರ ಹಾಗೂ ಲಘು ವಾಹನಗಳ ಸಂಚಾರಕ್ಕೆ ಸಂಚಕಾರವನ್ನು ತಂದೊಡ್ಡುತ್ತಿತ್ತು. ಈಗಾಗಲೇ ಹಲವು ದ್ವಿಚಕ್ರ ಸವಾರರು ಗುಂಡಿಯ ರುಚಿಯನ್ನು ಕಂಡಿದ್ದು, ಸಣ್ಣ ಪುಟ್ಟ ಅಪಾಯದಿಂದ ಪಾರಾಗಿದ್ದಾರೆ ಎಂದು ಸಾರ್ವಜನಿಕರು ಮಾಹಿತಿಯನ್ನು ನೀಡುತ್ತಿದ್ದು, ಸಂಭಾವ್ಯ ಮತ್ತಷ್ಟು ಅಪಾಯ ಸಂಭವಿಸುವ ಮುನ್ನವೇ ಈ ಹೊಂಡ-ಗುಂಡಿಗಳಿಗೆ ಶಾಶ್ವತ ಪರಿಹಾರ ಕೈಗೊಳ್ಳುವಂತೆ ಆಗ್ರಹದ ಬಗ್ಗೆ ಉದಯವಾಣಿ ಸುದಿನ ವರದಿಯನ್ನು ಪ್ರಕಟಿಸಿತ್ತು. ಇದೀಗ ಮಳೆಯು ತಾತ್ಕಾಲಿಕ ವಿರಾಮ ನೀಡಿದ್ದನ್ನು ಮನಗಂಡು ಲೋಕೋಪಯೋಗಿ ಇಲಾಖೆಯು ಸೋಮವಾರ ಸಂಜೆಯ ವೇಳೆಗೆ ಈ ಭಾಗದಲ್ಲಿ ವೆಟ್ ಮಿಕ್ಸ್ ಅಳವಡಿಸಿ ಮಾರಣಾಂತಿಕ ಹೊಂಡ ಗುಂಡಿಗೆ ತಾತ್ಕಾಲಿಕ ಪರಿಹಾರವನ್ನು ಕಂಡು ಕೊಂಡಿದ್ದಾರೆ. ಸವಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಶೀಘ್ರವೇ ಸುಸಜ್ಜಿತ ರಸ್ತೆ ಅಭಿವೃದ್ಧಿ
ಇಲ್ಲಿನ ಸಮಸ್ಯೆಯ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ. ಇದೀಗ ಮಳೆಗಾಲ ಆದುದರಿಂದ ತಾತ್ಕಾಲಿಕ ಪರಿಹಾರ ನಡೆಸಲಾಗಿದೆ. ಸಿಆರ್‌ಎಫ್ ಮೂಲಕ ವಿಶೇಷ ಅನುದಾನವನ್ನು ಹೊಂದಿಸಲಾಗಿದ್ದು, ಟೆಂಡರ್ ಹಂತದಲ್ಲಿದೆ. ಕಟಪಾಡಿ ಜಂಕ್ಷನ್ ಪ್ರದೇಶದಿಂದ ಆರಂಭಿಸಿ ಶಿರ್ವ ಸಂಪರ್ಕ ರಸ್ತೆಯ ಐದೂವರೆ ಕಿ.ಮೀ. ವ್ಯಾಪ್ತಿಯಲ್ಲಿ ಸುಸಜ್ಜಿತ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತದೆ.
-ಗುರ್ಮೆ ಸುರೇಶ್ ಶೆಟ್ಟಿ, ಶಾಸಕರು, ಕಾಪು ವಿಧಾನ ಸಭಾ ಕ್ಷೇತ್ರ
ಸಿಆರ್‌ಎಫ್ ಅನುದಾನದಡಿ ರಸ್ತೆ ಅಭಿವೃದ್ಧಿ ಕಾಮಗಾರಿ
ಈ ಭಾಗದ ರಸ್ತೆಯು ದುಸ್ಥಿತಿಯಲ್ಲಿ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಈಗಾಗಲೇ ಇಲ್ಲಿನ ಹಾಳಾದ ರಸ್ತೆಯ ಭಾಗಕ್ಕೆ ವೆಟ್ ಮಿಕ್ಸ್ ಅಳವಡಿಸಲಾಗಿತ್ತು. ವಿಪರೀತ ಮಳೆಯ ಕಾರಣದಿಂದ ಮತ್ತೆ ರಸ್ತೆಯು ದುಸ್ಥಿತಿ ಕಂಡಿತ್ತು. ಇದೀಗ ಮೂರನೇ ಬಾರಿಗೆ ವೆಟ್ ಮಿಕ್ಸ್ ಅಳವಡಿಸಲಾಗಿದೆ. ಶಾಶ್ವತ ಪರಿಹಾರವಾಗಿ ಸಿಆರ್‌ಎಫ್ ಅನುದಾನದಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಎನ್.ಎಚ್. ಇಲಾಖೆ ಕೈಗೊಳ್ಳಲಿದೆ. ಈ ಭಾಗದ ರಸ್ತೆಯು ದುಸ್ಥಿತಿಯಲ್ಲಿ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಈಗಾಗಲೇ ಇಲ್ಲಿನ ಹಾಳಾದ ರಸ್ತೆಯ ಭಾಗಕ್ಕೆ ವೆಟ್ ಮಿಕ್ಸ್ ಅಳವಡಿಸಲಾಗಿತ್ತು. ವಿಪರೀತ ಮಳೆಯ ಕಾರಣದಿಂದ ಮತ್ತೆ ರಸ್ತೆಯು ದುಸ್ಥಿತಿ ಕಂಡಿತ್ತು. ಇದೀಗ ಮೂರನೇ ಬಾರಿಗೆ ವೆಟ್ ಮಿಕ್ಸ್ ಅಳವಡಿಸಲಾಗಿದೆ. ಶಾಶ್ವತ ಪರಿಹಾರವಾಗಿ ಸಿಆರ್‌ಎಫ್ ಅನುದಾನದಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಎನ್.ಎಚ್. ಇಲಾಖೆ ಕೈಗೊಳ್ಳಲಿದೆ.
-ಸುಧೀರ್ ಕುಮಾರ್ ಕೆ., ಎ.ಇ.,ಲೋಕೋಪಯೋಗಿ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
AjekarCase: ತನಿಖೆ ದಿಕ್ಕು ತಪ್ಪುತ್ತಿದೆ: ದಿಲೀಪ್ ತಂದೆ ವಿರುದ್ದ ಬಾಲಕೃಷ್ಣ ಮನೆಯವರ ಆರೋಪ
MUST WATCH
ಹೊಸ ಸೇರ್ಪಡೆ
By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್.ಡಿ.ಕುಮಾರಸ್ವಾಮಿ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
Janapada Academy: ಚಿನ್ನಪ್ಪ ಗೌಡಗೆ ಜೀಶಂಪ, ಬೇವಿನಕಟ್ಟಿಗೆ ಗದ್ದಗಿಮಠ ತಜ್ಞ ಪ್ರಶಸ್ತಿ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.