ರಸ್ತೆ ಕಾಮಗಾರಿ ಪೂರ್ಣ: ಡಿವೈಡರ್ ಅಪೂರ್ಣ
Team Udayavani, Apr 11, 2019, 6:30 AM IST
ಕಾರ್ಕಳ: ನಗರದ ಹೃದಯಭಾಗ ಎಂಬಂತಿ ರುವ ಬಂಗ್ಲೆಗುಡ್ಡೆ ಜಂಕ್ಷನ್‌ನಿಂದ-ಭವಾನಿ ಮಿಲ್ ಜಂಕ್ಷನ್‌ವರೆಗಿನ ಚತುಷ್ಪಥ ರಸ್ತೆ ಕಾಮಗಾರಿ ಅಭಿವೃದ್ಧಿ ಗೊಂಡಿದ್ದರೂ ರಸ್ತೆ ಮಧ್ಯದ ಡಿವೈಡರ್ ಕಾಮಗಾರಿ ಅರೆಬರೆ ಯಾಗಿಯಾಗಿದ್ದು, ಸ್ಥಗಿತಗೊಂಡಂತಿದೆ.
ವೆಚ್ಚದಲ್ಲಿ ಎಣ್ಣೆಹೊಳೆಯಿಂದ ಪುಲ್ಕೆರಿ ಜಂಕ್ಷನ್‌ವರೆಗಿನ ಒಟ್ಟು 13 ಕಿ.ಮೀ. ರಸ್ತೆ ವಿಸ್ತರಣೆಯೊಂದಿಗೆ ಡಾಮರೀಕರಣವಾಗಿದ್ದು ಬಂಗ್ಲೆಗುಡ್ಡೆಯಿಂದ ಭವಾನಿ ಮಿಲ್ ವರೆಗಿನ ರಸ್ತೆಯನ್ನು ಚತುಷ್ಪಥಗೊಳಿಸಲಾಗಿತ್ತು.
ಡಾಮರೀಕರಣ ಕಾಮಗಾರಿ ಪೂರ್ಣಗೊಳಿಸಿ ತಿಂಗಳು ಹಲವು ಕಳೆದರೂ ಡಿವೈಡರ್ ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳು ಅರೆಬರೆಯಾಗಿವೆೆ. ಉಳಿದಂತೆ ಬೀದಿದೀಪ, ನಾಮಫಲಕ ಅಳವಡಿಕೆ ಕಾರ್ಯವೂ ಆಗಿಲ್ಲ.
ಸರ್ವಜ್ಞ ವೃತ್ತ
ಜಯಂತಿ ನಗರದಲ್ಲಿರುವ ಸರ್ವಜ್ಞ ವೃತ್ತ ಬಳಿ ಡಿವೈಡರ್ ಕಾಮಗಾರಿ ಪೂರ್ಣಗೊಳ್ಳದೇ ಅಪಾಯಕಾರಿ ಯಾಗಿದ್ದು, ವಾಹನ ಸವಾರರಿಗೆ ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಶೀಘ್ರವಾಗಿ ಕಾಮಗಾರಿ ಮುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸರ್ವಜ್ಞ ವೃತ್ತದ ಸಮೀಪದಲ್ಲೇ ಲೋಕೋಪಯೋಗಿ ಇಲಾಖೆ ಕಚೇರಿಯಿದೆ. ಹೀಗಿದ್ದರೂ ಡಿವೈಡರ್ ಕಾಮಗಾರಿ ಪೂರ್ಣವಾಗದಿರುವುದು ಇಲಾಖಾಧಿಕಾರಿಗಳ ಗಮನಕ್ಕೆ ಬಂದಿಲ್ಲವೇ ? ಅಥವಾ ಅಧಿಕಾರಿಗಳು ಕಂಡು ಕಾಣದಂತಿದ್ದಾರೆಯೇ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ನೋಟಿಸ್ ನೀಡಲಾಗಿದೆ
ಗುತ್ತಿಗೆದಾರರು ಕಾಮಗಾರಿ ಮುಗಿಸಿಕೊಡುವುದಾಗಿ ಹೇಳುತ್ತಿದ್ದರೂ ಪೂರ್ಣಗೊಳಿಸಿಲ್ಲ. ಹಾಗಾಗಿ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಎಚ್.ಕೆ. ಸುಂದರ, ಎಇಇ, ಲೋಕೋಪಯೋಗಿ ಇಲಾಖೆ, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.