ಬಾಂದು ಜವಾನರಿಗೆ 10 ತಿಂಗಳಿಂದ ವೇತನವಿಲ್ಲ


Team Udayavani, Mar 5, 2019, 4:21 AM IST

survey.jpg

ಮಣಿಪಾಲ: ಸುಡು ಬಿಸಿಲಿನಲ್ಲಿ ಚೈನ್‌ ಎಳೆದು ಭೂ ಮಾಪನ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ನೂರಾರು ಬಾಂದು ಜವಾನರು 10 ತಿಂಗಳಿಂದ ವೇತನವಿಲ್ಲದೆ ಪರದಾಡುತ್ತಿದ್ದಾರೆ.

ಕಂದಾಯ ಸಚಿವರು, ಭೂ ದಾಖಲೆಗಳ ಆಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಉಡುಪಿ ಜಿಲ್ಲೆಯ 41 ಮಂದಿ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳ ಬಾಂದು ಜವಾನರದ್ದೂ ಇದೇ ಪರಿಸ್ಥಿತಿ. ಭೂ ಮಾಪಕರೊಂದಿಗೆ ಸರ್ವೇ ಕಾರ್ಯಕ್ಕೆ ತೆರಳುವ ಬಾಂದು ಜವಾನರು ಅಳತೆಗೆ ಚೈನ್‌ ಹಿಡಿಯುವ ಕೆಲಸ ಮಾಡುತ್ತಾರೆ. ಇದರ ಜತೆಗೆ ಸರ್ವೇ ಸಂಬಂಧ ಅರ್ಜಿದಾರರಿಗೆ ಮತ್ತು ಸಂಬಂಧಪಟ್ಟವರಿಗೆ ತಿಳಿವಳಿಕೆ ಪತ್ರ ನೀಡುವುದು ಸಹಿತ ಇತರ ಕಚೇರಿ ಕೆಲಸಗಳನ್ನೂ ಮಾಡುತ್ತಾರೆ. ಬಾಂದು ಜವಾನರನ್ನು ಗುತ್ತಿಗೆ ಕಂಪೆನಿಗಳಿಂದ ನೇಮಿಸಲಾಗುತ್ತದೆ. ಒಪ್ಪಂದದ ಅವಧಿ ಇರುವ ವರೆಗೆ ಅವರು ನಿಗದಿತ ಜಿಲ್ಲೆಗಳಲ್ಲಿ ಭೂ ದಾಖಲೆಗಳ ಉಪ ನಿರ್ದೇಶಕರ ಅಧೀನದಲ್ಲಿ ತಾಲೂಕುಗಳಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. 

ಹಿಂದಿನ ವ್ಯವಸ್ಥೆ ಹೇಗೆ?
ಭೂಮಾಪನ ಇಲಾಖೆ ಆಯುಕ್ತಾಲಯದಿಂದ ಗುತ್ತಿಗೆದಾರ ಏಜಿನ್ಸಿಗಳಿಗೆ ಬಾಂದು ಜವಾನರ ವೇತನಾ ನುದಾನ ಬಿಡುಗಡೆಯಾಗುತ್ತಿತ್ತು. ಸಂಸ್ಥೆ ಯವರು ಇಎಸ್‌ಐ/ಪಿಎಫ್ ಹಾಗೂ ತಮ್ಮ ನಿರ್ವಹಣಾ ಶುಲ್ಕವನ್ನು ಕಡಿತ ಮಾಡಿ ವೇತನ ನೀಡುತ್ತಿದ್ದರು. ಆದರೆ ಈ ಸಂಸ್ಥೆಗಳು ವೇತನ ಬಟವಾಡೆ ಮಾಡುವಲ್ಲಿ ಅಸಮರ್ಪಕತೆ ತೋರಿದ್ದರ ಜತೆಗೆ ನಿಯಮಿತವಾಗಿ ನೀಡುತ್ತಿರಲಿಲ್ಲ. ಎಂಟು ತಿಂಗಳಿಂದ ಬಾಕಿ ಇರಿಸಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಆಯುಕ್ತಾಲಯವು, ಇಎಸ್‌ಐ/ಪಿಎಫ್ ಮೊತ್ತ ಮತ್ತು ಶೇ. 10 ನಿರ್ವಹಣಾ ಶುಲ್ಕವನ್ನು ಬಾಂದು ಜವಾನರ ವೇತನದಿಂದ ಕಡಿತಗೊಳಿಸಿ ಅದನ್ನು ಏಜೆನ್ಸಿಗೆ ಪಾವತಿ ಮಾಡಿ, ವೇತನವನ್ನು ನೇರವಾಗಿ ಬಾಂದು ಜವಾನರ ಖಾತೆಗೆ ಸಂದಾಯ ಮಾಡಲು ನಿರ್ಧರಿಸಿತು. ಈ ಕ್ರಮ ಡಿಸೆಂಬರ್‌ನಿಂದ ಅನುಷ್ಠಾನವಾಗಿದ್ದರೂ, 2 ತಿಂಗಳ ವೇತನ ಪಾವತಿಯಾಗಿಲ್ಲ. ಹಾಗಾಗಿ ಒಟ್ಟು 10 ತಿಂಗಳಿಂದ ಬಾಂದು ಜವಾನರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. 

ಇಎಸ್‌ಐ/ಪಿಎಫ್ ಪಾವತಿ ವ್ಯತ್ಯಯ
ಸರಕಾರದಿಂದ ಹಣ ಬಂದಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರ ಸಂಸ್ಥೆಯು ಬಾಂದು ಜವಾನರ ಇಎಸ್‌ಐ, ಪಿಎಫ್ ನಿಯಮಿತವಾಗಿ ಪಾವತಿಸುತ್ತಿಲ್ಲ. ಇದರಿಂದ ಕ್ಲೇಮಿಗೆ ಸಮಸ್ಯೆಯಾಗುತ್ತಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಓರ್ವ ಬಾಂದು ಜವಾನ ಸರ್ವೇ ವೇಳೆ ಬಿದ್ದು ಮೊಣಕಾಲು ಮುರಿದುಕೊಂಡಿದ್ದರು. ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಇಎಸ್‌ಐ ಪಾವತಿ ಸರಿಯಾಗಿ ಇಲ್ಲದ ಕಾರಣ ಕ್ಲೇಮಿಗೆ ತೊಂದರೆಯಾಗಿ ಏಜೆನ್ಸಿಗೆ ತೆರಳಿ ಪಾವತಿ ಮಾಡಿಸ ಬೇಕಾಯಿತು.  

ಬಾಂದು ಜವಾನರ ಹಾಜರಾತಿ ಅಪ್ಡೆಟ್‌ ಮಾಡಿ ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ವೇತನ ಬಾಕಿಯ ಮಾಹಿತಿಯನ್ನೂ ರವಾನಿಸಲಾಗಿದೆ. ಶೀಘ್ರ ಸಮಸ್ಯೆ ಬಗೆಹರಿಯಲಿದೆ. 
ಕುಸುಮಾಧರ್‌, ಡಿಡಿಎಲ್‌ಆರ್‌, ಉಡುಪಿ ಜಿಲ್ಲೆ

ಅಶ್ವಿ‌ನ್‌ ಲಾರೆನ್ಸ್‌ ಮೂಡುಬೆಳ್ಳೆ

ಟಾಪ್ ನ್ಯೂಸ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ

9

Udupi: ಬಿಎಸ್ಸೆನ್ನೆಲ್‌ ಟವರ್‌ ನಿರ್ವಹಣೆ ಹೊಣೆ ಪಂಚಾಯತ್‌ ಹೆಗಲಿಗೆ

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

8-uv-fusion

Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.